Site icon Vistara News

Team India : ಕ್ರಿಕೆಟ್‌ ಅಕಾಡೆಮಿ ಆರಂಭಿಸಿದ ವೇಗದ ಬೌಲರ್‌ ನಟರಾಜನ್‌

T Natarajn

#image_title

ಚೆನ್ನೈ: ಭಾರತ ತಂಡದ ವೇಗದ (Team India) ಬೌಲರ್‌ ಟಿ ನಟರಾಜನ್ (T Natarajn) ತಮಿಳುನಾಡಿನ ಚಿನ್ನಪ್ಪಂಪಟ್ಟಿಯಲ್ಲಿ ಕ್ರಿಕೆಟ್ ಅಕಾಡೆಮಿ (Cricket Academy) ಆರಂಭಿಸಿದ್ದಾರೆ. ಭಾರತ ತಂಡದ ವಿಕೆಟ್‌ಕೀಪರ್‌ ಬ್ಯಾಟರ್‌ ದಿನೇಶ್ ಕಾರ್ತಿಕ್ ಸೋಮವಾರ ಅಕಾಡೆಮಿಯನ್ನು ಉದ್ಘಾಟಿಸಿದರು. ಎಡಗೈ ವೇಗಿ ಆರಂಭಿಸಿರುವ ಅಕಾಡೆಮಿಯನ್ನು ಉದ್ಘಾಟಿಸಿದ ಬಳಿಕ ಅಭಿನಂದನೆ ಸಲ್ಲಿಸುವ ನಾಲ್ಕು ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ದಿನೇಶ್‌ ಕಾರ್ತಿಕ್‌ (Dinesh Karthik). ಯುವ ಮತ್ತು ಉದಯೋನ್ಮುಖ ಕ್ರಿಕೆಟಿಗರಿಗಾಗಿ ತಮ್ಮ ಊರಿನಲ್ಲಿ ಅಕಾಡೆಮಿ ಪ್ರಾರಂಭಿಸುವುದು ನಟರಾಜನ್ ಅವರ ಕನಸಾಗಿತ್ತು. ಅಂತೆಯೇ ಅವರು ತಮ್ಮ ಕನಸನ್ನು ಪೂರ್ಣಗೊಳಿಸಿದ್ದಾರೆ.

ತಮ್ಮ ಸ್ನೇಹಿತ ಅಕಾಡೆಮಿಯನ್ನು ಪ್ರಾರಂಭಿಸಿದ್ದನ್ನು ದಿನೇಶ್‌ ಕಾರ್ತಿಕ್ ಹೊಗಳಿದ್ದಾರೆ. “ಚಿನ್ನಪ್ಪಂಪಟ್ಟಿ ಮತ್ತು ಸುತ್ತಮುತ್ತಲಿನ ಹಲವಾರು ಯುವ ಪ್ರತಿಭೆಗಳಿಗೆ ಕ್ರಿಕೆಟ್‌ ಕನಸು ನನಸಾಗಿಸಲು ನಟರಾಜನ್ ಕ್ರಿಕೆಟ್ ಅಕಾಡೆಮಿಯ ಉದ್ಘಾಟಿಸಿದೆ. ಇದು ನನಗೆ ಅತ್ಯಂತ ಸಂಭ್ರಮದ ಸಂಗತಿ. ಈ ಕನಸಿಗೆ ಜೀವ ತುಂಬಿದ್ದಕ್ಕಾಗಿ ನನ್ನ ಸ್ನೇಹಿತ ನಟರಾಜನ್ ಅವರಿಗೆ ಅಭಿನಂದನೆಗಳು ಎಂದು ದಿನೇಶ್‌ ಕಾರ್ತಿಕ್‌ ಬರೆದುಕೊಂಡಿದ್ದಾರೆ.

