ಮುಂಬಯಿ : ಭಾರತ ಕ್ರಿಕೆಟ್ (Indian Cricket Team) ಇತಿಹಾಸದಲ್ಲಿ ದಿಗ್ಗಜ ಕ್ರಿಕೆಟರ್ಗಳು ಹಲವರಿದ್ದಾರೆ. ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಈ ಸಾಲಿನ ಅಗ್ರಗಣ್ಯರು. ಆದರೆ, ಇವರೆಲ್ಲರಿಗಿಂತಲೂ ಭಿನ್ನ ವಿಭಾಗದ ಆಟಗಾರರೊಬ್ಬರು ಭಾರತ ತಂಡದಲ್ಲಿದ್ದಾರೆ. ಅವರನ್ನು ಸ್ಟಾರ್ ಆಫ್ ಸೆಂಚುರಿ ಎಂದೇ ಕರೆಯಲಾಗುತ್ತದೆ ಹಾಗೂ ಭವಿಷ್ಯದಲ್ಲಿ ಅವರನ್ನು ಅದೇ ಹೆಸರಿನಿಂದ ಕ್ರಿಕೆಟ್ ಅಭಿಮಾನಿಗಳು ನೆನಪಿನಲ್ಲಿ ಇಟ್ಟುಕೊಳ್ಳಲಿದ್ದಾರೆ.
ಈ ಆಟಗಾರ ಮತ್ಯಾರು ಅಲ್ಲ. ಸೂರ್ಯಕುಮಾರ್ ಯಾದವ್. ಟಿ20 ಕ್ರಿಕೆಟ್ನ ಸದ್ಯದ ಸ್ಟಾರ್. ಈ ಮಾದರಿಯಲ್ಲಿ ಮೂರು ಶತಕಗಳನ್ನು ಬಾರಿಸಿರುವ ಆಟಗಾರ. ಗ್ರೌಂಡ್ನ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಆಟಗಾರ.
ಸೂರ್ಯಕುಮಾರ್ ಯಾದವ್ಗೆ ಈ ಹೆಸರು ಕೊಟ್ಟವರು 1983ರ ವಿಶ್ವ ಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ 51 ಎಸೆತಗಳಲ್ಲಿ 112 ರನ್ ಬಾರಿಸಿದ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿಯನ್ನು ನಾವು ದಿಗ್ಗಜ ಕ್ರಿಕೆಟಿಗರ ಸಾಲಿಗೆ ಸೇರಿಸುತ್ತೇವೆ. ಅವರಿಗೆ ಬೌಲಿಂಗ್ ಮಾಡುವುದು ಎದುರಾಳಿ ತಂಡದ ಬೌಲರ್ಗಳಿಗೆ ಸವಾಲಿನ ವಿಷಯವಾಗಿತ್ತು. ಇದೀಗ ಸೂರ್ಯಕುಮಾರ್ ಯಾದವ್ ಅವರಿರೂ ಮಿಡ್ ಆನ್, ಮಿಡ್ ವಿಕೆಟ್ ಕಡೆಗೆಲ್ಲ ಸಿಕ್ಸರ್ ಬಾರಿಸುತ್ತಿದ್ದಾರೆ. ಹೀಗಾಗಿ ಅವರನ್ನು ಶತಮಾನದ ಕ್ರಿಕೆಟಿಗ ಎಂದು ಕೆರೆಯಬಹುದು ಎಂದು ಕಪಿಲ್ ದೇವ್ ಹೇಳಿದ್ದಾರೆ.
ಇದನ್ನೂ ಓದಿ | Kapil Dev | ರೋಹಿತ್ ಶರ್ಮಾ ಫಿಟ್ನೆಸ್ ಬಗ್ಗೆ ಅನುಮಾನವಿದೆ; ಕಪಿಲ್ ದೇವ್ ಅಚ್ಚರಿಯ ಹೇಳಿಕೆ!