Site icon Vistara News

Dhayn Chand Khel Ratna | ಟಿಟಿ ಪಟು ಶರತ್‌ ಕಮಾಲ್‌ಗೆ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ

dhyan chand khel ratna

ನವ ದೆಹಲಿ : ಭಾರತದ ಹಿರಿಯ ಟೇಬಲ್‌ ಟೆನಿಸ್‌ ಪಟು ಅಚಿಂತ್ಯ ಶರತ್‌ ಕಮಾಲ್‌ ಅವರು ೨೦೨೨ನೇ ಸಾಲಿನ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಗೆ (Dhayn Chand Khel Ratna) ಭಾಜನರಾಗಿದ್ದಾರೆ. ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಇಲಾಖೆಯ ಸೋಮವಾರ (ನವೆಂಬರ್‌ ೧೪) ಖೇಲ್‌ ರತ್ನ ಸೇರಿದಂತೆ ಉಳಿದೆಲ್ಲ ಕ್ರೀಡಾ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ನೆವೆಂಬರ್‌ ೩೦ರಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಗಳನ್ನು ವಿತರಣೆ ಮಾಡಲಿದ್ದಾರೆ.

ತಮಿಳುನಾಡು ಮೂಲದ ಶರತ್‌ ಕಮಾಲ್‌ ಅವರು ಬರ್ಮಿಂಗ್ಹಮ್‌ನಲ್ಲಿ ನಡೆದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಮೂರು ಚಿನ್ನ ಸೇರಿದಂತೆ ಒಟ್ಟಾರೆ ನಾಲ್ಕು ಪದಕಗಳನ್ನು ಗೆದ್ದಿದ್ದರು. ಜತೆಗೆ ಟಿಟಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದರು. ಹೀಗಾಗಿ ಅವರನ್ನು ದೇಶದ ಅತ್ಯನ್ನತ ಕ್ರೀಡಾ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಲಾಂಗ್‌ಜಂಪ್‌ ಪಟು ಎಲ್ದೋಸ್‌ ಪೌಲ್‌, ಸ್ಟೀಪಲ್‌ಚೇಸ್‌ ಸ್ಪರ್ಧಿ ಅವಿನಾಶ್‌ ಸಬ್ಲೆ, ಬ್ಯಾಡ್ಮಿಂಟನ್‌ ಪಟು ಲಕ್ಷ್ಯ ಸೇನ್‌, ಬಾಕ್ಸರ್‌ ನಿಖತ್‌ ಜರೀನ್‌ ಸೇರಿದಂತೆ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಸಾಧನೆ ಮಾಡಿದ್ದ ಹಲವರಿಗೆ ಅರ್ಜುನ ಪ್ರಶಸ್ತಿ ದೊರಕಿದೆ.

ಇದನ್ನೂ ಓದಿ | ರಾಜ್ಯೋತ್ಸವ ಪ್ರಶಸ್ತಿ | ಕೆ. ಶಿವನ್‌, ದತ್ತಣ್ಣ, ಅವಿನಾಶ್‌ ಸೇರಿ 67 ಸಾಧಕರಿಗೆ ರಾಜ್ಯೋತ್ಸವ; 10 ಸಂಸ್ಥೆಗಳಿಗೆ ʼಅಮೃತʼ ಗೌರವ

Exit mobile version