ಕ್ಯಾನ್‌ಬೆರಾ : ಇತ್ತೀಚೆಗೆ ಭಾರತ ಪ್ರವಾಸ ಬಂದಿದ್ದ ಆಸ್ಟ್ರೇಲಿಯಾ ತಂಡದ ಬ್ಯಾಟರ್ ಕ್ಯಾಮೆರಾನ್ ಗ್ರೀನ್ ಎರಡು ಅರ್ಧ ಶತಕಗಳನ್ನು ಬಾರಿಸಿದ್ದರು. ಅವರ ವಿಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಾಮರ್ಥ್ಯವನ್ನು ಗಮನಿಸಿದ್ದ ಐಪಿಎಲ್ ಫ್ರಾಂಚೈಸಿ ಮಾಲೀಕರು ಆದಾಗಲೇ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸಿದ್ದರು. ಅದಕ್ಕೆ ಪೂರವಾಗಿ 23 ವರ್ಷದ ಯುವ ಆಟಗಾರ ಐಪಿಎಲ್‌ನಲ್ಲಿ ಆಡುವುದಕ್ಕೆ ತಮ್ಮ ಹೆಸರು ನೊಂದಾಯಿಸಿದ್ದಾರೆ. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿನಲ್ಲಿ ಅವರು ದೊಡ್ಡ ಮೊತ್ತ ಪಡೆಯುವ ಸಾಧ್ಯತೆಗಳಿವೆ. ಏತನ್ಮಧ್ಯೆ, ಐಪಿಎಲ್‌ಗೆ ಹೋಗಿ ಆಡಬೇಡ ಎಂಬುದಾಗಿ ಎಸ್‌ಆರ್‌ಎಚ್ ತಂಡದ ಮಾಜಿ ಆಟಗಾರ ಹಾಗೂ ಆಸ್ಟ್ರೇಲಿಯಾದ ಚಾಂಪಿಯನ್ ಬ್ಯಾಟರ್ ಡೇವಿಡ್ ವಾರ್ನರ್ ಕಿವಿ ಮಾತು ಹೇಳಿದ್ದಾರೆ.
ಹಲವು ವರ್ಷ ಐಪಿಎಲ್‌ನಲ್ಲಿ ಆಡಿದ್ದಲ್ಲದೆ ತಂಡದ ನಾಯಕತ್ವ ವಹಿಸಿ ಚಾಂಪಿಯನ್ ಪಟ್ಟವನ್ನೂ ಪಡೆದುಕೊಂಡಿರುವ ಡೇವಿಡ್ ವಾರ್ನರ್ ಈ ರೀತಿ ಯಾಕೆ ಹೇಳುತ್ತಾರೆ ಎಂದು ಅಚ್ಚರಿ ಪಡಬಹುದು. ಆದರೆ ಅವರು ಆಟದ ಕ್ರಿಕೆಟ್ ಭವಿಷ್ಯವನ್ನು ಉದ್ದೇಶವಾಗಿ ಇಟ್ಟುಕೊಂಡು ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಇನ್‌ಎಸ್‌ಪಿಎನ್ ಕ್ರಿಕ್‌ಇನ್ಫೋ ಜತೆ ಮಾತನಾಡಿದ ಡೇವಿಡ್ ವಾರ್ನರ್ “ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಇದು ತುಂಬಾ ಕಷ್ಟದ ಕೆಲಸ,” ಎಂಬುದಾಗಿ ನುಡಿದಿದ್ದಾರೆ.
“ಐಪಿಎಲ್ ಮುಗಿದ ಬಳಿಕ ಕ್ಯಾಮೆರೂನ್ ಗ್ರೀನ್ ನಾಲ್ಕು ಟೆಸ್ಟ್, ಕೆಲವು ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಪಾಳ್ಗೊಳ್ಳಬೇಕಾಗುತ್ತದೆ. ಅದಕ್ಕಿಂತ ಮೊದಲು ಅವರು ಹಲವು ವಾರಗಳ ಕಾಲ ಭಾರತದಲ್ಲಿ ಐಪಿಎಲ್‌ಗಾಗಿ ಇರಬೇಕಾಗುತ್ತದೆ. ಭಾರತಕ್ಕೆ ನಿಮಗೆ ಮೊದಲ ಪ್ರವಾಸ. ಅಲ್ಲಿನ ಉಷ್ಣಾಂಶ ತಡೆದುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅಲ್ಲಿನ ಬಿಸಿಯೇ ಒಂಥರಾ ವಿಚಿತ್ರ. ನಾನು ಹಲವು ಆವೃತ್ತಿಗಳಲ್ಲಿ ಆಡಿದ್ದೇನೆ. ಅಲ್ಲಿನ ಬಿಸಿಯನ್ನು ಅನುಭವಿಸಿದ್ದೇನೆ. ಪುನಶ್ಚೇತನಕ್ಕೆ ಒಳಗಾಗುವುದು ತುಂಬಾ ಕಷ್ಟ,” ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ | Big Bash League | ಮಗಳು ಆಟ ನೋಡಬೇಕೆಂತೆ, ಅದಕ್ಕೆ ಇಲ್ಲೇ ಆಡುವೆ ಎಂದ ಡೇವಿಡ್ ವಾರ್ನರ್