Site icon Vistara News

World Cup 2023: ಹೆದರಬೇಡಿ, ಟೈಟ್​ ಸೆಕ್ಯುರಿಟಿ ಕೊಡ್ತೇವೆ; ಪುಕ್ಕಲು ಪಾಕಿಸ್ತಾನ ತಂಡಕ್ಕೆ ಭರವಸೆ!

Pakistan Cricket Team

ಬೆಂಗಳೂರು: ಜೂನ್ 27 ರಂದು ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು (WorldCup 2023) ಪ್ರಕಟಿಸಲಾಗಿದೆ. 13ನೇ ಆವೃತ್ತಿಯ ವಿಶ್ವ ಕಪ್​ ಟೂರ್ನಿಯಲ್ಲಿ 48 ಪಂದ್ಯಗಳಿಗೆ ಆತಿಥ್ಯ ವಹಿಸಲು ಭಾರತ ಸಜ್ಜಾಗಿದೆ. ಪಂದ್ಯಗಳನ್ನು ಆಡಿಸಲು ಬಿಸಿಸಿಐ ಮತ್ತು ಐಸಿಸಿ 10 ಸ್ಥಳಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ ಪಾಕಿಸ್ತಾನ ತಂಡಕ್ಕೆ ಐದು ತಾಣಗಳಲ್ಲಿ ಮಾತ್ರ ಪಂದ್ಯ ನಿಗದಿ ಮಾಡಲಾಗಿದೆ. ಬೆಂಗಳೂರು, ಹೈದರಾಬಾದ್​, ಚೆನ್ನೈ, ಅಹಮದಾಬಾದ್ ಮತ್ತು ಕೊಲ್ಕೊತಾಗಳಲ್ಲಿ ಪಾಕ್​ಗೆ ಪಂದ್ಯಗಳನ್ನು ನಿಯೋಜಿಸಲಾಗಿದೆ. ಇದೀಗ ಕೋಲ್ಕೊತಾ ಕ್ರಿಕೆಟ್​ ಸಂಸ್ಥೆಯು ಪಾಕಿಸ್ತಾನಕ್ಕೆ ಭರವಸೆ ನೀಡಿದ್ದು ಆಟಗಾರರಿಗೆ ಎಲ್ಲ ರೀತಿಯ ಭದ್ರತೆಗಳನ್ನು ಒದಗಿಸಲು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ. ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಬಿಗಿ ಭದ್ರತಾ ವ್ಯವಸ್ಥೆಗಳ ಭರವಸೆ ಕೊಟ್ಟಿದ್ದಾರೆ.

ನಾವು 2016ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಿದ್ದೇವೆ. ಅಂತೆಯೇ ಮುಂದಿನ ವಿಶ್ವ ಕಪ್​ನಲ್ಲಿ ಪಾಕ್ ತಂಡದ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದೇವೆ. ಈ ಪಂದ್ಯಗಳನ್ನು ಆಯೋಜಿಸುವುದು ಕಠಿಣವಾಗಿವೆ. ವಿಶ್ವಕಪ್ ಆಯೋಜಿಸುವುದು ಸವಾಲಿನ ಕೆಲಸ. ನಾವು ಯಾವುದೇ ರೀತಿಯ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೇವೆ ಎಂದು ಸಿಎಬಿ ಅಧ್ಯಕ್ಷರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಕೋಲ್ಕತಾ ಮತ್ತು ಚೆನ್ನೈನಲ್ಲಿ ತಮ್ಮ ಪಂದ್ಯಗಳನ್ನು ಆಡಿಸುವಂತೆ ಪಾಕಿಸ್ತಾನವು ಐಸಿಸಿ ಮತ್ತು ಬಿಸಿಸಿಐಗೆ ಮನವಿ ಮಾಡಿತ್ತು, ಈಡನ್ ಗಾರ್ಡನ್ಸ್ ನಲ್ಲಿ ಎರಡು ಪಂದ್ಯಗಳನ್ನು ಆಡಲಿದ್ದು, ಒಂದು ಬಾಂಗ್ಲಾದೇಶದ ವಿರುದ್ಧ ಮತ್ತು ಇನ್ನೊಂದು ಇಂಗ್ಲೆಂಡ್ ವಿರುದ್ಧ ಆಡಲಿರುವುದರಿಂದ ಪಿಸಿಬಿಯ ನಿರೀಕ್ಷೆ ಈಡೇರಿದೆ. ಸಿಎಬಿ ಅಧ್ಯಕ್ಷ ಸ್ನೇಹಶಿಶ್ ಅವರು ಬಾಬರ್ ಅಜಮ್ ಬಳಗಕ್ಕೆ ಉತ್ತಮ ಆತಿಥ್ಯ ಕೊಡುವ ವಿಶ್ವಾಸ ಹೊಂದಿದ್ದಾರೆ ಮತ್ತು ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡುವುದಾಗಿಯೂ ಹೇಳಿದ್ದಾರೆ.

