Site icon Vistara News

Gautam Gambhir: ಜೈಸ್ವಾಲ್​ ಮೇಲೆ ಹೆಚ್ಚಿನ ನಿರೀಕ್ಷೆ ಬೇಡ; ಎಚ್ಚರಿಕೆ ನೀಡಿದ ಗಂಭೀರ್!

Gambhir

ನವದೆಹಲಿ: ಇಂಗ್ಲೆಂಡ್​ ವಿರುದ್ಧದ ದ್ವಿತೀಯ ಟೆಸ್ಟ್​ನಲ್ಲಿ ದ್ವಿಶತಕ ಬಾರಿಸಿ ಮಿಂಚಿದ ಟೀಮ್​ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal)​ ಅವರಿಂದ ಹೆಚ್ಚಿನ ಬ್ಯಾಟಿಂಗ್​ ಪ್ರದರ್ಶನ ನಿರೀಕ್ಷೆ ಮಾಡಬಾರದೆಂದು ಮಾಜಿ ಆಟಗಾರ ಗೌತಮ್​ ಗಂಭೀರ್(Gautam Gambhir)​ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಜೈಸ್ವಾಲ್​ ಅವರ ದ್ವಿಶತಕ ಬ್ಯಾಟಿಂಗ್​ ಬಗ್ಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡ ಗೌತಮ್​ ಗಂಭೀರ್​, ಯುವ ಆಟಗಾರ ಜೈಸ್ವಾಲ್ ಅವರಿಂದ ಹೆಚ್ಚಿನ ನಿರೀಕ್ಷೆ ಮಾಡಬೇಡಿ, ಇದರಿಂದ ಅವರ ನೈಜ ಆಟಕ್ಕೆ ಕುತ್ತು ಬರುತ್ತದೆ ಎಂದು ಹೇಳಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಗಂಭೀರ್​, “ಯುವ ಆಟಗಾರ ಜೈಸ್ವಾಲ್​ ಬ್ಯಾಟಿಂಗ್​ ಪ್ರದರ್ಶನವನ್ನು ನಾನು ಅಭಿನಂದಿಸುತ್ತೇನೆ. ಆದರೆ, ಬಹುಮುಖ್ಯವಾಗಿ ನಾನು ಒಂದು ವಿಷಯ ಹೇಳಲು ಬಯಸುತ್ತೇನೆ. ಈ ಯುವ ಆಟಗಾರನಿಗೆ ನೈಜ ಆಟವಾಡಲು ಬಿಟ್ಟುಬಿಡಿ. ಏಕೆಂದರೆ ಭಾರತದ ಕ್ರಿಕೆಟ್​ ಅಭಿಮಾನಿಗಳಲ್ಲಿ ಮತ್ತು ಕೆಲ ಮಾಜಿ ಆಟಗಾರರರು ಒಂದು ಕೆಟ್ಟ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ. ಅದರಲ್ಲೂ ಮಾಧ್ಯಮಗಳು ಎತ್ತಿದ ಕೈ. ಅದೇನೆಂದರೆ ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದರೆ ಸಾಕು ಆ ಬಳಿಕ ಆತನಿಂದ ಪ್ರತಿ ಪಂದ್ಯದಲ್ಲೂ ಇದೇ ಪ್ರದರ್ಶನ ನಿರೀಕ್ಷೆ ಮಾಡಿ ಆತನಿಗೆ ಒತ್ತಡ ಹೇರುವುದು. ಇದರಿಂದ ಆತನ ನೈಜ ಆಟಕ್ಕೆ ಹಿನ್ನಡೆಯಾಗುತ್ತದೆ. ಆದ್ದರಿಂದ ಜೈಸ್ವಾಲ್​ ಅವರನ್ನು ಈಗಲೇ ಹೀರೊ ಎನ್ನಬೇಡಿ ಆತನ ಪಾಡಿಗೆ ಆತನ್ನು ಆಡಲು ಬಿಡಿ” ಎಂದು ಗಂಭೀರ್​ ಹೇಳಿದ್ದಾರೆ.

