ಮುಂಬಯಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿಶ್ವ ಕ್ರಿಕೆಟ್‌ನ ಅತ್ಯಂತ ಬಲಿಷ್ಠ ಸಂಸ್ಥೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ೨೦೨೧ರಲ್ಲಿ ಬಿಸಿಸಿಐ 3730 ಕೋಟಿ ರೂಪಾಯಿ ಆದಾಯ (BCCI Revenue) ಗಳಿಸಿದೆ ಎಂಬುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಅದರ ಪ್ರಕಾರ ಬಿಸಿಸಿಐಗೆ ವಿಶ್ವದ ಯಾವುದೇ ಕ್ರಿಕೆಟ್ ಸಂಸ್ಥೆಗಳು ಸರಿಸಮಾನವಾಗಿಲ್ಲ.
ಚಿನ್ನದ ಮೊಟ್ಟೆಯಿಡುವ ಕೋಳಿಯಂತಿರುವ ಐಪಿಎಲ್ ಹಾಗೂ ಇನ್ನಿತರ ಕ್ರಿಕೆಟ್ ಯೋಜನೆಗಳ ಮೂಲಕ ಬಿಸಿಸಿಐಗೆ ಧಾರಳವಾಗಿ ಆದಾಯ ಹರಿದು ಬರುತ್ತಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಶ್ರೀಮಂತವಾಗುತ್ತಾ ಹೋಗುತ್ತಿದೆ. ಅಂತೆಯೇ ೨೦೨೧ರಲ್ಲಿ ಭರ್ಜರಿ ಗಳಿಕೆ ಮಾಡಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಬಿಸಿಸಿಐಗಿಂತ ಕೆಳಗಿನ ಸ್ಥಾನದಲ್ಲಿದ್ದು, ಒಟ್ಟಾರೆ 2843 ಕೋಟಿ ರೂಪಾಯಿ ಆದಾಯ ಗಳಿಸಿದೆ. ಅದರೆ, ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಡುವಿನ ಅಂತರ ಶೇ ೨೩.
ಇಂಗ್ಲೆಂಡ್ ಆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ 2135 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ೮೧೧ ಕೋಟಿ ರೂಪಾಯಿ ಮಾತ್ರ ಗಳಿಸುತ್ತಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಆದಾಯ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಮೀಪವಿದೆ. ಒಟ್ಟಾರೆ ೮೦೨ ಕೋಟಿ ರೂಪಾಯಿ ಗಳಿಸಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ೪೮೫ ಕೋಟಿ ರೂಪಾಯಿ ಗಳಿಸುತ್ತಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ೨೧೦ ಕೋಟಿ ರೂಪಾಯಿ ಗಳಿಸುತ್ತಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆಯ ಗಳಿಕೆ ೧೧೬ ಕೋಟಿ ರೂಪಾಯಿ. ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆ ೧೧೩ ಕೋಟಿ ರೂಪಾಯಿ ಹಾಗೂ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ೧೦೦ ಕೋಟಿ ರೂಪಾಯಿ ಗಳಿಸುತ್ತಿದೆ.
ಆದಾಯ ವಿವರ
ಸಂಸ್ಥೆ | ಆದಾಯ ( ಕೋಟಿ ರೂಪಾಯಿ) |
ಬಿಸಿಸಿಐ | 3730 |
ಕ್ರಿಕೆಟ್ ಆಸ್ಟ್ರೇಲಿಯಾ | 2843 |
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ | 2135 |
ಪಾಕಿಸ್ತಾನ ಕ್ರಿಕೆಟ್ ಮಂಡಳಿ | 811 |
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ | 802 |
ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ | 485 |
ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೇ | 210 |
ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ | 116 |
ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆ | 113 |
ಶ್ರೀಲಂಕಾ ಕ್ರಿಕೆಟ್ ಸಂಸ್ಥೆ | 100 |
ಇದನ್ನೂ ಓದಿ | Team India | ಪ್ರತ್ಯೇಕ ತಂಡ, ಪ್ರತ್ಯೇಕ ನಾಯಕ; ವಿಶ್ವ ಕಪ್ ಗೆಲ್ಲಲು ಬಿಸಿಸಿಐ ಹೊಸ ಯೋಜನೆ