Site icon Vistara News

Duleep Trophy 2023: ಉತ್ತರ ವಲಯಕ್ಕೆ 511 ರನ್‌ ಜಯಭೇರಿ

Duleep Trophy 2023

ಬೆಂಗಳೂರು: ಇಲ್ಲಿ ನಡೆಯುತ್ತಿರುವ ದುಲೀಪ್‌ ಟ್ರೋಫಿ(Duleep Trophy 2023) ಕ್ವಾರ್ಟರ್‌ ಫೈನಲ್‌(duleep trophy quarterfinals) ಪಂದ್ಯದಲ್ಲಿ ಉತ್ತರ ವಲಯ ಮತ್ತು ಮಧ್ಯ ವಲಯ ತಂಡಗಳು ಗೆಲುವು ಸಾಧಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮುಖಾಮುಖೀಯಲ್ಲಿ ಉತ್ತರ ವಲಯ(North Zone vs North East Zone) 511 ರನ್ನುಗಳ ದೊಡ್ಡ ಅಂತರದಿಂದ ಈಶಾನ್ಯ ವಲಯವನ್ನು ಮಣಿಸಿದರೆ, ಆಲೂರಿನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಮಧ್ಯ ವಲಯ ತಂಡ ಪೂರ್ವ ವಲಯವನ್ನು(Central Zone vs East Zone) 170 ರನ್ನುಗಳಿಂದ ಸೋಲಿಸಿತು.

ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರ ವಲಯ ಮತ್ತು ದಕ್ಷಿಣ ವಲಯ ಎದುರಾಗಲಿವೆ. ದ್ವಿತೀಯ ಸೆಮಿ ಪಂದ್ಯ ಮಧ್ಯ ವಲಯ ಮತ್ತು ಪಶ್ಚಿಮ ವಲಯ ನಡುವೆ ನಡೆಯಲಿದೆ. ಈ ಪಂದ್ಯಗಳೆರಡೂ ಜು. 5ರಿಂದ 8ರಂದು ಬೆಂಗಳೂರಿನಲ್ಲೇ ನಡೆಯಲಿವೆ. 666 ರನ್ನುಗಳ ದೊಡ್ಡ ಗುರಿ ಪಡೆದಿದ್ದ ಈಶಾನ್ಯ ವಲಯ ಶನಿವಾರ 154ಕ್ಕೆ ಸರ್ವಪತನ ಕಂಡಿತು. ಪಾಲೊರ್‌ ತಮಾಂಗ್‌ ಅತ್ಯಧಿಕ 40 ರನ್‌ ಮಾಡಿದರು. ಪುಲ್ಕಿತ್‌ ನಾರಂಗ್‌ 4 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಉತ್ತರ ವಲಯ-8 ವಿಕೆಟಿಗೆ 540 ಡಿಕ್ಲೇರ್‌ ಮತ್ತು 6 ವಿಕೆಟಿಗೆ 259 ಡಿಕ್ಲೇರ್‌. ಈಶಾನ್ಯ ವಲಯ-134 ಮತ್ತು 154. ಪಂದ್ಯಶ್ರೇಷ್ಠ: ನಿಶಾಂತ್‌ ಸಿಂಧು.

300 ರನ್‌ ಗುರಿ ಪಡೆದಿದ್ದ ಪೂರ್ವ ವಲಯ 3ನೇ ದಿನದಾಟದ ಅಂತ್ಯಕ್ಕೆ 69ಕ್ಕೆ 6 ವಿಕೆಟ್‌ ಉದುರಿಸಿಕೊಂಡಿತ್ತು. ಬ್ಯಾಟಿಂಗ್‌ ಮುಂದುವ ರಿಸಿ 129ಕ್ಕೆ ಆಲೌಟ್‌ ಆಯಿತು. 24 ರನ್‌ ಮಾಡಿದ ಬೌಲರ್‌ ಆಕಾಶ್‌ದೀಪ್‌ ಅವರದೇ ಹೆಚ್ಚಿನ ಗಳಿಕೆ. ಪೂರ್ವ ವಲಯದ ಪತನದಲ್ಲಿ ಎಡಗೈ ಸ್ಪಿನ್ನರ್‌ ಸೌರಭ್‌ ಕುಮಾರ್‌ ಪ್ರಮುಖ ಪಾತ್ರ ನಿರ್ವಹಿಸಿದರು. ಅವರು 33 ರನ್ನಿತ್ತು 8 ವಿಕೆಟ್‌ ಉಡಾಯಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್‌ ಆಗಿದೆ.

