Site icon Vistara News

World Cup 2023 : ವೇಳಾಪಟ್ಟಿಯಲ್ಲಿ ಕೊನೇ ಕ್ಷಣದ ಬದಲಾವಣೆ, ಬೆಂಗಳೂರಿಗೆ ತಪ್ಪಿತು ಗೋಲ್ಡನ್​ ಚಾನ್ಸ್​!

World Cup stadium

#image_title

ಬೆಂಗಳೂರು: ಏಕ ದಿನ ಕ್ರಿಕೆಟ್​ ವಿಶ್ವಕಪ್ 2023 (World Cup 2023) ವೇಳಾಪಟ್ಟಿ ಜೂನ್​ 27ರಂದು ಅನಾವರಣಗೊಳ್ಳಲಿದೆ. ಅದಕ್ಕಿಂತ ಕೆಲವೇ ಗಂಟೆಗಳ ಮೊದಲು ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಅದರ ಪ್ರಕಾರ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಸೆಮಿಫೈನಲ್ ಪಂದ್ಯವೊಂದು ಕೋಲ್ಕೊತಾಗೆ ಶಿಫ್ಟ್​ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಕೊನೆಯ ಕ್ಷಣದಲ್ಲಿ ಸ್ಥಳವನ್ನು ಬದಲಾಯಿಸಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಒಂದು ಸೆಮಿಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿದರೆ, ಮುಂಬಯಿಯ ವಾಂಖೆಡೆ ಸ್ಟೇಡಿಯಂ ಮತ್ತೊಂದು ಸೆಮಿಫೈನಲ್​ಗೆ ಆತಿಥ್ಯ ವಹಿಸಲಿದೆ. ಈ ಹಿಂದೆ ಮುಂಬೈ, ಚೆನ್ನೈ ಅಥವಾ ಬೆಂಗಳೂರಿನಲ್ಲಿ ಸೆಮಿಫೈನಲ್ ನಡೆಯುವ ಯೋಜನೆ ಇತ್ತು. ಆದರೆ, ನವೆಂಬರ್​ನಲ್ಲಿ ಬೆಂಗಳೂರಿನಲ್ಲಿ ಮಳೆ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಕೋಲ್ಕೊತಾಗೆ ವರ್ಗಾಯಿಸಲಾಗಿದೆ.

ಕ್ರಿಕ್​ಬಜ್​ ವರದಿಯ ಪ್ರಕಾರ, ಬದಲಾವಣೆ ನಡೆಯುವುದು ಖಚಿತ. ಆದರೆ, ಪಂದ್ಯಾವಳಿ ನಡೆಯುತ್ತಿರುವ ನಡುವೆಯೇ ಅದು ನಿರ್ಧಾರವಾಗಲಿದೆ ಎಂದು ವರದಿ ಮಾಡಿದೆ. ಮುಂಬೈನ ವಾಂಖೆಡೆ ಮತ್ತು ಕೋಲ್ಕತಾದ ಈಡನ್ ಗಾರ್ಡನ್ಸ್ ವಿಶ್ವಕಪ್ ಸೆಮಿಫೈನಲ್​​ಗೆ ಎರಡು ಸಂಭವನೀಯ ಸ್ಥಳಗಳಾಗಿವೆ. ಈ ಹಿಂದೆ ಚೆನ್ನೈ ಕೂಡ ರೇಸ್​ನಲ್ಲಿತ್ತು. ಈ ರೇಸ್​ನಲ್ಲಿ ಬೆಂಗಳೂರು ಕೂಡ ಹಿಂದೆ ಬಿದ್ದಿದೆ ಎಂಬುದಾಗಿ ಎಂದು ಬಿಸಿಸಿಐ ಮೂಲಗಳು ಸೋಮವಾರ ಪಿಟಿಐಗೆ ತಿಳಿಸಿವೆ.

ಇದನ್ನೂ ಓದಿ : World Cup 2023 : ವಿಶ್ವ ಕಪ್‌ ಆರಂಭಕ್ಕೆ ಮೊದಲೇ ವಿನೂತನ ದಾಖಲೆ; ವಿಶಿಷ್ಟ ರೀತಿಯಲ್ಲಿ ಟ್ರೋಫಿ ಅನಾವರಣ!

ಭಾರತ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆದರೆ ಮುಂಬಯಿಯ ವಾಂಖೆಡೆ ಸ್ಟೇಡಿಯಮ್​ನಲ್ಲಿ ಅ ಪಂದ್ಯ ನಡೆಯಲಿದೆ. ಚೆನ್ನೈ ಮತ್ತೊಂದು ನೆಚ್ಚಿನ ಸ್ಟೇಡಿಯಮ್​ ಆಗಿತ್ತು. ಸ್ಪಿನ್​ ಪಿಚ್​ನಲ್ಲಿ ಭಾರತ ತಂಡಕ್ಕೆ ನೆರವು ಸಿಗುತ್ತಿತ್ತು ಎಂಬ ಲೆಕ್ಕಾಚಾರವೂ ಇಲ್ಲಿದೆ. ಇನ್ನು ಬೆಂಗಳೂರಿನ ಪಿಚ್​ನಲ್ಲೂ ಪಂದ್ಯವನ್ನು ಆಯೋಜಿಸಿ ಬ್ಯಾಟರ್​ಗಳ ಸ್ವರ್ಗದಲ್ಲಿ ಅಭಿಮಾನಿಗಳಿಗೆ ಖುಷಿ ಕೊಡುವ ಯೋಜನೆಯಿತ್ತು. ಆದರೆ, ನವೆಂಬರ್ ಮಳೆ ಎಲ್ಲ ನಿರೀಕ್ಷೆಗಳನ್ನು ಸುಳ್ಳು ಮಾಡಿದೆ.

ಚೆನ್ನೈನಲ್ಲಿ ನವೆಂಬರ್ ಹವಾಮಾನವು ಮಳೆಗೆ ಪೂರಕವಾಗಿದೆ. ಅಲ್ಲಿ ಯಾವುದೇ ಸಂದರ್ಭದಲ್ಲಿ ಮಳೆ ಬರಬಹುದು. ಹೀಗಾಗಿ ಆ ಆತಿಥ್ಯ ಕೋಲ್ಕೊತಾಗೆ ಹೋಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮಂಗಳವಾರ ವೇಳಾಪಟ್ಟಿಯ ಅಧಿಕೃತ ಪ್ರಕಟಣೆಗೆ ಮುಂಚಿತವಾಗಿ ವಿವರಗಳನ್ನು ಅಂತಿಮಗೊಳಿಸಲು ಎಲ್ಲಾ ರಾಜ್ಯ ಕ್ರಿಕೆಟ್​ ಸಂಸ್ಥೆಯ ಸದಸ್ಯರು ಸೋಮವಾರ ಸಭೆ ನಡೆಸಿದ್ದರು. ಈ ವೇಳೆ ವೇಳಾಪಟ್ಟಿಯ ಬದಲಾವಣೆ ವಿಚಾರ ಗೊತ್ತಾಗಿದೆ.

ವಿಶ್ವಕಪ್ 2023 ಸ್ಥಳಗಳು

Exit mobile version