ರಾಜ್ಕೋಟ್: ಇಂಗ್ಲೆಂಡ್ ವಿರುದ್ಧದ(IND vs ENG 3rd Test) ಮೂರನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆಯುವ ಮೂಲಕ 23 ವರ್ಷದ ವಿಕೆಟ್ ಕೀಪರ್ ಧ್ರುವ್ ಜುರೆಲ್(Dhruv Jurel) ಭಾರತ ಪರ ಟೆಸ್ಟ್ ಪದಾರ್ಪಣೆ ಮಾಡಿದರು. ದಿನೇಶ್ ಕಾರ್ತಿಕ್ ಅವರು ಕ್ಯಾಪ್ ನೀಡಿ ಜುರೆಲ್ಗೆ ಸ್ವಾಗತಿಸಿದರು. ಕೆ.ಎಸ್ ಭರತ್ ಅವರು ಸತತ ವೈಫಲ್ಯ ಕಂಡ ಕಾರಣ ಅವರನ್ನು ಈ ಪಂದ್ಯದಿಂದ ಕೈಬಿಡಲಾಯಿತು. ಈ ಅವಕಾಶ ಜುರೆಲ್ಗೆ ಲಭಿಸಿತು. ಧ್ರುವ ಜುರೆಲ್ ಅವರ ಕ್ರಿಕೆಟ್ ಜರ್ನಿಯ ಕುರಿತ ಕುತೂಹಲಕಾರಿ ಮಾಹಿತಿಯೊಂದು ಇಲ್ಲಿದೆ.
ಹೌದು, ಉತ್ತರ ಪ್ರದೇಶದಲ್ಲಿ ಜನಿಸಿದ ಧ್ರುವ್ ಜುರೆಲ್ ಯಾವುದೇ ಶ್ರೀಮಂತ ಕುಟುಂಬದಲ್ಲಿ ಅಥವಾ ಕ್ರಿಕೆಟ್ ಹಿನ್ನೆಲೆಯಿಂದ ಬಂದ ಪ್ರತಿಭೆಯಲ್ಲ. ಕಠಿಣ ಪರಿಶ್ರಮದ ಮೂಲಕವೇ ಬೆಳೆದು ಬಂದು ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಕ್ರಿಕೆಟ್ ಬದುಕಿನಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
Dhruv Jurel received his maiden India cap from DK. Go well, Dhruv! 👏🏻
— Sportskeeda (@Sportskeeda) February 15, 2024
📷: Jio Cinema#DhruvJurel #INDvENG #Cricket #India #Sportskeeda pic.twitter.com/FTDCrDDoBx
ತಂದೆ-ತಾಯಿಯ ತಾಗ್ಯದ ಫ್ರತಿಫಲ
ಧ್ರುವ್ ಜುರೆಲ್ ಅವರ ಕ್ರಿಕೆಟ್ ಕಥೆ ತುಂಬಾ ಸ್ಫೂರ್ತಿದಾಯಕವಾಗಿದೆ. ಬಡತನದ ಹಿನ್ನೆಲೆಯಿಂದ ಬಂದ ಧ್ರುವ್ ಜುರೆಲ್ ತಾವು ಪಟ್ಟ್ ಕಷ್ಟದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ, “ನಾನು ಆರ್ಮಿ ಸ್ಕೂಲ್‌ನಲ್ಲಿ ಓದುತ್ತಿದ್ದೆ. ರಜಾದಿನಗಳಲ್ಲಿ ನಾನು ಆಗ್ರಾದ ಏಕಲವ್ಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಶಿಬಿರಕ್ಕೆ ಸೇರುಲು ಮುಂದಾದೆ. ತಂದೆ ತಿಳಿಯದಂತೆ ಫಾರ್ಮ್ ಕೂಡ ಭರ್ತಿ ಮಾಡಿದೆ. ಈ ವಿಚಾರ ತಂದೆಗೆ ತಿಳಿದಾಗ ಅವರು ನನ್ನನ್ನು ಗದರಿಸಿದ್ದರು. ಆದರೆ, 800 ರೂ. ಸಾಲ ಮಾಡಿ ನನಗೆ ಬ್ಯಾಟ್ ಖರೀದಿಸಿ ಕೊಟ್ಟರು. ಇದೇ ವೇಳೆ ನಾನು ಕ್ರಿಕೆಟ್ ಕಿಟ್ಗಾಗಿ ಬೇಡಿಕೆ ಇಟ್ಟೆ. ಇದರ ಬೆಲೆ ಸುಮಾರು 7 ರಿಂದ 8 ಸಾವಿರ ಆಗಿತ್ತು. ಇಷ್ಟು ಹಣ ತನ್ನ ತಂದೆಯ ಬಳಿ ಇಲ್ಲದಾಗ ಅವರು ಅಸಾಧ್ಯ ಎಂದರು. ನಾನು ಬಾತ್ ರೂಮ್ನಲ್ಲಿ ಲಾಕ್ ಮಾಡಿ ಹೊರ ಬರುವುದಿಲ್ಲ ಎಂದು ಹಠಮಾಡಿ ಕುಳಿತಾಗ ತಾಯಿ ತನ್ನ ಚಿನ್ನದ ಸರವನ್ನು ಮಾರಿ ಕ್ರಿಕೆಟ್ ಕಿಟ್ ಕೊಡಿಸಿದರು” ಎಂದು ಜುರೆಲ್ ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡಿದ್ದರು.
