Site icon Vistara News

Viral Video: ನಾಟೌಟ್​ ಆದರೂ ಔಟ್​ ನೀಡಿದ ಮಹಿಳಾ ಅಂಪೈರ್; ಆ ಮೇಲೆ ಏನಾಯಿತು?

Ground Umpire Signals Out

ಸಿಡ್ನಿ: ಕ್ರಿಕೆಟ್(Cricket)​ ಆಟವೆಂದರೆ ‘ಜಂಟಲ್ ಮ್ಯಾನ್ ಗೇಮ್’ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಇದು ಕೂಡ ತುಂಬಾ ತಮಾಷೆಯಾಗಿರುತ್ತದೆ. ಇದೀಗ ಮಹಿಳಾ ಅಂಪೈರ್​ ಒಬ್ಬರು ನೀಡಿದ ತೀರ್ಪಿನ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ.

ನಾರ್ತ್ ಸಿಡ್ನಿ ಓವಲ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಮಹಿಳಾ ಏಕದಿನ ಕ್ರಿಕೆಟ್​ ಪಂದ್ಯದಲ್ಲಿ ಟಿವಿ ಅಂಪೈರ್ ಎಲ್‌ಬಿಡಬ್ಲ್ಯೂ ರಿವ್ಯೂಗೆ ನಾಟ್ ಔಟ್ ಎಂದು ಹೇಳಿದರು. ಆದರೆ ಯಾವುದೇ ಗುಂಗಿನಲ್ಲಿದ್ದ ಗ್ರೌಂಡ್ ಅಂಪೈರ್ ಇದನ್ನು ತಪ್ಪಾಗಿ ಓಟ್​ ಎಂದು ತೀರ್ಪು ನೀಡಿದರು. ತಕ್ಷಣ ತಮ್ಮ ತಪ್ಪು ನಿರ್ಧಾರವನ್ನು ಮನಗಂಡ ಅವರು ನಗುತ್ತಲೇ ಕ್ಷಮಿಸಿ ಎಂದು ಹೇಳುವ ಮೂಲಕ ನಾಟೌಟ್​ ತೀರ್ಪು ನೀಡಿದರು. ಈ ವೇಳೆ ಆಸ್ಟ್ರೇಲಿಯಾ ಆಟಗಾತಿಘರು ಕೂಡ ಅಂಪೈರ್​ ತಪ್ಪು ತೀರ್ಪು ಕಂಡು ಜೋರಾಗಿ ನಕ್ಕಿದ್ದಾರೆ. ಅತ್ತ ಕಾಮೆಂಟ್ರಿ ಮಾಡುತ್ತಿದ್ದವರು ಕೂಡ ತಮಾಷೆಯ ಮಾತುಗಳ ಮೂಲಕ ಅಂಪೈರ್​ ಕಾಲೆಳೆದಿದ್ದಾರೆ.

ಮಳೆ ಪೀಡಿತ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಡಿಆರ್​ಎಸ್​ ನಿಯಮದನ್ವಯ 84 ರನ್​ಗಳ ಗೆಲುವು ಸಾಧಿಸಿತು. 45 ಓವರ್​ಗೆ ಸೀಮಿತಗೊಳಿಸಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟ್​ಗೆ 229 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 29.3 ಓವರ್​ಗಳಲ್ಲಿ 149 ರನ್​ಗೆ ಸರ್ವಪತನ ಕಂಡಿತು.

ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್​ನಲ್ಲಿ (BBL 2024)ಯೂ ಮೂರನೇ ಅಂಪೈರ್ ನೀಡಿದ ತೀರ್ಪೊಂದು ಬಾರಿ ವೈರಲ್​ ಆಗಿತ್ತು. ನಾಟೌಟ್​ ಆಗಿದ್ದರೂ ಕೂಡ ಟಿವಿ ಅಂಪೈರ್​ ಇದನ್ನು ಔಟ್​ ಎಂದು ತೀರ್ಪು ನೀಡಿ ಬಳಿಕ ಫೀಲ್ಡ್​ ಅಂಪೈರ್​ ಈ ಸಮಸ್ಯೆಯನ್ನು ಬಗೆಹರಿಸಿದ್ದರು. ಮೂರನೇ ಅಂಪೈರ್​ ತೀರ್ಪು ಕಂಡು ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಜೋರಾಗಿ ನಕ್ಕಿದ್ದರು. ಈ ವಿಡಿಯೊ ವೈರಲ್(Viral Video)​ ಆಗಿತ್ತು.

ಇದನ್ನೂ ಓದಿ Viral Video: ಕಾಳಿಂಗ ಸರ್ಪದೊಂದಿಗೆ ಮಗುವಿನ ಆಟ; ಇಲ್ಲಿದೆ ಬೆಚ್ಚಿ ಬೀಳಿಸುವ ವಿಡಿಯೊ

ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ಇಮಾದ್ ವಾಸಿಂ ಎಸೆದ ಮೂರನೇ ಓವರ್​ನ 4ನೇ ಎಸೆತದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಬ್ಯಾಟರ್ ಜೇಮ್ಸ್ ವಿನ್ಸ್​ ನೇರವಾಗಿ ಬ್ಯಾಟ್​ ಬೀಸಿದರು. ಈ ವೇಳೆ ಚೆಂಡು ವಾಸಿಂ ಕೈಗೆ ಬಡಿದು ನೇರವಾಗಿ ವಿಕೆಟ್​ಗೆ ತಾಗಿತು. ಮೆಲ್ಬೊರ್ನ್​ ಆಟಗಾರರು ಔಟ್​ಗಾಗಿ ಮನವಿ ಮಾಡಿದರು. ಫೀಲ್ಡ್​ ಅಂಪೈರ್​ ಇದನ್ನು ಮೂರನೇ ಅಂಪೈರ್​ಗೆ ತೀರ್ಪು ನೀಡುವಂತೆ ಮನವಿ ಸಲ್ಲಿಸಿದ್ದರು.

ಟಿವಿ ಅಂಪೈರ್​ ಇದನ್ನು ಪರೀಕ್ಷಿಸಿದ ವೇಳೆ ನಾನ್​ ಸ್ಟ್ರೈಕ್​ನಲ್ಲಿದ್ದ ಬ್ಯಾಟರ್​ ವಿಕೆಟ್​ಗೆ ಚೆಂಡು ಬಡಿಯುವ ಮುನ್ನವೇ ಕ್ರೀಸ್​ನಲ್ಲಿರುವು ಸ್ಪಷ್ಟವಾಗಿ ಕಾಣಿಸಿತು. ಇದು ಮೈದಾನದ ದೊಡ್ಡ ಪರೆದೆಯಲ್ಲಿ ಪ್ರಸಾರಗೊಳ್ಳುತ್ತಿತ್ತು. ಅಚ್ಚರಿ ಎಂಬಂತೆ ಇದನ್ನು ಟಿವಿ ಅಂಪೈರ್​ ಔಟ್​ ಎಂದು ತೀರ್ಪು ನೀಡಿದ್ದರು. ಇತ್ತಂಡಗಳ ಆಟಗಾರರು ಕೂಡ ಒಂದು ಕ್ಷಣ ಅಚ್ಚರಿಗೊಂಡರು. ಅರೆ, ಇದು ಹೇಗೆ ಸಾಧ್ಯ ನಾಟೌಟ್​ ಎನ್ನುವುದು ಸ್ಪಷ್ಟವಾಗಿ ಗೋಚರಿಸಿದರೂ ಔಟ್​ ಏಕೆ ನೀಡಿದರು ಎಂದು ದಂಗಾಗಿದ್ದರು. ತಕ್ಷಣ ಎಚ್ಚೆತ್ತುಕೊಂಡ ಫೀಲ್ಡ್​ ಅಂಪೈರ್​ ಇದು ತಾಂತ್ರಿಕ ಕಾರಣದಿಂದ ಹೀಗಾಗಿದೆ ಕ್ಷಮಿಸಿ ಎಂದು ಹೇಳಿ ನಾಟೌಟ್ ನೀಡಿದ್ದರು.

Exit mobile version