Site icon Vistara News

WPL 2024 : ಡೆಲ್ಲಿ ತಂಡದ ನೂತನ ಜೆರ್ಸಿ ಬಿಡುಗಡೆ, ಡಿಪಿ ವರ್ಲ್ಡ್​ ಟೈಟಲ್ ಪಾರ್ಟ್​​ನರ್​​

Delhi Capitals

ಬೆಂಗಳೂರು: ಮಹಿಳೆಯರ ಪ್ರೀಮಿಯರ್​ ಲೀಗ್​ನಲ್ಲಿ (WPL 2024) ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡಿಪಿ ವರ್ಲ್ಡ್ ಟೈಟಲ್​ ಪ್ರಾಯೋಜಕತ್ವ ಪಡೆದುಕೊಂಡಿದೆ. ಈ ಮೂಲಕ ದೀರ್ಘಾವಧಿಯ ಪಾಲುದಾರಿಕೆಯೊಂದನ್ನು ಫ್ರಾಂಚೈಸಿ ಘೋಷಿಸಿದೆ. ಸ್ಮಾರ್ಟ್ ಎಂಡ್-ಟು-ಎಂಡ್ ಸಪ್ಲೈ ಚೈನ್ ಆಗಿರುವ ಡಿಪಿ ವರ್ಲ್ಡ್ 2024 ರಿಂದ ದೆಹಲಿ ಕ್ಯಾಪಿಟಲ್ ಮಹಿಳಾ ತಂಡದ ಟೈಟಲ್ ಪಾರ್ಟ್​ನರ್​ ಆಗಿರಲಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಜೆರ್ಸಿಯನ್ನು ಅನಾವರಣ ಮಾಡಲಾಯಿತು.

ಪಾಲುದಾರಿಕೆಯ ಭಾಗವಾಗಿ ಡೆಲ್ಲಿ ಕ್ಯಾಪಿಟಲ್ಸ್ ನ ಅಧಿಕೃತ ಮ್ಯಾಚ್ ಜೆರ್ಸಿ ಮತ್ತು ಟ್ರೈನಿಂಗ್ ಜೆರ್ಸಿಯಲ್ಲಿ ಡಿಪಿ ವರ್ಲ್ಡ್ ನ ಲೋಗೋ ಪ್ರಮುಖವಾಗಿ ಕಾಣಿಸಿಕೊಳ್ಳಲಿದೆ. ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಜೆಮಿಮಾ ರೋಡ್ರಿಗಸ್ ಅವರಿದ್ದರು.

ಡಿಪಿ ವರ್ಲ್ಡ್ ಮುಖ್ಯ ವಾಣಿಜ್ಯ ಅಧಿಕಾರಿ ಅಶ್ವನಿ ನಾಥ್ ಈ ವೇಳೆ ಮಾತನಾಡಿ“ನಾವು ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ಟೈಟಲ್ ಪಾರ್ಟ್ನರ್ ಆಗುವ ಮೂಲಕ ನಮ್ಮ ಪಾಲುದಾರಿಕೆಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಮಹಿಳೆಯರ ಕ್ರಿಕೆಟ್ ಗೆ ಹೆಚ್ಚು ಹೆಚ್ಚು ಆಟಗಾರ್ತಿಯರು ಬರುತ್ತಿದ್ದಾರೆ. ಅಭಿಮಾನಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿರುವ ಮೂಲಕ ಮಹಿಳಾ ಕ್ರಿಕೆಟ್ ನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ ಎಂದು ಹೇಳಿದರು.

ಇದನ್ನೂ ಓದಿ : Karnataka Budget 2024 : ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವವರಿಗೆ 6 ಕೋಟಿ ಬಹುಮಾನ; ಕ್ರೀಡಾಳುಗಳಿಗೆ ಭರ್ಜರಿ ಕೊಡುಗೆ

ಡಿಪಿ ವರ್ಲ್ಡ್ ನಲ್ಲಿ ಉದ್ಯೋಗಿಗಳಿಗೆ ಹೆಚ್ಚು ಅಗತ್ಯವಿರುವ ಕೌಶಲ್ಯ ಮತ್ತು ಪ್ರತಿಭೆಯನ್ನು ಹೆಚ್ಚಿಸುತ್ತಿದ್ದೇವೆ. 2025 ರ ವೇಳೆಗೆ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಶೇ.20 ಕ್ಕೆ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ಈ ಬದ್ಧತೆಯೊಂದಿಗೆ ಈಗ ದೆಹಲಿ ಕ್ಯಾಪಿಟಲ್ಸ್ ನೊಂದಿಗೆ ನಮ್ಮ ಪಾಲುದಾರಿಕೆಯನ್ನು ವಿಸ್ತರಣೆ ಮಾಡಲಾಗತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ನಾವು ಕ್ರಿಕೆಟ್ ಮತ್ತು ಜಾಗತಿಕ ವ್ಯಾಪಾರ ಎರಡನ್ನೂ ಕ್ರಾಂತಿಕಾರಕವಾಗಿ ಮುಂದುವರಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ’’ ಎಂದು ತಿಳಿಸಿದರು.

ಈ ಹೊಸ ಪಾಲುದಾರಿಕೆ ಬಗ್ಗೆ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ನ ಸಿಇಒ ಸುಖವಿಂದರ್ ಸಿಂಗ್ “ನಮ್ಮ ಮಹಿಳಾ ತಂಡಕ್ಕೆ ಡಿಪಿ ವರ್ಲ್ಡ್ ಟೈಟಲ್ ಪಾಲುದಾರ ಸಂಸ್ಥೆಯಾಗುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ. ಮಹಿಳೆಯರನ್ನು ಕ್ರೀಡೆಯ ಕಡೆಗೆ ಆಸಕ್ತಿ ತೋರುವಂತೆ ಮಾಡುವ ಬದ್ಧತೆಯನ್ನು ಹೊಂದಿರುವ ಡಿಪಿ ವರ್ಲ್ಡ್ ನ ದೀರ್ಘಾವಧಿಯ ಬದ್ಧತೆಯು ಶ್ಲಾಘನೀಯ. ಈ ಪಾಲುದಾರಿಕೆಯ ಬಗ್ಗೆ ನಾವು ಹೆಚ್ಚು ಉತ್ಸುಕರಾಗಿದ್ದೇವೆ. ನಮ್ಮ ಐಪಿಎಲ್ ತಂಡದೊಂದಿಗೆ ಯಶಸ್ವಿ ಇನ್ನಿಂಗ್ಸ್ ನಂತರ ಈ ಸಹಯೋಗವು ಒಂದು ಸಹಜ ಪ್ರಕ್ರಿಯೆಯಾಗಿದೆ. ಎರಡೂ ತಂಡಗಳಿಗೆ ಇದೊಂದು ಮೈಲಿಗಲ್ಲಿನ ಕ್ಷಣವಾಗಿದೆ. ಈ ಪಾಲುದಾರಿಕೆ ಮೂಲಕ ದೆಹಲಿ ಕ್ಯಾಪಿಟಲ್ಸ್ ಮತ್ತು ಡಿಪಿ ವರ್ಲ್ಡ್ ಒಟ್ಟಾಗಿ ಕ್ರಿಕೆಟ್ ಋತುವನ್ನು ಆರಂಭಿಸುವುದನ್ನು ಎದುರು ನೋಡುತ್ತಿದ್ದೇವೆ’’ ಎಂದರು.

Exit mobile version