ತಂದೆಯೇ ಹೀರೊ
ಬುಧವಾರ ಬಿಸಿಸಿಐ ನಡೆಸಿದ ವಿಶೇಚ ಸಂದರ್ಶನದಲ್ಲಿಯೂ ಧ್ರುವ್ ಜುರೆಲ್ ಅವರು ನನಗೆ ತಂದೆಯೇ ಹೀರೊ ಎಂದು ಹೇಳಿದ್ದರು. ನನ್ನ ಕ್ರಿಕೆಟ್ ಪದಾರ್ಪಣೆಯನ್ನು ಅವರಿಗೆ ಅರ್ಪಿಸುವುದಾಗಿ ಹೇಳಿದ್ದರು. ಸಿಕ್ಕ ಅವಕಾಶವನ್ನು ಎಡರೂ ಕೈಗಳಿಂದ ಬಾಚಿ ಉತ್ತಮ ಪ್ರದರ್ಶನ ತೋರಿದರೆ ಭಾರತ ಟೆಸ್ಟ್ ತಂಡದ ಖಾಯಂ ವಿಕೆಟ್ ಕೀಪರ್ ಆಗುವ ಎಲ್ಲ ಸುವರ್ಣಾವಕಾಶ ಜುರೆಲ್ ಮುಂದಿದೆ.
ಇದನ್ನೂ ಓದಿ IND vs ENG 3rd Test: ಟೆಸ್ಟ್ಗೆ ಸರ್ಫರಾಜ್ ಪದಾರ್ಪಣೆ; ಮೈದಾನದಲ್ಲೇ ತಂದೆ ಭಾವುಕ
Say hello to #TeamIndia's Test Debutants 👋
— BCCI (@BCCI) February 15, 2024
Congratulations Dhruv Jurel & Sarfaraz Khan 👏👏
Follow the match ▶️ https://t.co/FM0hVG5X8M#TeamIndia | #INDvENG | @IDFCFIRSTBank pic.twitter.com/OVPtvLXH0V
ಧೋನಿಯ ಅಪ್ಪಟ ಅಭಿಮಾನಿ
ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ (RR) ತಂಡದ ಪರ ಗಮನಾರ್ಹ ಪ್ರದರ್ಶನ ತೋರುವ ಮೂಲಕ ವಿಶ್ವ ಕ್ರಿಕೆಟ್‌ಗೆ ಪರಿಚಿತರಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಹೆಚ್ಚಾಗಿ ಆಡುತ್ತಿದ್ದ ಅವರು 13 ಪಂದ್ಯಗಳನ್ನು ಆಡಿ 152 ರನ್ ಬಾರಿಸಿದ್ದಾರೆ. ಜುರೆಲ್ ಟೀಮ್ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಐಪಿಎಲ್ ಆಡುವ ವೇಳೆ ಧೋನಿ ಅವರೊಂದಿಗೆ ಫೋಟೊ ಕೂಡ ತೆಗಿಸಿಕೊಂಡಿದ್ದ ಜುರೆಲ್ ತಾನು ಕೂಡ ಧೋನಿಯಂತೆ ವಿಕೆಟ್ ಕೀಪರ್ ಆಗಲು ಶ್ರಮಿಸುತ್ತೇನೆ ಎಂದಿದ್ದರು.
ಜುರೆಲ್ 2020ರಲ್ಲಿ ಭಾರತ ಪರ ಅಂಡರ್-19 ವಿಶ್ವಕಪ್ ಆಡಿದ್ದರು. ಈ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜುರೆಲ್, 89 ರನ್ ಗಳಿಸಿದ್ದರು. ಇದರಲ್ಲಿ ಒಂದು ಅರ್ಧಶತಕ ಒಳಗೊಂಡಿದೆ. 2022ರಲ್ಲಿ ಉತ್ತರ ಪ್ರದೇಶ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜುರೆಲ್ ಇದುವರೆಗೆ ಒಟ್ಟು 15 ಪಂದ್ಯಗಳಲ್ಲಿ 46.47ರ ಸರಾಸರಿಯಲ್ಲಿ 790 ರನ್ ಗಳಿಸಿದ್ದಾರೆ. ಒಂದು ಶತಕವನ್ನೂ ಸಿಡಿಸಿದ್ದಾರೆ.