ಮುಂಬಯಿ: ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ(Virat Kohli) ಮಂಗಳವಾರ(ಫೆ.1) ಇನ್ನೂ ಅನ್ ಬಾಕ್ಸ್ ಮಾಡದ ಮೊಬೈಲ್ ಕಾಣೆಯಾಗಿದೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದೇ ವೇಳೆ ಜೊಮ್ಯಾಟೊ(Zomato) ಫುಡ್ ಡೆಲಿವರಿ ಆ್ಯಪ್ ನೀಡಿದ ಒಂದು ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಅವರು ಮಂಗಳವಾರ ತಮ್ಮ ಮೊಬೈಲ್ ಕಳೆದು ಹೋಗಿದೆ ಎಂದು ಟ್ವೀಟ್ ಮಾಡಿ ನಿಮಗೂ ಇಂತಹ ಅನುಭವ ಆಗಿದೆಯಾ? ಎಂದು ಫ್ಯಾನ್ಸ್ ಬಳಿ ಬೇಸರದಿಂದ ಕೇಳಿದ್ದರು. ಕೊಹ್ಲಿ ಬೇಸರದಿಂದ ಮಾಡಿದೆ ಟ್ವೀಟ್ಗೆ ಜೊಮ್ಯಾಟೊ (Zomato) ಒಂದು ಪರಿಹಾರವನ್ನು ನೀಡಿದೆ. ಮೊಬೈಲ್ ಕಳೆದುಕೊಂಡು ಬೇಸರದಲ್ಲಿರುವ ನೀವು ಅನುಷ್ಕಾ ಅತ್ತಿಗೆಯ ಮೊಬೈಲ್ನಲ್ಲಿರುವ ಜೊಮ್ಯಾಟೊ ಆ್ಯಪ್ನಿಂದ ಐಸ್ ಕ್ರೀಮ್ ಆರ್ಡರ್ ಮಾಡಿ. ಇದು ನಿಮ್ಮನ್ನು ಸ್ವಲ್ಪ ಮಟ್ಟಿಗೆ ಸಮಾಧಾನ ಮಾಡಬಹುದು ಎಂದು ತಮಾಷೆಯಾಗಿ ಸಲಹೆ ನೀಡಿದೆ. ಈ ಟ್ವಿಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೊಮ್ಯಾಟೊದ ಈ ಟ್ವೀಟ್ ಕಂಡ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಅನುಷ್ಕಾ ಅತ್ತಿಗೆಯ ಮೊಬೈಲ್ನಲ್ಲಿ ಜೊಮ್ಯಾಟೊ ಬದಲು ಸ್ವಿಗ್ಗಿ ಆ್ಯಪ್ (Swiggy) ಇದ್ದರೆ ಏನು ಮಾಡೋದು? ಎಂದು ಹಾಸ್ಯಮಯ ರೀಪ್ಲೆ ನೀಡಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನಾಡಲು ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಭಾರತ ಮತ್ತು ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಫೆ.9ಕ್ಕೆ ಆರಂಭವಾಗಲಿದೆ.