ನವ ದೆಹಲಿ : ವಿರಾಟ್ ಕೊಹ್ಲಿಯ ಬಗ್ಗೆ ಸದಾ ಟೀಕೆಯಾಡುವ ಗೌತಮ್ ಗಂಭೀರ್ ಮತ್ತೊಮ್ಮೆ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ನೇರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದರೆ ಅವರು ಆರಂಭಿಕರಾಗಿ ಬ್ಯಾಟ್ ಮಾಡುವುದು ಬೇಡ ಇರುವಲ್ಲೇ ಇರಲಿ ಎಂಬುದು ಅವರ ಉತ್ತರವಾಗಿದೆ.
ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಗೇಮ್ ಪ್ಲಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ವಿರಾಟ್ ಕೊಹ್ಲಿಗೆ ಮುಂಬಡ್ತಿ ಕೊಡುವ ವಿಚಾರದಲ್ಲಿ ನಡೆಸುವ ಚರ್ಚೆ ಅಥವಾ ಪ್ರಶ್ನೆ ಮೂರ್ಖತನದ್ದು. ರೋಹಿತ್ ಶರ್ಮ ಹಾಗೂ ಕೆ.ಎಲ್ ರಾಹುಲ್ ಆರಂಭಿಕ ಜೋಡಿಯಾಗಿ ತಂಡದಲ್ಲಿ ಇರುವ ತನಕ ಅದು ಅಸಾಧ್ಯ. ಒಂದು ವೇಳೆ ಆರಂಭಿಕ ಬ್ಯಾಟರ್‌ಗಳು ೧೦ ಓವರ್‌ಗಳ ತನಕ ಆಡಿದರೆ, ಸೂರ್ಯಕುಮಾರ್ ಯಾದವ್‌ಗೆ ಮೂರನೇ ಕ್ರಮಾಂಕದಲ್ಲಿ ಅವಕಾಶ ಕೊಡಬೇಕು. ಅದಕ್ಕಿಂತ ಮೊದಲೇ ವಿಕೆಟ್ ಬಿದ್ದರೆ ವಿರಾಟ್ ಕೊಹ್ಲಿ ಇಳಿಯುವುದು ಉತ್ತಮ,” ಎಂದು ಅವರು ಹೇಳಿದ್ದಾರೆ.
ಇದೇ ಕಾರ್ಯಕ್ರಮದಲ್ಲಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಹೇಡನ್ ಅವರು ಮಾತನಾಡಿ “ವಿರಾಟ್ ಕೊಹ್ಲಿ ಎರಡನೇ ಕ್ರಮಾಂಕದಲ್ಲಿ ಇಳಿಯುವುದೇ ಉತ್ತಮ. ಅವರು ವಿಕೆಟ್ ಬೀಳದಂತೆ ನೋಡಿಕೊಳ್ಳಬಲ್ಲರು. ಸ್ಪಿನ್ ಬೌಲಿಂಗ್‌ಗೆ ಸ್ವಲ್ಪ ಮಟ್ಟಿಗೆ ಅಧೀರರಾದರೂ, ವೇಗದ ಬೌಲರ್‌ಗಳನ್ನು ಹಿಮ್ಮೆಟ್ಟಿಸಬಲ್ಲರು,” ಎಂದು ಅವರು ಹೇಳಿದರು.
ಇದನ್ನೂ ಓದಿ | PERFORMAX | ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಪರ್ಫಾರ್ಮ್ಯಾಕ್ಸ್‌ಗೆ ಬ್ರಾಂಡ್ ಅಂಬಾಸಿಡರ್