Site icon Vistara News

Dhoni Entertainment | ಧೋನಿ ಬ್ಯಾನರ್‌ನಡಿ ಮೊದಲ ಸಿನಿಮಾ ತಮಿಳಿನಲ್ಲಿ, ಪತ್ನಿ ಸಾಕ್ಷಿಯದ್ದೇ ಕತೆ

dhoni entertainment

ಚೆನ್ನೈ : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ ತಮಿಳುನಾಡು ಹಾಗೂ ಅಲ್ಲಿನ ಅಭಿಮಾನಿಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ಅವರು ಇತ್ತೀಚೆಗೆ ಘೋಷಿಸಲಾದ ಧೋನಿ ಎಂಟರ್‌ಟೈನ್‌ಮೆಂಟ್‌ ಮೂಲಕ ತಮಿಳು ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಪತ್ನಿ ಸಾಕ್ಷಿ ಸಿಂಗ್ ಧೋನಿ ಅವರು ಈ ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕರಾಗಿದ್ದು, ಅವರು ಸಿನಿಮಾ ನಿರ್ಮಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಅಥರ್ವ- ದಿ ಒರಿಜಿನ್ ಎಂಬ ಹೊಸ ಯುಗದ ಕಾದಂಬರಿ ಬರೆದಿರುವ ರಮೇಶ್‌ ತಮಿಳ್‌ಮಣಿ ಎಂಬುವರು ಈ ಚಲನಚಿತ್ರವನ್ನು ನಿರ್ದೇಶಿಸಲಿದ್ದಾರೆ. ಪಾತ್ರ ವರ್ಗವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಧೋನಿ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ಹೇಳಿದೆ.

ಇದೊಂದು ಕೌಟುಂಬಿಕ ಮನರಂಜನಾ ಸಿನಿಮಾವನ್ನು, ಸಾಕ್ಷಿ ಸಿಂಗ್ ಧೋನಿ ಅವರು ರೂಪ ಕೊಟ್ಟಿದ್ದಾರೆ. ಇದು ತಮಿಳಿನ ಅಚ್ಚುಮೆಚ್ಚಿನ ತಮಿಳು ಸಿನಿಮಾವಾಗಲಿದೆ ಎಂದು ತಮಿಳ್‌ಮಣಿ ಅವರು ಹೇಳಿದ್ದಾರೆ.

ಕೊರೊನಾ ಬಳಿಕ ಭಾಷೆಗೊಂದು ನಿರ್ಮಾಣ ಸಂಸ್ಥೆ ಎಂಬ ಕಲ್ಪನೆ ಇಲ್ಲ. ಭಾಷೆಯನ್ನು ಮೀರಿದ ಸಿನಿಮಾ ಸಂಸ್ಥೆ ನಿರ್ಮಾಣಗೊಂಡಿದೆ. ಹಿಂದಿ ಬೇರೆ ತಮಿಳು ಬೇರೆ ಎಂಬ ಭೇದವಿಲ್ಲ ಎಂಬುದಾಗಿ ಧೋನಿ ಎಂಟರ್‌ಟೈನ್‌ಮೆಂಟ್‌ನ ಉದ್ಯಮ ಮುಖ್ಯಸ್ಥ ವಿಕಾಸ್‌ ಹಸಿಜಾ ಅವರು ಹೇಳಿದ್ದಾರೆ.

ಇದನ್ನೂ ಓದಿ | IND vs SA | ಕ್ಯಾಪ್ಟನ್‌ ಕೂಲ್‌ ಮಹೇಂದ್ರ ಸಿಂಗ್‌ ಧೋನಿಯ ದಾಖಲೆಯನ್ನು ಮುರಿದ ಹಿಟ್ಟರ್‌ ರೋಹಿತ್‌!

Exit mobile version