ಇದನ್ನೂ ಓದಿ Gautam Gambhir : ಕೊಹ್ಲಿ ಜತೆ ಮೈದಾನದಲ್ಲಿ ಮಾತ್ರ ಜಗಳ; ಯೂಟರ್ನ್ ಹೊಡೆದ ಗಂಭೀರ್​

ಸಿಕ್ಸರ್​ ಮೂಲಕ ಶತಕ ಬಾರಿಸಿದ್ದ ಜೈಸ್ವಾಲ್​ ದ್ವಿತೀಯ ದಿನದಾಟವಾದ ಶನಿವಾರ ತಮ್ಮ ದ್ವಿಶತಕವನ್ನು ಬೌಂಡರಿ ಮೂಲಕ ಪೂರ್ತಿಗೊಳಿಸಿದರು. ಬಿರುಸಿನ ಆಟವಾಡಿದ ಜೈಸ್ವಾಲ್​ 290 ಎಸೆತ ಎದುರಿಸಿ ಬರೋಬ್ಬರಿ 19 ಬೌಂಡರಿ ಮತ್ತು 7 ಸೊಗಸಾದ ಸಿಕ್ಸರ್​ ನೆರವಿನಿಂದ 209 ರನ್​ ಬಾರಿಸಿ ಮಿಂಚಿದ್ದರು. ಜತೆಗೆ ಹಲವು ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದಿದ್ದರು.

ಯಶಸ್ವಿ ಬರೆದ ದಾಖಲೆಗಳ ಪಟ್ಟಿ


ಭಾರತದ ಪರ ಕಡಿಮೆ ಇನ್ನಿಂಗ್ಸ್ ನಲ್ಲಿ ಚೊಚ್ಚಲ ದ್ವಿಶತಕ

ಕರುಣ್ ನಾಯರ್(3 ಇನಿಂಗ್ಸ್​)

ವಿನೋದ್ ಕಾಂಬ್ಳಿ (4 ಇನಿಂಗ್ಸ್​)

ಸುನಿಲ್ ಗವಾಸ್ಕರ್/ ಮಯಾಂಕ್ ಅಗರ್ವಾಲ್ (8 ಇನಿಂಗ್ಸ್​)

ಚೇತೇಶ್ವರ ಪೂಜಾರ (9 ಇನಿಂಗ್ಸ್​)

ಯಶಸ್ವಿ ಜೈಸ್ವಾಲ್ (10 ಇನಿಂಗ್ಸ್​)

ಟೆಸ್ಟ್‌ನಲ್ಲಿ ಭಾರತದ ಪರ 200 ರನ್ ಗಳಿಸಿದ ಕಿರಿಯ ಆಟಗಾರ


ವಿನೋದ್ ಕಾಂಬ್ಲಿ 224 vs ಇಂಗ್ಲೆಂಡ್ ಮುಂಬೈ 1993 (21 ವರ್ಷ 35 ದಿನ)

ವಿನೋದ್ ಕಾಂಬ್ಲಿ 227 vs ಜಿಂಬಾಬ್ವೆ ಡೆಲ್ಲಿ 1993 (21 ವರ್ಷ 55 ದಿನ)

ಸುನಿಲ್ ಗವಾಸ್ಕರ್ 220 vs ವೆಸ್ಟ್ ಇಂಡಿಸ್ ಪೋರ್ಟ್ ಆಫ್ ಸ್ಪೇನ್ 1971 (21 ವರ್ಷ 283 ದಿನ)

ಯಶಸ್ವಿ ಜೈಸ್ವಾಲ್ 209 vs ಇಂಗ್ಲೆಂಡ್ ವೈಜಾಗ್ 2024(22 ವರ್ಷ 37ದಿನ)

Exit mobile version