Site icon Vistara News

Moto GP : ಮೊದಲ ಸುತ್ತಿನ ರೇಸ್​ನಲ್ಲಿ ಟ್ರೋಫಿ ಗೆದ್ದ ಡುಕಾಟಿಯ ಫ್ರಾನ್ಸೆಸ್ಕೊ ಬ್ಯಾಗ್ನಿಯಾ

Ducati's Francesco Bagnia in the first round of the Moto GP race

#image_title

ಲಿಸ್ಬನ್​ (ಪೋರ್ಚುಗಲ್​): ವಿಶ್ವದ ಪ್ರತಿಷ್ಠಿತ ಮೋಟಾರ್ ಸೈಕಲ್​ ರೇಸ್ ಆಗಿರುವ ಮೋಟೋ ಜಿಪಿಯ ಮೊದಲ ಸುತ್ತಿನ ರೇಸ್​​ ಭಾನುವಾರ (ಮಾರ್ಚ್​​26ರಂದು) ಪೋರ್ಚುಗಲ್​ನಲ್ಲಿ ನಡೆಯಿತು. ಫೈನಲ್​ ಹಣಾಹಣಿಯಲ್ಲಿ 41 ನಿಮಿಷ, 25 ಸೆಕೆಂಡ್​ ಹಾಗೂ 401 ಮಿಲಿ ಸೆಕೆಂಡ್​​ಗಳಲ್ಲಿ ಗುರಿ ಮುಟ್ಟಿದ ಡುಕಾಟಿ ರೇಸಿಂಗ್​ ಸಂಸ್ಥೆಯ ಫ್ರಾನ್ಸೆಸ್ಕೊ ಬ್ಯಾಗ್ನಿಯಾ ಚಾಂಪಿಯನ್​ ಪಟ್ಟ ಅಲಂಕರಿಸಿದರು. ಇಟಲಿಯ ಸವಾರರಾಗಿರುವ ಅವರು ಸರಾಸರಿ ಗಂಟೆಗೆ 166.2 ಕಿಲೋ ಮೀಟರ್​ ವೇಗದಲ್ಲಿ ಬೈಕ್​ ಓಡಿಸಿ ವಿಜೇತರಾದರು. ಈ ಮೂಲಕ 21 ರೇಸ್​ಗಳ ಹಾಲಿ ಋತುವಿನ ಮೊದಲ ಟ್ರೋಫಿ ಅವರ ಪಾಲಾಯಿತು. ಫ್ರಾನ್ಸೆಸ್ಕೊ ಕಳೆದ ಆವೃತ್ತಿಯ ಮೊಟೊ ಜಿಪಿ ರೇಸ್​ನ ಚಾಂಪಿಯನ್​. ಹೀಗಾಗಿ ಮತ್ತೆ ಗೆಲುವಿನ ಓಟವನ್ನು ಅವರು ಮುಂದುವರಿಸಿದರು.

ಒಟ್ಟು 25 ಲ್ಯಾಪ್​ಗಳ ರೇಸನ್​ನ 3ನೇ ಲ್ಯಾಪ್​ನಲ್ಲಿ ಪೋಲ್​ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಹೋಂಡಾ ರೇಸಿಂಗ್ ಕಂಪನಿಯ ಮಾರ್ಕ್ ​ಮಾರ್ಕ್ವೆಜ್ ಅಪಘಾತಕ್ಕೆ ಒಳಗಾದರು. ರೇಸ್​ನ ಆರಂಭಿಕ ಗೆರೆಯಲ್ಲಿ ಅವಕಾಶ ಪಡೆಯುವ ಪೋಲ್​ ಸಿಟ್ಟರ್​ಗಳಿಗೆ ಗೆಲುವಿನ ಅವಕಾಶ ಹೆಚ್ಚಿರುತ್ತದೆ. ಆದರೆ, ಮಾರ್ಕ್ವೆಜ್​ ಸ್ವಯಂಕೃತ ಪ್ರಮಾದದಿಂದಾಗಿ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡರು. ಇದೇ ವೇಳೆ ಅವರು ಸ್ಥಳೀಯ ಪ್ರತಿಭೆ ಮಿಗುಯೆಲ್ ಒಲಿವರ್​ ಅವರನ್ನು ಬೈಕ್​ಗೆ ಗುದ್ದಿದರು. ಎಪ್ರಿಲಾ ಮೋಟರ್​ ರೇಸಿಂಗ್ ಸವಾರರಾಗಿರುವ ಅವರಿಗೂ ಪೋಡಿಯಂ ಫಿನಿಶ್​ ಮಾಡುವ ಅವಕಾಶ ತಪ್ಪಿತು.

