ನವ ದೆಹಲಿ : ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಅವರು ಶುಕ್ರವಾರ ಮುಂಜಾನೆ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದಾರೆ. ಘಟನೆಯಲ್ಲಿ ಅವರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿವೆ. ಕಾರು ಅಪಘಾತಕ್ಕೆ ಒಳಗಾಗಲು ಮುಂಜಾನೆ ಮಂಜು ಕಾರಣ ಎಂದು ಹೇಳಲಾಗುತ್ತಿದ್ದರೂ, ಕಾರು ಚಲಾಯಿಸುತ್ತಿದ್ದ ಪಂತ್ ನಿದ್ದೆಗೆ ಜಾರಿದ್ದು ಕೂಡ ನಿಯಂತ್ರಣ ತಪ್ಪಲು ಕಾರಣ ಎನ್ನಲಾಗಿದೆ. ಇವೆಲ್ಲದರ ನಡುವೆ ಪಂತ್ ಅತಿ ವೇಗದಿಂದ ಕಾರು ಚಲಾಯಿಸುತ್ತಿದ್ದರು ಎಂದೂ ಹೇಳಲಾಗುತ್ತಿದೆ.
ರಿಷಭ್ ಪಂತ್ ಅವರು ಅತಿ ವೇಗದಲ್ಲಿ ಕಾರು ಓಡಿಸುತ್ತಾರೆ ಎಂಬ ಆರೋಪಗಳೂ ಇವೆ. 2017ರಲ್ಲಿ ಅವರೊಮ್ಮೆ ತಮ್ಮ ಮರ್ಸಿಡೀಸ್ ಬೆಂಜ್ ಕಾರನ್ನು 120 ಕಿಲೋ ಮೀಟರ್ ವೇಗದಲ್ಲಿ ಚಲಾಯಿಸಿದ್ದರು. ಅದಕ್ಕಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ ಹಾಕಿಕೊಂಡಿದ್ದರು. ಅದಕ್ಕಿಂತ ಮಿಗಿಲಾಗಿ ರಿಷಭ್ ಪಂತ್ ಅವರಿಗೆ ಟೀಮ್ ಇಂಡಿಯಾದ ಸದಸ್ಯ ಶಿಖರ್ ಧವನ್ ಅವರು ನಿಧಾನವಾಗಿ ಕಾರು ಓಡಿಸುವಂತೆ ಸಲಹೆ ನೀಡುತ್ತಿರುವ ವಿಡಿಯೊ ವೈರಲ್ ಆಗಿದೆ.
ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಶಿಖರ್ ಧವನ್ ಹಾಗೂ ರಿಷಭ್ ಪಂತೆ ಜತೆಯಾಗಿ ಆಡಿದ್ದರು. ಈ ವೇಳೆ ಅವರಿಬ್ಬರ ನಡುವಿನ ಮಾತುಕತೆ ನಡೆಸಿದ ವಿಡಿಯೊ ವೈರಲ್ ಆಗಿದೆ. ರಿಷಭ್ ಪಂತ್ ಅವರು ನನಗೆ ಏನಾದರೂ ಸಲಹೆ ಕೊಡುತ್ತೀರಾ ಎಂದು ಧವನ್ಗೆ ಕೇಳುತ್ತಾರೆ. ಈ ವೇಳೆ ಅವರು ಧವನ್, ಕಾರನ್ನು ನಿಧಾನವಾಗಿ ಓಡಿಸು ಎಂದು ಹೇಳುತ್ತಾರೆ. ಆಗ ಅವರಿಬ್ಬರೂ ನಗುತ್ತಾರೆ.
ಇದನ್ನೂ ಓದಿ | Rishabh Pant | ರಿಷಭ್ ಪಂತ್ ಚೇತರಿಕೆಗೆ ಹಾರೈಸಿದ ಪಾಕಿಸ್ತಾನ ಕ್ರಿಕೆಟಿಗರು