ಇದನ್ನೂ ಓದಿ Ishan Kishan: ದುಲೀಪ್​ ಟ್ರೋಫಿಯಿಂದ ಹಿಂದೆ ಸರಿದ ಇಶಾನ್ ಕಿಶನ್; ವಿಂಡೀಸ್​ ಪ್ರವಾಸಕ್ಕೆ ಅನುಮಾನ

ಸಂಕ್ಷಿಪ್ತ ಸ್ಕೋರ್‌: ಮಧ್ಯ ವಲಯ-182 ಮತ್ತು 239. ಪೂರ್ವ ವಲಯ-122 ಮತ್ತು 129. ಪಂದ್ಯಶ್ರೇಷ್ಠ: ಸೌರಭ್‌ ಕುಮಾರ್‌.

ಮತ್ತೆ ಆರಂಭಗೊಳ್ಳಲಿದೆ ಕರ್ನಾಟಕ ಪ್ರೀಮಿಯರ್​ ಲೀಗ್​

ಮ್ಯಾಚ್ ಫಿಕ್ಸಿಂಗ್ ಹಗರಣ ಮತ್ತು ಕೊರೊನಾ ಬಿಕ್ಕಟ್ಟಿನಿಂದ ಸ್ಥಗಿತವಾಗಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್(Karnataka Premier League)​ ಪುನರಾರಂಭಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(Karnataka State Cricket Association) ಸಿದ್ಧತೆ ಆರಂಭಿಸಿದೆ. ಮುಂದಿನ ತಿಂಗಳು ಈ ಟೂರ್ನಿ ಆಯೋಜನೆಗೊಳ್ಳುವ ಸಾಧ್ಯತೆ ಇದೆ. 2019ರಲ್ಲಿ ಕೊನೆಯ ಬಾರಿಗೆ ಟೂರ್ನಿ ನಡೆದಿತ್ತು. ಬಳಿಕ ಟೂರ್ನಿ ನಡೆದಿರಲಿಲ್ಲ. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಆರಂಭಗೊಳ್ಳಲಿದೆ.

ಗ್ರಾಮಾಂತರ ಕ್ರಿಕೆಟ್‌ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸುವ ಈ ಟೂರ್ನಿಯಲ್ಲಿ ಮಿಂಚಿದ್ದ ಅನೇಕ ಕ್ರಿಕೆಟಿಗರು ಭಾರತ ತಂಡದ ಪರ ಆಡುವ ಅಕಾಶವನ್ನು ಪಡೆದಿದ್ದರು. ಹೀಗಾಗಿ ಇದು ಸ್ಥಳೀಯ ಕ್ರಿಕೆಟ್​ ಪ್ರತಿಭೆಗಳಿಗೆ ತಮ್ಮ ಪ್ರದರ್ಶನ ತೋರ್ಪಡಿಸಲು ಉತ್ತಮ ವೇದಿಕೆಯಾಗಿದೆ. ಸದ್ಯ 4 ವರ್ಷಗಳಿಂದ ಸ್ಥಗಿತವಾಗಿರುವ ಈ ಟೂರ್ನಿಯನ್ನು ಪುನರಾರಂಭಿಸುವ ಕುರಿತು ರಾಜ್ಯ ಸಂಸ್ಥೆಯಲ್ಲಿ ಚರ್ಚೆಗಳು ನಡೆಯುತ್ತಿವೆ.

Exit mobile version