ಕ್ರಿಕೆಟ್ ಅಕಾಡೆಮಿಯನ್ನು ತೆರೆದಿದದ ನಟರಾಜನ್ ಅವರಿಗೆ ನೆಟ್ಟಿಗರು ಅಭಿನಂದನೆ ಸಲ್ಲಿಸಿದ್ದಾರೆ. ಬಳಕೆದಾರರೊಬ್ಬರು ‘ನಟರಾಜನ್ ಬಗ್ಗೆ ಉತ್ತಮ ಚಿಂತನೆ’ ಎಂದು ಬರೆದಿದ್ದಾರೆ. ಮತ್ತೊಬ್ಬರು ಡಿಕೆ ಮತ್ತು ನಟ್ಟು ಅವರಿಗೆ ಅಭಿನಂದನೆಗಳು ಎಂದು ಕಾಮೆಂಟ್ ಮಾಡಿದ್ದಾರೆ. ವಾಸ್ತವದಲ್ಲಿ ದಿನೇಶ್‌ ಕಾರ್ತಿಕ್ ಆಸಸ್‌ ಸರಣಿಯ ಕಾಮೆಂಟರಿ ವಿಭಾಗದಲ್ಲಿ ಇದ್ದರು. ಗೆಳೆಯನಿಗಾಗಿ ಅವರು ಅಲ್ಲಿಂದ ಹಾರಿ ವಾಪಸ್‌ ಬಂದಿದ್ದರು. ನಟರಾಜನ್‌ ಅವರ ದಿನೇಶ್‌ ಕಾರ್ತಿಕ್‌ ಅವರ ಬೆಂಬಲಕ್ಕೆ ಧನ್ಯವಾದ ಸೂಚಿಸಿದ್ದಾರೆ.

ಕಾರ್ತಿಕ್ ಮಾತ್ರವಲ್ಲದೆ ಹಲವಾರು ಪ್ರಮುಖ ವ್ಯಕ್ತಿಗಳು ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಸಿಗಮಣಿ ಮತ್ತು ಸೇಲಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಆರ್ ಶಿವಕುಮಾರ್ ನಟರಾಜನ್ ಹಾಜರಿದ್ದರು. ಯೋಗಿ ಬಾಬು, ಪುಗಾಜ್ ಮತ್ತು ಗೋಪಿ ಅವರಂತಹ ಜನಪ್ರಿಯ ಚಲನಚಿತ್ರ ನಟರು ಭಾಗವಹಿಸಿದ್ದರು. ಟಿಎನ್ಪಿಎಲ್ ಆಟಗಾರರು ಸಹ ಹಾಜರಿದ್ದರು.

ಎಸ್ಆರ್ಹೆಚ್ ಬ್ಯಾಟಿಂಗ್ ಕೋಚ್ ಹೇಮಂಗ್ ಬದಾನಿ ಅವರು ಕ್ರಿಕೆಟ್ ಅಕಾಡೆಮಿಯನ್ನು ತೆರೆದಿದ್ದಕ್ಕಾಗಿ ನಟರಾಜನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೃತ್ಪೂರ್ವಕ ಅಭಿನಂದನೆಗಳು ನಟ್ಟು. ನಿಮ್ಮದು ಸ್ಫೂರ್ತಿದಾಯಕ ಕತೆ. ಇಂದು ನೀವು ತೆಗೆದುಕೊಂಡಿರುವ ನಿರ್ಧಾರಗಳು ಪ್ರತಿಭಾವಂತ ಆಟಗಾರರನ್ನು ಪ್ರೇರಣೆ ನೀಡಲಿದೆ” ಎಂದು ಬದಾನಿ ಟ್ವೀಟ್ ಮಾಡಿದ್ದಾರೆ.

ಯುವ ಪ್ರತಿಭೆಗಳನ್ನು ಗುರುತಿಸಿ ಕ್ರಿಕೆಟ್ ಅಕಾಡೆಮಿ ಮೂಲಕ ಕೋಚಿಂಗ್ ನೀಡುವುದಾಗಿ ನಟರಾಜನ್ ಹೇಳಿದ್ದಾರೆ.

Exit mobile version