ನಾಗ್ಪುರ: ಬಾರ್ಡರ್- ಗವಾಸ್ಕರ್ ಟ್ರೋಫಿಗಾಗಿ (Border Gavaskar Trophy) ಭಾರತಕ್ಕೆ ಬಂದಿರುವ ಆಸ್ಟ್ರೇಲಿಯಾ ತಂಡದ ಅಟಗಾರರಿಗೆ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಅವರದ್ದೇ ಭಯ. ಕೇರಮ್ಬಾಲ್ ಹಾಗೂ ದೂಸ್ರಾ ಎಸೆತವನ್ನು ಎಸೆಯುವ ಮೂಲಕ ಅವರು ಆಸೀಸ್ ಪಡೆಯ ಪ್ರತಿಯೊಬ್ಬರನ್ನೂ ಈ ಹಿಂದೆ ಬೆಚ್ಚಿ ಬೀಳಿಸಿದ್ದಾರೆ. ಅದೇ ಕಾರಣಕ್ಕೆ ಬೆಂಗಳೂರಿನ ಆಲೂರಿನ ಕ್ರಿಕೆಟ್ ಗ್ರೌಂಡ್ನಲ್ಲಿ ಅಭ್ಯಾಸ ನಡೆಸಿದ ಆಸ್ಟ್ರೇಲಿಯಾ ತಂಡದ ಆಟಗಾರರು ಅಶ್ವಿನ್ ಅವರದ್ದೇ ಬೌಲಿಂಗ್ ಶೈಲಿಯನ್ನು ಹೊಂದಿರುವ ಮಹೇಶ್ ಪಿಥಿಯಾ ಅವರನ್ನು ನೆಟ್ ಬೌಲರ್ ಆಗಿ ಕರೆಸಿಕೊಂಡಿದ್ದರು. ಗುಜರಾತ್ ಮೂಲದ ಮಹೇಶ್ ಅವರಿಂದ ಬೌಲಿಂಗ್ ಮಾಡಿಸಿಕೊಂಡು ಅಶ್ವಿನ್ ಎಸೆತಗಳಿಗೆ ಸಜ್ಜಾಗುವುದು ಆಸ್ಟ್ರೇಲಿಯಾ ತಂಡ ಆಟಗಾರರ ಗುರಿಯಾಗಿದೆ. ಅಚ್ಚರಿಯೆಂದರೆ ಡೂಪ್ಲಿಕೇಟ್ ಅಶ್ವಿನ್ ಮೊದಲ ದಿನದ ಅಭ್ಯಾಸದ ವೇಳೆಯೇ ಆರು ಬಾರಿ ಸ್ಟೀವ್ ಸ್ಮಿತ್ ವಿಕೆಟ್ ಪಡೆದಿದ್ದರು.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಗ್ರೌಂಡ್ನಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ಅಭ್ಯಾಸ ಮುಂದುವರಿಸಿದ್ದಾರೆ. ಅಲ್ಲಿಗೂ ಮಹೇಶ್ ಅವರನ್ನು ಆಸ್ಟ್ರೇಲಿಯಾ ತಂಡದ ಆಟಗಾರರು ಕರೆದುಕೊಂಡು ಹೋಗಿದ್ದಾರೆ. ಮಹೇಶ್ಗೆ ಆಸ್ಟ್ರೇಲಿಯಾ ತಂಡಕ್ಕೆ ಅಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಬೌಲಿಂಗ್ ಮಾಡುವುದಕ್ಕಿಂತ ಹೆಚ್ಚಾಗಿ ತಮ್ಮ ಆರಾಧ್ಯ ದೈವ ಅಶ್ವಿನ್ ಅವರನ್ನು ಭೇಟಿಯಾದ ಸಂಭ್ರಮವಿದೆ. ಅದನ್ನು ಅವರು ಮಾಧ್ಯಮದ ಮುಂದೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಮೊದಲ ದಿನದ ಅಭ್ಯಾಸದಲ್ಲೇ ಸ್ಮಿತ್ ವಿಕೆಟ್ ಆರು ಬಾರಿ ಉರುಳಿಸಿದ ವಿಷಯವನ್ನು ತಿಳಿಸಿದ್ದಾರೆ.
ಇದನ್ನೂ ಓದಿ: Steve Smith | ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್ ಸ್ಮಿತ್ ಟೋಪಿಯನ್ನೇ ಕತ್ತರಿಸಿ ಹಾಕಿದ ಇಲಿ!
ಮಹೇಶ್ ಪಿಥಿಯಾ ಅವರ ಬೌಲಿಂಗ್ ಕೂಡ ಸ್ಮಿತ್ಗೆ ಎದುರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅಶ್ವಿನ್ ಅವರ ಭಯ ಹೆಚ್ಚಾಗಿದೆ. ಆಸ್ಟ್ರೇಲಿಯಾ ತಂಡ ಹೇಗಾದರೂ ಮಾಡಿ ಆರ್. ಅಶ್ವಿನ್ ಅವರನ್ನು ಹಿಮ್ಮೆಟ್ಟಿಸುವ ಬಗೆಗಿನ ಕುರಿತು ಚರ್ಚೆ ನಡೆಸಿದ್ದಾರೆ. ಆದರೆ, ಆರ್. ಅಶ್ವಿನ್ ಆಸೀಸ್ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಫೆಬ್ರವರಿ 9ರಂದು ನಾಗ್ಪುರ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಅಭ್ಯಾಸ ನಡೆಸಲಿದ್ದು ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ.