Site icon Vistara News

ಗೆಲುವನ್ನು ಇಸ್ರೇಲ್​ ಜನತೆಗೆ ಅರ್ಪಿಸಿದರೇ ಸಿರಾಜ್​? ಅಸಲಿ ಸತ್ಯ ಇಲ್ಲಿದೆ

Mohammed Siraj addresses the Press Conference after the India Pakistan game

ಅಹಮದಾಬಾದ್​: ಪಾಕಿಸ್ತಾನವನ್ನು(IND vs PAK) 7 ವಿಕೆಟ್​ಗಳಿಂದ ಬಗ್ಗು ಬಡಿದ ಭಾರತ ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಹ್ಯಾಟ್ರಿಕ್​ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಅಲ್ಲದೆ ಪಾಕಿಸ್ತಾನ ವಿರುದ್ಧ ವಿಶ್ವಕಪ್​ನಲ್ಲಿ 8-0 ಅಜೇಯ ಗೆಲುವಿನ ದಾಖಲೆಯನ್ನು ವಿಸ್ತರಿಸಿದೆ. ಪಂದ್ಯದ ಗೆಲುವನ್ನು ಮೊಹಮ್ಮದ್​ ಸಿರಾಜ್​(Mohammed Siraj) ಅವರು ಇಸ್ರೇಲ್(Israel) ಜನತೆಗೆ ಅರ್ಪಿಸಿದ್ದಾರೆ ಎಂದು ಎಲ್ಲಡೆ ಸುದ್ದಿಯಾಗಿದೆ. ಜತೆಗೆ ಸಾಮಾಜಿ ಜಾಲತಾಣದಲ್ಲಿಯೂ ಇದು ವೈರಲ್​ ಆಗಿದೆ.

ಪೋಸ್ಟ್​ನಲ್ಲಿ ಏನಿದೆ?

ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ ಅವರ ವಿಕೆಟ್​ ಕಿತ್ತ ಮತ್ತು ಈ ಸಂತಸವನ್ನು ಆಚರಿಸುತ್ತಿರುವ ಕೆಲ ಫೋಟೊಗಳನ್ನು ಹಾಕಿ “ಇದು ನಮ್ಮ ಇಸ್ರೇಲ್​ ಸಹೋದರ-ಸಹೋದರಿಯರಿಗೆ ಅರ್ಪಣೆ” ಎಂದು ಸಿರಾಜ್​ ಅವರ ಟ್ವಿಟರ್​ನಿಂದ ಪೋಸ್ಟ್​ ಮಾಡಲಾಗಿದೆ. ಈ ಟ್ವೀಟ್​ ಕಂಡ ಅನೇಕರು ಸಿರಾಜ್​ ನಡೆಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಸಿರಾಜ್​ಗೆ ಬೆಂಬಲ ಸೂಚಿಸಿದರೇ ಇನ್ನು ಕೆಲವರು ಇದನ್ನು ಖಂಡಿಸಿದ್ದಾರೆ.

ಇದನ್ನೂ ಓದಿ IND vs PAK: ಪಾಕ್​ ಆಟಗಾರ ರಿಜ್ವಾನ್​ಗೆ ತಿರುಗೇಟು ನೀಡಿದ ಸೋನು ನಿಗಮ್

ಸಿರಾಜ್​ ಹೆಸರು ಬಳಕೆ ಏಕೆ?

ಅಸಲಿಗೆ ಇದು ಮೊಹಮ್ಮದ್​ ಸಿರಾಜ್​ ಮಾಡಿದ ಟ್ವೀಟರ್​ ಪೋಸ್ಟ್​ ಅಲ್ಲ. ಅವರ ಹೆಸರಿನ ನಕಲಿ ಖಾತೆಯಿಂದ ಈ ಪೋಸ್ಟ್​ ಮಾಡಲಾಗಿದೆ. ಸಿರಾಜ್​ ಹೆಸರು ಬಳಸಿಕೊಂಡು ಈ ಟ್ವೀಟ್​ ಮಾಡಲು ಒಂದು ಪ್ರಮುಖ ಕಾರಣವಿದೆ. ಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕ್​ ಆಟಗಾರ ಮೊಹಮ್ಮದ್​ ರಿಜ್ವಾನ್​ ಅವರು ತಂಡದ ಗೆಲುವನ್ನು ಮತ್ತು ತಮ್ಮ ಶತಕವನ್ನು ಗಾಜಾದ ಸಹೋದರ-ಸಹೋದರಿಯರಿಗೆ ಅರ್ಪಣೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡುವ ಸಲುವಾಗಿ ಕೆಲ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಸಿರಾಜ್​ ಹೆಸರನ್ನು ಬಳಿಸಿಕೊಂಡು ಈ ಕೃತ್ಯ ಎಸಗಿದ್ದಾರೆ.

