ದುಬೈ: ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿರುವ ಭಾರತದ ರೋಹನ್ ಬೋಪಣ್ಣ(Rohan Bopanna) ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ(Matthew Ebden) ಜೋಡಿ ದುಬೈ ಟೆನಿಸ್ ಚಾಂಪಿಯನ್‌ಷಿಪ್‌ನ(Dubai Tennis Championships) ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಜತೆಗೆ ಭಾರತದ ಯೂಕಿ ಭಾಂಬ್ರಿ(Yuki Bhambri) ಮತ್ತು ಡಚ್‌ನ ರಾಬಿನ್ ಹಾಸೆ ಜೋಡಿಯೂ ಕ್ವಾರ್ಟರ್ ಫೈನಲ್ ಟಿಕೆಟ್ ಪಡೆದಿದೆ. ಆದರೆ, ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್ ಆರಂಭಿಕ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದರು.
16ರ ಘಟ್ಟದ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿಯು 7-6(4), 7-6(5) ಅಂತರದಿಂದ ಟುನೀಶಿಯಾದ ಸ್ಕಂದರ್ ಮನ್ಸೌರಿ ಮತ್ತು ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿದರು. ಇಂದು ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಇಂಡೋ-ಆಸೀಸ್ ಜೋಡಿ ಉರುಗ್ವೆಯ ಏರಿಯಲ್ ಬೆಹರ್ ಮತ್ತು ಜೆಕ್ ಗಣರಾಜ್ಯದ ಆ್ಯಡಂ ಪಾವ್ಲಾಸೆಕ್ ಸವಾಲನ್ನು ಎದುರಿಸಲಿದೆ.
Rohan Bopanna and Matthew Ebden advance to next round at the ATP 500 Dubai Open!💪🇮🇳#Tennis #SKIndianSports pic.twitter.com/I9lnA9QYer
— Sportskeeda (@Sportskeeda) February 27, 2024
ಸುಮಿತ್ ನಗಾಲ್ 32ರ ಘಟ್ಟದ ಪಂದ್ಯದಲ್ಲಿ ಇಟಲಿಯ ಲೊರೆಂಜೊ ಸೋನೆಗೊ ವಿರುದ್ಧ 4-6, 7-5, 1-6ರಿಂದ ಸೋತು ಟೂರ್ನಿಯಿಂದ ಹೊರಬಿದ್ದರು.
ಇದನ್ನೂ ಓದಿ ಕನ್ನಡಿಗ ಬೋಪಣ್ಣಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ
ಯೂಕಿ ಭಾಂಬ್ರಿ ಮತ್ತು ಡಚ್‌ನ ರಾಬಿನ್ ಹಾಸೆ ಜೋಡಿ 6-7(6), 6-3, 10-8ರಿಂದ ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಮತ್ತು ಫ್ರಾನ್ಸ್‌ನ ಆಡ್ರಿಯನ್ ಮನ್ನಾರಿನೊ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಭಾಂಬ್ರಿ ಮತ್ತು ರಾಬಿನ್ ಜೋಡಿ ಕೂಡ ಇಂದು ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಮೋದಿಗೆ ವಿಶೇಷ ಉಡುಗೊರೆ ನೀಡಿದ್ದ ಬೋಪಣ್ಣ
ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್ (Australian Open) ಟೆನಿಸ್ ಟೂರ್ನಿಯ ಪುರಷರ ಡಬಲ್ಸ್‌ನಲ್ಲಿ ಚಾಂಪಿಯನ್ ಪಟ್ಟ ಅಲಂರಿಸಿದ ಕನ್ನಡಿಗ ರೋಹನ್ ಬೋಪಣ್ಣ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಭೇಟಿಯಾಗಿದ್ದರು. ಭೇಟಿ ವೇಳೆ ಮೋದಿಗೆ ವಿಶೇಷ ಉಡುಗೊರೆಯನ್ನು ಕೂಡ ನೀಡಿದ್ದರು.
I had the privilege to meet our honourable Prime Minister Modi ji today. This acknowledgement is very humbling & it was my honour to present the very racket that led me to become World no. 1 and the AO grand slam champion. Your grace has left me inspired & encouraged. @PMOIndia pic.twitter.com/R01Ae00RrR
— Rohan Bopanna (@rohanbopanna) February 2, 2024
ಫೆಬ್ರವರಿ 2ರಂದು ನವದೆಹಲಿಯ ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದ ಬೋಪಣ್ಣ ತಮ್ಮ ಟೆನಿಸ್ ಮತ್ತು ಫಿಟ್ನೆಸ್ ಅನುಭವದ ಬಗ್ಗೆ ಕೆಲ ಕಾಲ ಮೋದಿ ಜತೆ ಕುಶಲೋಪರಿ ಹಂಚಿಕೊಂಡಿದ್ದರು. ಬಳಿಕ ಟ್ವೀಟ್ ಮಾಡಿದ ಬೋಪಣ್ಣ “ಗೌರವಾನ್ವಿತ ಪ್ರಧಾನಿ ಮೋದಿ ಜಿ ಅವರನ್ನು ಭೇಟಿ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಇದೊಂದು ತುಂಬಾ ವಿನಮ್ರವಾದ ಭೇಟಿ. ನಾನು ವಿಶ್ವದ ನಂ.1 ಆಟಗಾರ ಮತ್ತು ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಲು ಕಾರಣವಾದ ಟೆನಿಸ್ ರಾಕೆಟ್ ಅನ್ನು ಮೋದಿ ಅವರಿಗೆ ನೀಡುವುದು ನನ್ನ ಪಾಲಿಗೆ ಗೌರವವಾಗಿದೆ. ನಿಮ್ಮ ಹಾರೈಕೆಯು ನನಗೆ ಸ್ಫೂರ್ತಿ ಮತ್ತು ಪ್ರೋತ್ಸಾಹವನ್ನು ತುಂಬಿದೆ” ಎಂದು ಬರೆದುಕೊಂಡಿದ್ದರು.