ದುಬೈ: ಎರಡನೇ ಆವೃತ್ತಿಯ ಇಂಟರ್ನ್ಯಾಷನಲ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್ ಗೆ ಡೇವಿಡ್ ವಾರ್ನರ್ ಅವರನ್ನು ನಾಯಕನನ್ನಾಗಿ ದುಬೈ ಕ್ಯಾಪಿಟಲ್ಸ್ ಭಾನುವಾರ ಪ್ರಕಟಿಸಿದೆ. ಅನುಭವಿ ಆರಂಭಿಕ ಬ್ಯಾಟರ್ ದುಬೈ ಕ್ಯಾಪಿಟಲ್ಸ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯದ್ದೇ ತಂಡವಾಗಿದೆ. ಹೀಗಾಗಿ ಅವರು ಯುಎಇನಲ್ಲಿ ನಡೆಯು ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ.
ವಾರ್ನರ್ ಅನುಭವಿ ಆಟಗಾ ಮತ್ತು ವಿಶ್ವದಾದ್ಯಂತ ಅನೇಕ ಟಿ20 ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಕ್ಯಾಶ್ ರಿಚ್ ಐಪಿಎಲ್ ಇತಿಹಾಸದಲ್ಲಿ ಅವರನ್ನು ಅತ್ಯುತ್ತಮ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅಲ್ಲಿ ಅವರು ಸನ್ರೈಸರ್ಸ್ ಹೈದರಾಬಾದ್ನ ನಾಯಕರಾಗಿ ಉತ್ತಮ ಸಾಧನೆ ಮಾಡಿದ್ದರು. 2016 ರಲ್ಲಿ ಅವರು ಈ ತಂಡದಲ್ಲಿ ಏಕೈಕ ಪ್ರಶಸ್ತಿ ಪಡೆದುಕೊಂಡಿದ್ದರು.
ಸಿಡ್ನಿಯಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಆಸೀಸ್ ಸೂಪರ್ಸ್ಟಾರ್ ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಆಟದ ದೀರ್ಘ ಸ್ವರೂಪದಿಂದ ನಿವೃತ್ತಿಯಾದ ನಂತರ ಅವರು ಹಲವಾರು ಫ್ರ್ಯಾಂಚೈಸ್ ಲೀಗ್ಗಳಲ್ಲಿ ಆಡಲಿದ್ದಾರೆ.
ಜನವರಿ 20ರಿಂದ ಶುರು
ಇಂಟರ್ನ್ಯಾಷನಲ್ ಲೀಗ್ ಟಿ20 ಜನವರಿ 20 ರಿಂದ ಫೆಬ್ರವರಿ 18 ರವರೆಗೆ ನಡೆಯಲಿದೆ. ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಲು ಮತ್ತು ಮುನ್ನಡೆಸಲು ದುಬೈಗೆ ತೆರಳುವ ಮೊದಲು ಅವರು ಬಿಬಿಎಲ್ 13ನಲ್ಲಿ ಸಿಡ್ನಿ ಥಂಡರ್ ಪರ ಆಡಲಿದ್ದಾರೆ. ದುಬೈ ಮೂಲದ ಫ್ರಾಂಚೈಸಿಯಲ್ಲಿ ಸಿಕಂದರ್ ರಾಜಾ, ಜೋ ರೂಟ್, ರಹಮಾನುಲ್ಲಾ ಗುರ್ಬಾಜ್ ಮತ್ತು ರೋವ್ಮನ್ ಪೊವೆಲ್ ಅವರಂತಹ ದೊಡ್ಡ ಹೆಸರುಗಳಿವೆ. ವೃತ್ಯ ಅರವಿಂದ್ ಅವರಂತಹ ಸ್ಥಳೀಯ ತಾರೆಗಳು ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : Virat Kohli : ಕೊಹ್ಲಿಯನ್ನು ಹೊಗಳಿದ ಮಾಜಿ ವೇಗದ ಬೌಲರ್
ಕಳೆದ ಆವೃತ್ತಿಯ ಐಎಲ್ಟಿ 20 ಟೂರ್ನಿಯಲ್ಲಿ ಕ್ಯಾಪಿಟಲ್ಸ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ವಿರುದ್ಧ ಸೋಲನುಭವಿಸಿತ್ತು. ವಾರ್ನರ್ ಸೇರ್ಪಡೆಯೊಂದಿಗೆ ಅವರು ಉತ್ತಮ ಪ್ರದರ್ಶನ ನೀಡಲು ಮತ್ತು ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವ ಅವಕಾಶ ಸೃಷ್ಟಿ ಮಾಡಿದ್ದಾರೆ. ಕ್ರಿಯಾತ್ಮಕ ಎಡಗೈ ಬ್ಯಾಟರ್ ಇತ್ತೀಚಿನ ದಿನಗಳಲ್ಲಿ ಯುಎಇಯಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ.
ಎಮಿರೇಟ್ಸ್ನಲ್ಲಿ ನಡೆದ 2021 ರ ಟಿ20 ವಿಶ್ವಕಪ್ನಲ್ಲಿ ವಾರ್ನರ್ ಪಂದ್ಯಾವಳಿಯ ಅತ್ಯುತ್ತಮ ಆಟಗಾರರಾಗಿದ್ದರು. ಅವರು ಏಳು ಇನ್ನಿಂಗ್ಸ್ಗಳಲ್ಲಿ ಒಟ್ಟು 289 ರನ್ಗಳನ್ನು ಗಳಿಸಿದ್ದರು. ಮೊದಲ ಪುರುಷರ ಟಿ 20 ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾದ ಮುಂಬರುವ ವೈಟ್-ಬಾಲ್ ಸರಣಿಯಲ್ಲಿ ಆಯ್ಕೆಗೆ 37 ವರ್ಷದ ವಾರ್ನರ್ ಅಲಭ್ಯರಾಗುವ ಸಾಧ್ಯತೆಯಿದೆ.