ನವ ದೆಹಲಿ : ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಒಲಿಂಪಿಯನ್ ದಿಲೀಪ್ ಟಿರ್ಕಿ ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಗೆ ಮೊದಲು ಉನ್ನತ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಇಬ್ಬರು ನಾಮಪತ್ರ ವಾಪಸ್ ಪಡೆದ ಕಾರಣ ಟಿರ್ಕಿ ಅವಿರೋಧವಾಗಿ ಆಯ್ಕೆಯಾದರು.
೧೫ ವರ್ಷಗಳ ಅಂತಾರಾಷ್ಟ್ರೀಯ ಹಾಕಿ ವೃತ್ತಿಯಲ್ಲಿ ಭಾರತ ತಂಡದ ಪರ ೪೧೨ ಪಂದ್ಯಗಳನ್ನು ಆಡಿ, ಗರಿಷ್ಠ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ ದಾಖಲೆ ಹೊಂದಿದ್ದಾರೆ ದಿಲೀಪ್ ಟಿರ್ಕಿ. ಗೆಲುವಿನ ಬಳಿಕ ಟ್ವೀಟ್ ಮಾಡಿರುವ ದಿಲೀಪ್ ಅವರು “ಹಾಕಿ ಇಂಡಿಯಾವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾನು ಸಿದ್ಧನಿದ್ದೇನೆ,” ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.
ಒಡಿಶಾದ ದಿಲೀಪ್ ಅವರು ಹಾಕಿ ಇಂಡಿಯಾದ ಅಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್ ೧೮ರಂದು ನಾಮಪತ್ರ ಸಲ್ಲಿಕೆ ಮಾಡಿದ್ದರು. ಅವರ ಜತೆಗೆ ಉತ್ತರ ಪ್ರದೇಶ ಹಾಕಿ ಸಂಸ್ಥೆ ಮುಖ್ಯಸ್ಥ ರಾಕೇಶ್ ಕಟ್ಯಾಲ್ ಹಾಗೂ ಜಾರ್ಖಂಡ್‌ನ ಭೋಲಾ ನಾಥ್ ಸಿಂಗ್ ಅವರೂ ಅರ್ಜಿ ಸಲ್ಲಿಕೆ ಮಾಡಿದ್ದರು. ಅವರಿಬ್ಬರು ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದಾರೆ.
ಹಾಕಿ ಇಂಡಿಯಾ ಪದಾಧಿಕಾರಿಗಳು
ದಿಲೀಪ್ ಟಿರ್ಕಿ (ಅಧ್ಯಕ್ಷ), ಅಸಿಮಾ ಅಲಿ, ಎಸ್‌ವಿಎಸ್ ಸುಬ್ರಹ್ಮಣ್ಯ (ಉಪಾಧ್ಯಕ್ಷರು), ಭೋನಾ ನಾಥ್ ಸಿಂಗ್ (ಕಾರ್ಯದರ್ಶಿ), ಶೇಖರ್ ಜೆ .ಮನೋಹರ್ (ಖಜಾಂಚಿ), ಎಮ್ ಎಸ್ ಅರತಿ ಸಿಂಗ್, ಸುನೀಲ್ ಮಲಿಕ್ (ಸಹ ಕಾರ್ಯದರ್ಶಿಗಳು).
ಕಾರ್ಯಕಾರಿ ಮಂಡಳಿ ಸದಸ್ಯರು
ಅರುಣ್ ಕುಮಾರ್ ಸಾರಸ್ವತ್, ಆಶ್ರಿತಾ ಲಾಕ್ರಾ, ಗುರುಪ್ರೀತ್ ಕೌರ್, ವಿ ಸುನೀಲ್ ಕುಮಾರ್, ತಪನ್ ಕುಮಾರ್ ದಾಸ್.
ಇದನ್ನೂ ಓದಿ |