ಇದನ್ನೂ ಓದಿ : Moto GP : ಜಿಯೊ ಹವಾ; ಜಗತ್ತಿನ ಅತಿ ದೊಡ್ಡ ಮೋಟಾರ್​ಸೈಕಲ್​ ರೇಸ್​ ಉಚಿತ ಪ್ರಸಾರ

ಎಪ್ರಿಲಾ ರೇಸಿಂಗ್ ಕಂಪನಿಯ ಮೇವರಿಕ್​ ವಿನಲೆಸ್​ 41’26.088 ನಿಮಿಷಗಳಲ್ಲಿ ರೇಸ್​ ಮುಗಿಸುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡರು. ಡುಕಾಟಿ ಸವಾರ ಮಾರ್ಕೊ ಬೆಸೆಚ್ಚಿ 41’28.127 ನಿಮಿಷಗಳಲ್ಲಿ ರೇಸ್ ಮುಗಿಸಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಡುಕಾಟಿ ಸವಾರರೇ ಆದ ಜಾನ್​ ಜಾರ್ಕೊ (41’33.461) ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡರು. ಮಾರ್ಕ್​ ಸಹೋದರ ಅಲೆಕ್ಸ್​ ಮಾರ್ಕ್ವೆಜ್​ ಡುಕಾಟಿ ರೇಸ್​ ಮೂಲಕ (41’33.526) ಐದನೇ ಸ್ಥಾನ ಪಡೆದರು. ಈ ಮೂಲಕ ಪೋರ್ಚುಗಲ್​ ಜಿಪಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿ ಡುಕಾಟಿ ರೇಸಿಂಗ್ ಕಂಪನಿ ನಾಲ್ಕು ಸ್ಥಾನಗಳನ್ನು ತನ್ನದಾಗಿಸಿಕೊಂಡಿತು.

ಮೊಟೊ ಜಿಪಿ ಟ್ವೀಟ್​ ಇಲ್ಲಿದೆ

ರೇಸ್ ಬಳಿಕ ಟ್ವೀಟ್​ ಮಾಡಿದ ಮಾರ್ಕ್​ ಮಾರ್ಕ್ವೆಜ್​ ಪೋರ್ಚುಗಲ್​ ರೇಸ್​ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ಈ ರೇಸ್​ನಲ್ಲಿ ಒಲಿವರ್ ಗೆಲ್ಲಬೇಕಾಗಿತ್ತು. ಆದರೆ, ನನ್ನ ತಪ್ಪಿನಿಂದಾಗಿ ಅವರಿಗೆ ಟ್ರೋಫಿ ತಪ್ಪಿತು. ಖಂಡಿತವಾಗಿಯೂ ಅದು ನನ್ನ ತಪ್ಪು. ನನಗೆ ಮಾರ್ಟಿನ್​ ಅವರನ್ನು ಓವರ್​ಟೇಕ್​ ಮಾಡುವ ಉದ್ದೇಶ ಇರಲಿಲ್ಲ. ಎಂದು ಬರೆದುಕೊಂಡಿದ್ದಾರೆ.

Exit mobile version