ಪಂದ್ಯಗಳ ಆತಿಥ್ಯ ವಹಿಸುವ ಬಗ್ಗೆ ನನಗೆ ತುಂಬಾ ವಿಶ್ವಾಸವಿದೆ. ಪಾಕಿಸ್ತಾನಕ್ಕೆ ವಿಶೇಷ ಭದ್ರತಾ ವ್ಯವಸ್ಥೆಗಳು ಇರಲಿವೆ. ಪಾಕಿಸ್ತಾನ ಈ ಹಿಂದೆ ಕೋಲ್ಕತ್ತಾದಲ್ಲಿ ಆಡಿದೆ ಎಂದು ನಾನು ಭಾವಿಸುತ್ತೇನೆ. ಒಳಗಿನ ಕಥೆ ನನಗೆ ತಿಳಿದಿಲ್ಲ. ಆದರೆ ಅವರ ಮೊದಲ ಆದ್ಯತೆ ಕೋಲ್ಕತಾ, ನಂತರ ಚೆನ್ನೈ ಮತ್ತು ಬೆಂಗಳೂರು ಎಂದ ಅವರು ಹೇಳಿದ್ದಾರೆ.

ನನಗೆ ಕೋಲ್ಕತಾ ಪೊಲೀಸರ ಮೇಲೆ ನಂಬಿಕೆ ಇದೆ. ಭದ್ರತಾ ವ್ಯವಸ್ಥೆಯು ಸಾಮಾನ್ಯ ಪಂದ್ಯಗಳಿಗಿಂತ ಬಿಗಿಯಾಗಿರುತ್ತದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಆಡಳಿತದ ಮೇಲೂ ನನಗೆ ನಂಬಿಕೆ ಇದೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ವಿಶ್ವಕಪ್​ನಲ್ಲಿ ಕೋಲ್ಕತಾಗೆ ಐದು ನಿರ್ಣಾಯಕ ಪಂದ್ಯಗಳನ್ನು ನಿಗದಿಪಡಿಸಿದ್ದಕ್ಕಾಗಿ ಸಿಎಬಿ ಅಧ್ಯಕ್ಷರು ಬಿಸಿಸಿಐ ಮತ್ತು ಜಯ್ ಶಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಾವು ತೃಪ್ತರಾಗಿದ್ದೇವೆ. ನಾನು ನಿಜವಾಗಿಯೂ ಜಯ್ ಶಾ, ಬಿಸಿಸಿಐ ಮತ್ತು ಐಸಿಸಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಕಳೆದ 4 ತಿಂಗಳಿನಿಂದ ಕೆಲಸ ಮಾಡುತ್ತಿದ್ದೇವೆ. ಉತ್ತಮ ಪಂದ್ಯಗಳನ್ನು ಆಯೋಜಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : World Cup: ವಿಶ್ವ ಕಪ್​ ಟಿಕೆಟ್​ಗಳ ಖರೀದಿ ಹೇಗೆ? ಟಿಕೆಟ್​ ದರ ಎಷ್ಟು? ಇಲ್ಲಿದೆ ಎಲ್ಲ ವಿವರ

ಪಂದ್ಯವನ್ನು ಉತ್ತಮವಾಗಿ ಆಯೋಜಿಸುವ ಬಗ್ಗೆ ನಮಗೆ ಎಂದಿಗೂ ಗೊಂದಲಗಳು ಇಲ್ಲ.. ಆದರೆ ಈ ರೀತಿಯ ನಿರ್ಧಾರಗಳಲ್ಲಿ ಬಹಳಷ್ಟು ಒಳಿತು, ಕೆಡುಕುಗಳು ಇರುತ್ತವೆ. ಜಯ್ ಶಾ ನನಗೆ ಉತ್ತಮ ಪಂದ್ಯಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಈಡನ್ ಗಾರ್ಡನ್ಸ್ ಬಗ್ಗೆ ಉತ್ತಮ ದೃಷ್ಟಿಕೋನವನ್ನು ಹೊಂದಿರುವ ಜಯ್ ಶಾ ಮತ್ತು ಬಿಸಿಸಿಐಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಪಂದ್ಯದ ವೇಳಾಪಟ್ಟಿ

Exit mobile version