ಮುಂಬಯಿ: ದೀರ್ಘ ವಿಳಂಬ ಮತ್ತು ಮೂಲ ಬೆಲೆಯನ್ನು ಇಳಿಕೆ ಮಾಡಿದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಡ್ರೀಮ್ 11 ಅನ್ನು ಭಾರತ ಕ್ರಿಕೆಟ್ ತಂಡದ (Team India) ಹೊಸ ಪ್ರಾಯೋಜಕರಾಗಿ ಆಯ್ಕೆ ಮಾಡಿದೆ. ಲರ್ನಿಂಗ್ ಸಂಸ್ಥೆ ಬೈಜುಸ್ ಕಳೆದ ಮಾರ್ಚ್ನಲ್ಲಿ ಒಪ್ಪಂದವನ್ನು ಅಕಾಲಿಕವಾಗಿ ಕೊನೆಗೊಳಿಸಿದ ಆ ಸ್ಥಾನಕ್ಕೆ ಫ್ಯಾಂಟಸಿ ಗೇಮಿಂಗ್ ಪ್ಲಾಟ್ಫಾರ್ಮ್ ಡ್ರಿಮ್ 11 (Dream 11) ಆಯ್ಕೆಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ರೋಹಿತ್ ಶರ್ಮಾ ಬಳಗ ವಿಂಡೀಸ್ ಸರಣಿಯ ವೇಳೆ ಧರಿಸುವ ಜೆರ್ಸಿಯ (Team India Jersey) ಮುಂಭಾಗ ಮತ್ತು ತೋಳುಗಳಲ್ಲಿ ಡ್ರೀಮ್ 11 ಲೋಗೊ ಇರಲಿದೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮುಂಚಿತವಾಗಿ ಬಿಸಿಸಿಐ ಒಪ್ಪಂದವನ್ನು ಅಂತಿಮಗೊಳಿಸಬಹುದೇ ಎಂಬ ಬಗ್ಗೆ ಅನುಮಾನಗಳು ಇದ್ದವು. ಆದಾಗ್ಯೂ, ನ್ಯೂಸ್ 18 ವರದಿಯ ಪ್ರಕಾರ, ಭಾರತೀಯ ಮಂಡಳಿಯು ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ. ಒಪ್ಪಂದ ಅಂತಿಮಗೊಳಿಸುವ ದಲು, ಬಿಸಿಸಿಐ ಒತ್ತಡಕ್ಕೆ ಮಣಿಯಬೇಕಾಯಿತು. ಪ್ರಾಯೋಜಕತ್ವ ಒಪ್ಪಂದದ ಮೂಲ ಬೆಲೆಯನ್ನು ಕಡಿಮೆ ಮಾಡಿತು. ಭಾರತ ಕ್ರಿಕೆಟ್ ತಂಡದ ಪ್ರಾಯೋಜಕರ ಮೂಲ ಬೆಲೆಯನ್ನು 350 ಕೋಟಿ ರೂ.ಗೆ ಇಳಿಸಲಾಗಿದೆ ಎಂಬುದಾಗಿ ವರದಿಯಾಗಿದೆ.
ಇ ಲರ್ನಿಂಗ್ ಸಂಸ್ಥೆ ಬೈಜುಸ್ 2018ರಲ್ಲಿ ಕೊನೆಯಲ್ಲಿ ಸುಮಾರು 287 ಕೋಟಿ ರೂಪಾಯಿಗಳ ಒಪ್ಪಂದವನ್ನು ಬಿಸಿಸಿಐ ಜತೆ ಮಾಡಿತ್ತು. ಎಜು ಟೆಕ್ ಕಂಪನಿಯು ನಂತರ ಒಪ್ಪಂದವನ್ನು 2023ರವರೆಗೆ ವಿಸ್ತರಿಸಿತು, ಸುಮಾರು 55 ಮಿಲಿಯನ್ ಡಾಲರ್ ಅಥವಾ 450 ಕೋಟಿ ರೂಪಾಯಿಗಳ ಒಪ್ಪಂದದ ಪ್ರಕಾರ ದ್ವಿಪಕ್ಷೀಯ ಸರಣಿಯ ಪಂದ್ಯಗಳಿಗೆ 5.5 ಕೋಟಿ ರೂ., ಐಸಿಸಿ ಪಂದ್ಯಕ್ಕೆ 1.7 ಕೋಟಿ ರೂಪಾಯಿ ನಿಗದಿ ಮಾಡಲಾಗಿತ್ತು. ಯಾಕೆಂದರೆ ಐಸಿಸಿ ಪಂದ್ಯಾವಳಿಗಳಲ್ಲಿ, ತಂಡಗಳ ಆಟಗಾರರ ಜರ್ಸಿಯ ಮುಂಭಾಗದಲ್ಲಿ ಪ್ರಾಯೋಜಕರ ಲೋಗೋವನ್ನು ಧರಿಸಲು ಅವಕಾಶವಿಲ್ಲ.
ಭಾರತ ಕ್ರಿಕೆಟ್ ತಂಡದ ಪ್ರಾಯೋಜಕರು
- ವಿಲ್ಸ್: 1990
- ಐಟಿಸಿ: 1990
- ಸಹಾರಾ ಗ್ರೂಪ್: 2002-2013
- ಸ್ಟಾರ್ ಇಂಡಿಯಾ: 2014-2017
- ಒಪ್ಪೋ: 2017-2022
- ಬೈಜುಸ್: 2022-23
ಬಿಸಿಸಿಐ ಈ ಬಾರಿ ದೊಡ್ಡ ನಿರೀಕ್ಷೆಯೊಂದಿಗೆ ಬಿಡ್ ಕರೆದಿತ್ತು. ಆದರೆ, ಯಾರೂ ತೆಗೆದುಕೊಳ್ಳದ ಕಾರಣ ಬಿಸಿಸಿಐ ಪ್ರತಿ ಪಂದ್ಯದ ಮೂಲ ಬೆಲೆಯನ್ನು 3 ಕೋಟಿ ರೂ.ಗೆ ಇಳಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪಂದ್ಯಾವಳಿಗಳಿಗೆ ಪ್ರತಿ ಪಂದ್ಯಕ್ಕೆ ಮೂಲ ಬೆಲೆ 1 ಕೋಟಿ ರೂಪಾಯಿ ನಿಗದಿ ಮಾಡಿದೆ.
ಇದನ್ನೂ ಓದಿ : Team India : ವಿದೇಶಿ ಲೀಗ್ಗಳಲ್ಲಿ ಆಡುವ ಕ್ರಿಕೆಟಿಗರೆ ಖೆಡ್ಡಾ ತೋಡಲು ಬಿಸಿಸಿಐ ಪ್ಲ್ಯಾನ್!
ಇಂಡಿಯನ್ ಫ್ಯಾಂಟಸಿ ಯೂನಿಕಾರ್ನ್ ಡ್ರೀಮ್ 11 ಐಪಿಎಲ್ 2018ರಿಂದ ಭಾರತೀಯ ಕ್ರಿಕೆಟ್ನೊಂದಿಗೆ ಸಂಬಂಧ ಹೊಂದಿದೆ. ಮೊದಲಿಗೆ, ಡ್ರೀಮ್ 11 ಐಪಿಎಲ್ ಪ್ರಾಯೋಜಕರಾಗಿತ್ತು. ಒಪ್ಪೋ ಹೊರಬಂದಾಗ ಐಪಿಎಲ್ 2020ರ ಶೀರ್ಷಿಕೆ ಪ್ರಾಯೋಜಕರಾಗಿತ್ತು. ಆದಾಗ್ಯೂ, ಡ್ರೀಮ್ 11 ಮತ್ತು ಬಿಸಿಸಿಐ ನಡುವಿನ ಪ್ರಸ್ತುತ ಒಪ್ಪಂದದ ಮೌಲ್ಯದ ಬಗ್ಗೆ ಮಾಹಿತಿ ಇಲ್ಲ .
ಡಬ್ಲ್ಯುಟಿಸಿ ಫೈನಲ್ಗೆ ಮೊದಲು ಬಿಸಿಸಿಐ ಅಡಿಡಾಸ್ ಅನ್ನು ಅಧಿಕೃತ ಕಿಟ್ ಪ್ರಾಯೋಜಕರಾಗಿ ನೇಮಿಸಿಕೊಂಡಿತ್ತು. ವಿಶ್ವಕಪ್ 2019 ರ ನಂತರ ಕ್ರೀಡಾ ಸರಕುಗಳ ದೈತ್ಯ ನೈಕ್ನಿಂದ ಬೇರ್ಪಟ್ಟ ನಂತರ ಇದು ಮಂಡಳಿಯಿಂದ ಪ್ರಮುಖ ಹೆಜ್ಜೆಯಾಗಿದೆ.