Site icon Vistara News

Shooting World Cup: ಚಿನ್ನಕ್ಕೆ ಗುರಿಯಿಟ್ಟ ಇಳವೆನಿಲ್‌ ವಲರಿವನ್

ರಿಯೊ ಡಿ ಜನೈರೊ: ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್)Shooting World Cup) ವಿಶ್ವಕಪ್‌ನಲ್ಲಿ ಭಾರತದ ಖ್ಯಾತ ಶೂಟರ್​ ಇಳವೆನಿಲ್‌ ವಲರಿವನ್ ಚಿನ್ನದ ಪದಕಕ್ಕೆ ಗುರಿಯಿಟ್ಟಿದ್ದಾರೆ. ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ವಲರಿವನ್(Elavenil Valarivan) ಒಟ್ಟು 252.2 ಪಾಯಿಂಟ್ಸ್‌ಗಳೊಂದಿಗೆ ಚಿನ್ನ ಗೆದ್ದರು. ಏಷ್ಯನ್​ ಗೇಮ್ಸ್​ಗೆ ಕಲವೇ ವಾರಗಳು ಮಾತ್ರ ಬಾಕಿ ಇರುವಾಗ ಅವರ ಈ ಸಾಧನೆ ಶೂಟಿಂಗ್​ ತಂಡದಲ್ಲಿ ಬರವಸೆ ಮೂಡಿಸಿದೆ.

ಪ್ರಾನ್ಸ್‌ನ ಒಷಿಯಾನ್ ಮುಲ್ಲರ್ ಬೆಳ್ಳಿ ಹಾಗೂ ಚೀನಾದ ಜಾಂಗ್ ಜಿಯಲ್ ಕಂಚಿನ ಪದಕ ಜಯಿಸಿದರು. ವಲರಿವನ್ 630.5 ಅಂಕಗಳೊಂದಿಗೆ 8ನೇ ಸ್ಥಾನಿಯಾಗಿ ಫೈನಲ್ ಸುತ್ತು ಪ್ರವೇಶಿಸಿದರು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಅಸಾಮಾನ್ಯ ಪ್ರದರ್ಶನ ತೋರುವ ಮೂಲಕ 24 ಪ್ರಯತ್ನಗಳಲ್ಲಿ ಪ್ರತಿ ಗುರಿಯನ್ನು 10.1ಕ್ಕಿಂತ ಹೆಚ್ಚು ಪಾಯಿಂಟ್ಸ್ ಗಳಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ಸದ್ಯ ಈ ಟೂರ್ನಿಯಲ್ಲಿ ಭಾರತದ 16 ಸ್ಪರ್ಧಿಗಳು ಭಾಗವಹಿಸಿದ್ದು ಪದಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ Asian Games 2023: ಏಷ್ಯನ್​ ಗೇಮ್ಸ್ ಕ್ರಿಕೆಟ್​ಗೆ ಪರಿಷ್ಕೃತ ಭಾರತ ತಂಡ ಪ್ರಕಟಿಸಿದ ಬಿಸಿಸಿಐ

ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಏಕೈಕ ಸ್ಪರ್ಧಿ ಸಂದೀಪ್ ಸಿಂಗ್ 628.2 ಅಂಕ ಗಳಿಸಿ 14ನೇ ಸ್ಥಾನ ಪಡೆದರು. ಶುಕ್ರವಾರ, ಎಲವೆನಿಲ್ ಸಂದೀಪ್ ಅವರೊಂದಿಗೆ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ 629.1 ಸ್ಕೋರ್‌ನೊಂದಿಗೆ ಐದನೇ ಸ್ಥಾನ ಪಡೆದಿದ್ದರು. ಎಲವೆನಿಲ್ 314.8 ಅಂಕ, ಸಂದೀಪ್ 314.3 ಅಂಕ ಪಡೆದು ಸಣ್ಣ ಅಂತರದಲ್ಲಿ ಕಂಚಿನ ಪದಕದ ಗೆಲ್ಲುವ ಅವಕಾಶದಿಂದ ವಂಚಿತರಾದರು. ಇಸ್ರೇಲ್ ಕಂಚು ಗೆದ್ದರೆ, ಜರ್ಮನಿ ಚಿನ್ನ ಮತ್ತು ಬೆಳ್ಳಿ ಹಂಗೇರಿ ಪಾಲಾಯಿತು.

ಏಷ್ಯನ್​ ಗೇಮ್ಸ್​ಗೆ ಕ್ಷಣಗಣನೆ

ಪ್ರತಿಷ್ಠಿತ ಏಷ್ಯನ್​ ಗೇಮ್ಸ್​(Asian Games) ಕ್ರೀಡಾಕೂಟ ಸೆಪ್ಟೆಂಬರ್​ 23ರಿಂದ ಅಕ್ಟೋಬರ್​ 8ರ ವರೆಗೆ ಚೀನಾದಲ್ಲಿ ನಡೆಯಲಿದೆ. ಈ ಬಾರಿಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ದಾಖಲೆಯ ಕ್ರೀಡಾಪಟುