ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ (ICC World Cup 2023) ವೇಳೆ ಮುಜೀಬ್ ರೆಹಮಾನ್ ಜಾರಿ ಬಿದ್ದಿರುವುದು ಚರ್ಚೆಯ ವಿಷಯವಾಗಿತ್ತು. ಆಫ್-ಸ್ಪಿನ್ನರ್ ಧರ್ಮಶಾಲಾ ಬಿದ್ದ ಏಟಿಗೆ ಮಂಡಿಗೆ ಏಟು ಮಾಡಿಕೊಳ್ಳುವ ಸಾಧ್ಯತೆ ಇತ್ತು. ಆದರೆ ದುರದೃಷ್ಟವಶಾತ್ ಬಚಾವಾಗಿದ್ದಾರೆ. ಅದಕ್ಕೆ ಕಾರಣ ಸ್ಟೇಡಿಯಮ್ನ ಔಟ್ ಫೀಲ್ಡ್. ಮರಳು ತುಂಬಿರುವ ಕಾರಣ ಆಟಗಾರ ಜಾರಿದ್ದಾರೆ ಎಂದು ಆಮೇಲೆ ಹೇಳಲಾಗಿದೆ. ಅದೇ ರೀತಿ ಈ ಸ್ಟೇಡಿಯಮ್ನ ಔಟ್ಫೀಲ್ಡ್ ಅತ್ಯುತ್ತಮವಾಗಿಲ್ಲ ಎಂಬುದಾಗಿ ಐಸಿಸಿಯೂ ರೇಟಿಂಗ್ ನೀಡಿದೆ. ಇದೀಗ ಬಾಂಗ್ಲಾದೇಶವನ್ನು ಅದೇ ಸ್ಥಳದಲ್ಲಿ ಇಂಗ್ಲೆಂಡ್ ಎದುಸಲಿದೆ. ಹೀಗಾಗಿ ನಾಯಕ ಜೋಸ್ ಬಟ್ಲರ್ ಮತ್ತು ತಂಡಕ್ಕೆ ಧರ್ಮಶಾಲಾದ ಮೇಲ್ಮೈಯಲ್ಲಿ ಡೈವ್ ಹೊಡೆದು ಗಾಯ ಮಾಡಿಕೊಳ್ಳದಂತೆ ಸೂಚನೆ ನೀಡಲಾಗಿದೆ.
Here’s the Dharamsala outfield ahead of England vs Bangladesh tomorrow – rated “average” by the officials on Saturday pic.twitter.com/h1Dp1MVVEt
— Matt Roller (@mroller98) October 9, 2023
ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ನ ಅಭ್ಯಾಸದ ವೇಳೆ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಮ್ಯಾಟ್ ರೋಲರ್ ಅವರೂ ಧರ್ಮಶಾಲಾ ಮೈದಾನದ ಸ್ಥಿತಿಯ ಚಿತ್ರವನ್ನು ಟ್ವಿಟರ್ನಲ್ಇಲ ಹಂಚಿಕೊಂಡಿದ್ದಾರೆ. ಆ ಪಿಚ್ ಪ್ರಕಾರ ಔಟ್ ಫೀಲ್ಡ್ ಅಪಾಯಕಾರಿಯಾಗಿದೆ. ಅದೇ ರೀತಿ ಪೋಸ್ಟ್ ನೋಡಿದ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರತ್ತ ಬೆರಳು ತೋರಿಸುತ್ತಿದ್ದಾರೆ.