ನಕಲಿ ಹೆಸರಿನ ಖಾತೆಯ ಟ್ವೀಟ್​


ಸಿರಾಜ್​ ಅಸಲಿ ಟ್ವೀಟ್​ನಲ್ಲಿ ಏನಿದೆ?

ಸಿರಾಜ್​ ಅವರ ಬ್ಲ್ಯೂ ಟಿಕ್​ ಪಡೆದ ಅಧಿಕೃತ ಟ್ವೀಟರ್​ ಖಾತೆಯಲ್ಲಿ ಭಾರತದ ಸಂಭ್ರಮಾಚರಣೆಯ ಫೋಟೊ ಪೋಸ್ಟ್​ ಮಾಡಲಾಗಿದ್ದು ‘ಮೂರು ಪಂದ್ಯಗಳನ್ನು ಗೆದ್ದಿದೇವೆ. ನಮ್ಮ ಈ ಕೆಲಸವನ್ನು ಹೀಗೆ ಮುಂದುವರಿಸುತ್ತೇವೆ’ ಎಂದು ಟ್ವೀಟ್​ ಮಾಡಿದ್ದಾರೆ. ಇದಕ್ಕೂ ಹಿಂದಿನ ಹಿಂದಿನ ಪೋಸ್ಟ್​ನಲ್ಲಿ ರೋಹಿತ್​ ಶರ್ಮ ಅವರು ಅಫಘಾನಿಸ್ತಾನ ವಿರುದ್ಧ ಶತಕ ಫೋಟೊ ಹಾಕಿದ್ದಾರೆ. ಇಸ್ರೇಲ್​ ಬೆಂಬಲಿತ​ ಯಾವುದೇ ಪೋಸ್ಟ್​ ಇವರು ಮಾಡಿಲ್ಲ. ಈ ಪಂದ್ಯದಲ್ಲಿ ಸಿರಾಜ್​ 8 ಓವರ್​ ಎಸೆದು 50 ರನ್ ವೆಚ್ಚದಲ್ಲಿ 2 ವಿಕೆಟ್​ ಪಡೆದರು.

ತಿರುಗೇಟು ನೀಡಿದ ಸೋನು ನಿಗಮ್

ಪ್ರಸಿದ್ದ ಗಾಯಕ ಸೋನು ನಿಗಮ್(Sonu Nigam) ಅವರು ಪಾಕಿಸ್ತಾನ(IND vs PAK) ವಿರುದ್ಧದ ಟೀಮ್​ ಇಂಡಿಯಾದ ಅಭೂತ ಪೂರ್ವ ಗೆಲುವನ್ನು ಇಸ್ರೇಲ್‌ಗೆ(israel) ಅರ್ಪಿಸಿದ್ದಾರೆ. ಈ ಮೂಲಕ ಪಾಕ್​ ಆಟಗಾರ ಮೊಹಮ್ಮದ್ ರಿಜ್ವಾನ್​ಗೆ(mohammad rizwan) ತಿರುಗೇಟು ನೀಡಿದ್ದಾರೆ. ರಿಜ್ವಾನ್​ ಅವರು ಲಂಕಾ ವಿರುದ್ಧದ ಗೆಲುವನ್ನು ಮತ್ತು ತಮ್ಮ ಶತಕವನ್ನು ಗಾಜಾದ ಜನರಿಗೆ ಅರ್ಪಿಸಿದ್ದರು.

ಭಾರತ ತಂಡದ ಈ ಗೆಲುವನ್ನು ಸೋನು ನಿಗಮ್ ಅವರು ತನ್ನ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಇದು ಇಸ್ರೇಲ್​ಗೆ ಅರ್ಪಣೆ ಎಂದು ಬರೆದಿದ್ದಾರೆ. “ಈ ಗೆಲುವು ನನ್ನ ಇಸ್ರೇಲ್ ಸಹೋದರ-ಸಹೋದರಿಯರಿಗೆ ಅರ್ಪಣೆ” ಹೆಸರಿಗೆ ಎಂದು ಟ್ವೀಟ್ ಮಾಡಿದ್ದಾರೆ.

ಪಂದ್ಯ ಗೆದ್ದ ಭಾರತ

ನರೇಂದ್ರ ಮೋದಿ ಕ್ರಿಕೆಟ್​ ಸ್ಡೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

Exit mobile version