Site icon Vistara News

MS Dhoni | ದುಬೈನಲ್ಲಿ ಗೆಳೆಯನ ಬರ್ತ್‌ಡೇ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಧೋನಿ, ಪಾಂಡ್ಯ

dhoni dance

ದುಬೈ : ಐಪಿಎಲ್‌ ಆರಂಭದಲ್ಲಿ ಲೇಟ್‌ನೈಟ್‌ ಪಾರ್ಟಿಗಳು ಮಾಮೂಲಿಯಾಗಿತ್ತು. ಪಂದ್ಯ ಮುಗಿಸಿದ ಬಳಿಕ ಆಟಗಾರರು ಪಾರ್ಟಿಗೆ ತೆರಳಿ ಸಂಭ್ರಮಿಸುತ್ತಿದ್ದರು. ಆದರೆ, ಮಹೇಂದ್ರ ಸಿಂಗ್‌ ಧೋನಿ ಎಂದೂ ಇಂಥ ಪಾರ್ಟಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆಟ ಮುಗಿಸಿದವರೇ ನೇರವಾಗಿ ಹೋಟೆಲ್‌ಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು. ಭಾರತ ತಂಡ ಅವರ ನೇತೃತ್ವದಲ್ಲಿ ಎರಡು ಬಾರಿ ಐಸಿಸಿ ವಿಶ್ವ ಕಪ್‌ (ಟಿ೨೦ ಹಾಗೂ ಏಕ ದಿನ) ಗೆದ್ದಾಗಲೂ ಧೋನಿ ಪಾರ್ಟಿಗೆ ಹೋಗಿರಲಿಲ್ಲ. ಉಳಿದ ಆಟಗಾರರು ಮುಂಜಾನೆ ತನಕ ಪಾರ್ಟಿ ಮಾಡಿದ್ದರು. ಇದೀಗ ಧೋನಿ ಐಪಿಎಲ್‌ ಹೊರತುಪಡಿಸಿ ಉಳಿದೆಲ್ಲ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ಸಿಕ್ಕಾಪಟ್ಟೆ ಬಿಡುವಾಗಿದ್ದಾರೆ. ಹೀಗಾಗಿ ಶನಿವಾರ ದುಬೈಗೆ ತೆರಳಿ ಗೆಳೆಯರೊಬ್ಬರ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಅದರ ವಿಡಿಯೊ ಇದೀಗ ವೈರಲ್‌ ಅಗಿದೆ.

ಮಹೇಂದ್ರ ಸಿಂಗ್‌ ಧೋನಿಯ ಜತೆ ಟೀಮ್ ಇಂಡಿಯಾದ ಸ್ಟಾರ್‌ ಅಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಕೂಡ ಇದ್ದರು. ಅವರೂ ಧೋನಿಯೊಂದಿಗೆ ಸೇರಿಕೊಂಡು ಡಿಜೆ ಪಾರ್ಟಿಯಲ್ಲಿ ಸ್ಟೆಪ್‌ ಹಾಕಿದ್ದಾರೆ. ಧೋನಿ ಹಾಗೂ ಹಾರ್ದಿಕ್‌ Rapper ಬಾದ್‌ಷಾ ಅವರ ಹಾಡೊಂದಕ್ಕೆ ಜತೆಯಾಗಿ ಕುಣಿಯುತ್ತಿರುವುದು ಕಂಡು ಬಂದಿದೆ.

ಹಾರ್ದಿಕ್ ಪಾಂಡ್ಯ ಅವರು ನ್ಯೂಜಿಲ್ಯಾಂಡ್‌ ವಿರುದ್ಧದ ಟಿ೨೦ ಸರಣಿಯಲ್ಲಿ ಭಾರತ ತಂಡದ ನಾಯಕರಾಗಿದ್ದರು. ಸರಣಿಯನ್ನು ೨-೦ ಅಂತರಿಂದ ಗೆದ್ದ ಬಳಿಕ ತವರಿಗೆ ಮರಳಿದ್ದಾರೆ. ಏತನ್ಯಧ್ಮೆ ಅವರು ಧೋನಿಯೊಂದಿಗೆ ದುಬೈಗೆ ಹೋಗಿ ಬರ್ತ್‌ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

Rapper ಬಾದ್‌ಷಾ ಅವರು ಎಮ್‌ಎಸ್‌ ಧೋನಿಯ ಅಭಿಮಾನಿ. ಜತೆಗೆ ಕಿಶೋರ್‌ ಕುಮಾರ್‌ ಹಾಗೂ ಮುಖೇಶ್‌ ಅಭಿಮಾನಿಯೂ ಹೌದು. ಧೋನಿಗೆ ಹಳೆ ಹಾಡುಗಳೆಂದರೆ ಇಷ್ಟ ಎಂಬುದೂ ಅವರಿಗೆ ಗೊತ್ತಿದೆ. ಹೀಗಾಗಿ ಧೋನಿಗೆ ಇಷ್ಟವಾಗುವ ಹಾಡುಗಳನ್ನು ಹಾಡಿದ್ದಾರೆ. ಧೋನಿ ಡಾನ್ಸ್ ಜತೆಗೆ ಡಿಜೆ ಆಗಿಯೂ ಕೆಲಸ ಮಾಡಿದ್ದಾರೆ. ಧೋನಿಯ ಪತ್ನಿ ಸಾಕ್ಷಿ ಸಿಂಗ್ ಈ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ ವ| MS Dhoni | ಈ ಬಾರಿಯೂ ಸಿಎಸ್​ಕೆಗೆ ಮಹೇಂದ್ರ ಸಿಂಗ್​ ಧೋನಿಯೇ ಸಾರಥಿ; ಕೆ.ಎಸ್. ವಿಶ್ವನಾಥನ್

Exit mobile version