Site icon Vistara News

Dhoni Style Run Out | ಧೋನಿಯಂತೆ ರನೌಟ್​ ಮಾಡಿದ ನೇಪಾಳದ ವಿಕೆಟ್ ಕೀಪರ್; ವಿಡಿಯೊ ವೈರಲ್

dhoni style run out

ಮುಂಬಯಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(Dhoni Style Run Out) ಅವರ ವಿಕೆಟ್​ ಕೀಪಿಂಗ್​ ಚಾಣಾಕ್ಷತನಕ್ಕೆ ಮನಸೋಲದವರೇ ಇಲ್ಲ. ಇದೀಗ ಧೋನಿ ಶೈಲಿಯಂತೆ ನೇಪಾಳದ ವಿಕೆಟ್ ಕೀಪರ್ ಎದುರಾಳಿ ತಂಡದ ಆಟಗಾರನನ್ನು ರನೌಟ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನೇಪಾಳದ ಯುವ ವಿಕೆಟ್ ಕೀಪರ್ ಅರ್ಜುನ್ ಸೌದ್ ಪಂದ್ಯವೊಂದರಲ್ಲಿ ಧೋನಿ ಮಾದರಿಯ ರನೌಟ್ ಮಾಡಿದ್ದಾರೆ. ಬಿರಾಟ್‌ನಗರ ಮತ್ತು ಜನಕ್‌ಪುರ ರಾಯಲ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ವಿಕೆಟ್ ಕಡೆ ನೋಡದೆ ಫೀಲ್ಡರ್ ಎಸೆದ ಚೆಂಡನ್ನು ನೇರವಾಗಿ ವಿಕೆಟ್​ಗೆ ಹೊಡೆಯುವಲ್ಲಿ ಧೋನಿ ನಿಸ್ಸೀಮರಾಗಿದ್ದರು. ಹಲವು ಬಾರಿ ಧೋನಿ ಇಂತಹ ತಂತ್ರಗಾರಿಕೆಯನ್ನು ಉಪಯೋಗಿಸಿ ಎದುರಾಳಿ ಬ್ಯಾಟರ್​ಗಳನ್ನು ಔಟ್​ ಮಾಡಿದ್ದರು. ಇಂತಹದ್ದೇ ತಂತ್ರ ಬಳಸಿಕೊಂಡ ನೇಪಾಳದ ಕ್ರಿಕೆಟರ್​ ಈ ಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

ಧೋನಿಯಂತೆ ರನೌಟ್​ ಮಾಡಿದ ಅರ್ಜುನ್ ಸೌದ್​ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲ ಧೋನಿ ಅಭಿಮಾನಿಗಳು ಹಲವು ವರ್ಷದಳ ಬಳಿಕ ಧೋನಿಯನ್ನು ಕಂಡಾಂತಾಗಿದೆ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ IND VS PAK: ಭಾರತ ಮತ್ತು ಪಾಕಿಸ್ತಾನ ನಡುವಣ ಟೆಸ್ಟ್‌ ಕದನಕ್ಕೆ ವೇದಿಕೆ ಒದಗಿಸಲು ಮುಂದಾದ ಎಂಸಿಸಿ!

Exit mobile version