ಬೆಂಗಳೂರು: ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ಪಂದ್ಯ ಬಂತೆಂದರೆ ಸಾಕು ಕ್ರಿಕೆಟ್ ಪ್ರೇಮಿಗಳು ತಮ್ಮ ಎಲ್ಲ ಕೆಲಸವನ್ನು ಬದಿಗಿಟ್ಟು ಈ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸುತ್ತಾರೆ. ಶನಿವಾರ ನಡೆದ ಉಭಯ ತಂಡಗಳ ಮಧ್ಯೆಯ ಪಂದ್ಯ ಡಿಜಿಟಲ್ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ.
ಐಪಿಎಲ್ ದಾಖಲೆ ಪತನ
ಡಿಜಿಟಲ್ ಮಾಧ್ಯಮದ ಮೂಲಕ ಕ್ರಿಕೆಟ್ ಪಂದ್ಯವೊಂದನ್ನು ಅತ್ಯಧಿಕ ಮಂದಿ ವೀಕ್ಷಣೆ ಮಾಡಿದ ದಾಖಲೆ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದ ಹೆಸರಿನಲ್ಲಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಅಮಹದಾಬಾದ್ನಲ್ಲೇ ನಡೆದಿದ್ದ ಪ್ರಶಸ್ತಿ ಕಾಳಗವನ್ನು ಜಿಯೋ ಸಿನಿಮಾದಲ್ಲಿ 3.2 ಕೋಟಿ ಮಂದಿ ವೀಕ್ಷಿಸಿದ್ದರು. ಆದರೆ ಈ ದಾಖಲೆ ಈಗ ಪತನಗೊಂಡಿದೆ.
ಇದನ್ನೂ ಓದಿ IND vs PAK: ಕ್ರಿಕೆಟ್ ಪಂದ್ಯ ಗೆಲುವು; ದೇಶಾದ್ಯಂತ ಪಾಕ್ ವಿರುದ್ಧ ಯುದ್ಧ ಗೆದ್ದ ಸಂಭ್ರಮ!
ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವನ್ನು ಡಿಸ್ನಿ ಹಾಟ್ ಸ್ಟಾರ್ನಲ್ಲಿ 3.5 ಕೋಟಿ ಮಂದಿ ವೀಕ್ಷಿಸಿ ಸಾರ್ವಕಾಲಿ ದಾಖಲೆ ಬರೆದಿದೆ. ಒಂದೊಮ್ಮೆ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಅಥವಾ ಫೈನಲ್ನಲ್ಲಿ ಮುಖಾಮುಖಿಯಾದರೆ ಈ ಸಂಖ್ಯೆ ದುಪಟ್ಟಾದರೂ ಅಚ್ಚರಿ ಇಲ್ಲ.
ಇದನ್ನೂ ಓದಿ IND vs PAK: ಗೆಳೆಯ ಔಟಾಗಬಾರದೆಂದು ತಾನೇ ರನೌಟ್ ಆಗಲು ಮುಂದಾದ ಕೊಹ್ಲಿ
ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚಿದ್ದರು. ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೊರಗಿನವರೇ ಇದ್ದರು ಎಂದು ವರದಿಯೊಂದು ಹೇಳಿದೆ. ದೂರದ ಅಮೆರಿಕ, ನ್ಯೂಜಿಲ್ಯಾಂಡ್, ದುಬೈ, ಬ್ರಿಟನ್ ಸೇರಿ ಇನ್ನೂ ಹಲವು ದೇಶಗಳಿಂದ ಭಾರತೀಯ ಅಭಿಮಾನಿಗಳು ಈ ಪಂದ್ಯ ನೋಡಲು ಆಗಮಿಸಿದ್ದರು ಎನ್ನಲಾಗಿದೆ.
ಭಾರತಕ್ಕೆ 7 ವಿಕೆಟ್ ಜಯ
ನರೇಂದ್ರ ಮೋದಿ ಕ್ರಿಕೆಟ್ ಸ್ಡೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ ಗೆಲುವನ್ನು ಇಸ್ರೇಲ್ ಜನತೆಗೆ ಅರ್ಪಿಸಿದರೇ ಸಿರಾಜ್? ಅಸಲಿ ಸತ್ಯ ಇಲ್ಲಿದೆ
ನಾಯಕ ರೋಹಿತ್ ಶರ್ಮ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಗಮನಸೆಳೆದರು. 63 ಎಸೆತಗಳಲ್ಲಿ 86 ರನ್ ಗಳಿಸಿ ನೆರೆದಿದ್ದ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಅವರ ಸೊಗಸಾದ ಈ ಇನಿಂಗ್ಸ್ನಲ್ಲಿ ಬರೋಬ್ಬರಿ 6 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಯಿತು.
ಸಿಕ್ಸರ್ ಮೂಲಕ ದಾಖಲೆ ಬರೆದ ರೋಹಿತ್
ಪಾಕ್ ವಿರುದ್ಧ 6 ಸಿಕ್ಸರ್ ಬಾರಿಸಿದ ರೋಹಿತ್ ಶರ್ಮ ಅವರು ಏಕದಿನ ಕ್ರಿಕೆಟ್‌ನಲ್ಲಿ 300 ಸಿಕ್ಸರ್ ಮೈಲಿಗಲ್ಲು ತಲುಪಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ 3ನೇ ಬ್ಯಾಟರ್ ಎನಿಸಿದರು. ಪಾಕಿಸ್ತಾನದ ಶಾಹಿದ್ ಅಫ್ರಿದಿ 351 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್ 331 ಸಿಕ್ಸರ್‌ನೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಸದ್ಯ ರೋಹಿತ್ 303 ಸಿಕ್ಸರ್‌ಗಳೊಂದಿಗೆ ರೋಹಿತ್ 3ನೇ ಸ್ಥಾನದಲ್ಲಿದ್ದಾರೆ. ಆದರೆ ಅಂತರಾಷ್ಟ್ರೀಯ ಕ್ರಿಕೆಟ್ನ ಮೂರು ಮಾದರಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಅಗ್ರಸ್ಥಾನ ಪಡೆದಿದ್ದಾರೆ.