“ನನ್ನ ಕಾಲೋನಿಯ ಮೈದಾನದಲ್ಲಿ ಇದಕ್ಕಿಂತ ಉತ್ತಮ ರೀತಿಯಲ್ಲಿ ಹುಲ್ಲು ಬೆಳೆಸಲಾಗಿದೆ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇಂಗ್ಲೆಂಡ್ ತಂಡ ಪ್ರಸ್ತುತ ಹೊಂದಿರುವ ಫಾರ್ಮ್ನಷ್ಟೇ ಸ್ಟೇಡಿಯಮ್ ಕೂಡ ಕೆಟ್ಟದಾಗಿದೆ ಎಂದು ಬರೆದಿದ್ದಾರೆ. ಇನ್ನೊಬ್ಬರು ಹಿಂದೆಂದೂ ಕಂಡಿರದ ಅತ್ಯಂತ ಕೆಟ್ಟ ಔಟ್ ಫೀಲ್ಡ್ ಎಂದು ಬರೆದುಕೊಂಡಿದ್ದಾರೆ.
50 ಕೋಟಿ ರೂಪಾಯಿ ವೆಚ್ಚ
ವಿಶ್ವಕಪ್ ಆರಂಭಕ್ಕೂ ಮುನ್ನ ವಿಶ್ವಕಪ್ ಟೂರ್ನಿಯ ಪ್ರತಿ ಮೈದಾನದ ನವೀಕರಣಕ್ಕೆ 50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದಾಗ್ಯೂ, ಧರ್ಮಶಾಲಾ ಮೇಲ್ಮೈಯ ನೋಟದಿಂದ ಯಾವುದೇ ಕೆಲಸ ನಡೆದಿಲ್ಲ ಎಂಬುದು ಸಾಬೀತಾಗಿದೆ. ಇಂಗ್ಲೆಂಡ್ ಮತ್ತು ಬಾಂಗ್ಲಾ ಪಂದ್ಯದ ನಂತರ, ಧರ್ಮಶಾಲಾ ಮೈದಾನದಲ್ಲಿ ಇನ್ನೂ ಮೂರು ಪಂದ್ಯಗಳು ನಡೆಯಬೇಕಿದೆ. ವಾಸ್ತವವಾಗಿ, ಐಸಿಸಿ ಸ್ವತಃ ಧರ್ಮಶಾಲಾ ಮೇಲ್ಮೈಯನ್ನು ಪರಿಶೀಲಿಸಿದೆ ಮತ್ತು ಸರಾಸರಿ ರೇಟಿಂಗ್ ನೀಡಿದೆ.
ಎಚ್ಚರಿಕೆಯಿಂದ ಇರಲು ಸೂಚನೆ
ಇಂಗ್ಲೆಂಡ್ ತಂಡಕ್ಕೆ ‘ನೋ ಡೈವ್’ ಎಂಬ ಸೂಚನೆಯನ್ನು ಕಟ್ಟುನಿಟ್ಟಾಗಿ ನೀಡಿರುವುದರಿಂದ, ನಾಯಕ ಜೋಸ್ ಬಟ್ಲರ್ ಬೆನ್ ಸ್ಟೋಕ್ಸ್ ಅವರನ್ನು ಆಡಿಸುವ ಅಪಾಯವನ್ನು ತೆಗೆದುಕೊಳ್ಳಲಾರರು. ಸೊಂಟದ ನೋವಿನಿಂದಾಗಿ ಆಲ್ರೌಂಡರ್ ಇಂಗ್ಲೆಡ್ನ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಪರಿಸ್ಥಿತಿ ನೋಡಿದರೆ ಸ್ಟೋಕ್ಸ್ ಎರಡನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಇಂಗ್ಲೆಂಡ್ ಬಗ್ಗೆ ಮಾತನಾಡುವುದಾದರೆ, ಅವರು ನಾಳೆ ಬಾಂಗ್ಲಾದೇಶ ವಿರುದ್ಧ ಧರ್ಮಶಾಲಾದಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ. ಶಕೀಬ್ ಅಲ್ ಹಸನ್ ಮತ್ತು ಸಿಬ್ಬಂದಿ ಇದೇ ಮೈದಾನದಲ್ಲಿ ತಮ್ಮ ಎರಡನೇ ಪಂದ್ಯವನ್ನು ಆಡಲಿದೆ.