Site icon Vistara News

Asia Cup 2023 : ಭಾರತಕ್ಕೆ ಕಾಲಿಡಬೇಡಿ, ಪಾಕಿಸ್ತಾನ ತಂಡದ ಮಾಜಿ ಆಟಗಾರನ ಕಿರಿಕ್​!

Javed miandad

#image_title

ಬೆಂಗಳೂರು: 2023 ರ ಕೊನೆಯಲ್ಲಿ ನಿಗದಿಯಾಗಿರುವ ಏಕದಿನ ವಿಶ್ವಕಪ್ ಗಾಗಿ ಪಾಕಿಸ್ತಾನವು ಭಾರತಕ್ಕೆ ಪ್ರಯಾಣಿಸಬಾರದು ಎಂದು ಪಾಕಿಸ್ತಾನ ತಂಡದ ಬ್ಯಾಟರ್​​ ಜಾವೆದ್​ ಮಿಯಾಂದಾದ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡದ ಪಾಕಿಸ್ತಾನಕ್ಕೆ ಬರುವ ತನಕ ನಾವು ಅಲ್ಲಿಗೆ ಹೋಗುವುದ ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನನಗೆ ಇದ್ದರೆ ನಾನು ತಂಡವನ್ನು ಕಳುಹಿಸುತ್ತಲೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಪ್ರಯಾಣಿಸಲು ಬಿಸಿಸಿಐ ಒಪ್ಪದ ಹೊರತು ಪಾಕಿಸ್ತಾನ ತಂಡವು ಪಂದ್ಯಗಳನ್ನು ಆಡಲು ಭಾರತಕ್ಕೆ ಹೋಗಬಾರದು. ಐಸಿಸಿ ಇತ್ತೀಚೆಗೆ ಬಿಡುಗಡೆ ಮಾಡಿದ ಕರಡು ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 15 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಸರಣಿಗೆ ಅವರ ಹೋಗಬಾರದು ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಬ್ಯಾಟ್ಸ್​ಮನ್​ ಜಾವೇದ್ ಮಿಯಾಂದಾದ್ ಇತ್ತೀಚೆಗೆ ಬಿಸಿಸಿಐಯನ್ನೂ ಟೀಕಿಸಿದ್ದರು. ವಿಶ್ವಕಪ್​ಗೆ ಮುಂಚಿತವಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಿ ಸರಣಿಯಲ್ಲಿ ಸ್ಪರ್ಧಿಬೇಕು. ಪಾಕಿಸ್ತಾನ ತಂಡ ಭಾರತಕ್ಕೆ ಹೋಗಬೇಕಾದರೆ ಈ ಕೆಲಸ ಮೊದಲು ಆಗಬೇಕು ಎಂದು ಅಭಿಪ್ರಾಯಪಟ್ಟರು. 2008ರಲ್ಲಿ 50 ಓವರ್​​ಗಳ ಏಷ್ಯಾಕಪ್​​ಗಾಗಿ ಭಾರತ ಕೊನೆಯ ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು. ಅಂದಿನಿಂದ, ಉಭಯ ದೇಶಗಳ ನಡುವಿನ ರಾಜಕೀಯ ಪ್ರಕ್ಷುಬ್ಧ ಸ್ಥಿತಿಯಿಂದಾಗಿ ದ್ವಿಪಕ್ಷೀಯ ಸರಣಿಯನ್ನು ರದ್ದುಗೊಳಿಸಲಾಗಿದೆ. ಮುಂಬರುವ ಏಷ್ಯಾಕಪ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಬಿಸಿಸಿಐ ಪಾಕಿಸ್ತಾನವನ್ನು ಒತ್ತಾಯಿಸಿದ ನಂತರ ಮಿಯಾಂದಾದ್ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಆಟದ ನಡುವೆ ಗ್ರೌಂಡ್​ನ ಗಾತ್ರ ಬದಲು, ಟ್ರೋಲ್​ಗೆ ಒಳಗಾದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ

ಪಾಕಿಸ್ತಾನವು 2012ರಲ್ಲಿ ಭಾರತಕ್ಕೆ ಭೇಟಿ ನೀಡಿದೆ. 2016ರಲ್ಲಿಯೂ ಹೋಗಿದೆ . ಈಗ ಭಾರತೀಯರ ಸರದಿ. ನನಗೆ ತೆಗೆದುಕೊಳ್ಳುವ ಅಧಿಕಾರ ಇದ್ದರೆ ಪಾಕಿಸ್ತಾನ ತಂಡ ಯಾವತ್ತು ಭಾರತಕ್ಕೆ ಹೋಗುವುದಿಲ್ಲ, ವಿಶ್ವಕಪ್​​ಗಾಗಿಯೂ ಪ್ರಯಾಣಿಸುವುದಿಲ್ಲ ನಾವು ಯಾವಾಗಲೂ ಭಾರತದೊಂದಿಗೆ ಆಡಲು ಸಿದ್ಧರಿದ್ದೇವೆ. ಆದರೆ ಅವರು ಎಂದಿಗೂ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ ಎಂದು ಜಾವೇದ್ ಮಿಯಾಂದಾದ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ದೊಡ್ಡದು. ನಾವು ಇನ್ನೂ ಗುಣಮಟ್ಟದ ಆಟಗಾರರನ್ನು ಉತ್ಪಾದಿಸುತ್ತಿದ್ದೇವೆ. ಆದ್ದರಿಂದ ನಾವು ಭಾರತಕ್ಕೆ ಹೋಗದಿದ್ದರೂ ಅದರಿಂದ ನಮಗೇನೂ ಸಮಸ್ಯೆ ಇಲ್ಲ “ಎಂದು ಅವರು ಹೇಳಿದ್ದಾರೆ.

ನೆರೆಹೊರೆಯವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂಬುದು ನನ್ನ ವಾದ. ಇಂಥವರೇ ಇರಬೇಕು ಎಂದೂ ಹೇಳಲು ಸಾಧ್ಯವಿಲ್ಲ. ಆದರೆ ಪರಸ್ಪರ ಸಹಕಾರದಿಂದ ಬದುಕುವುದು ಉತ್ತಮ. ಕ್ರಿಕೆಟ್ ಜನರನ್ನು ಒಟ್ಟುಗೂಡಿಸುವ ಕ್ರೀಡೆ. ರಾಜಕೀಯ ವಿಷಯಗಳು ಕ್ರೀಡೆಯಲ್ಲಿ ಮೇಲುಗೈ ಸಾಧಿಸಬಾರದು ಎಂದು ಮಿಯಾಂದಾದ್ ನುಡಿದರು.

Exit mobile version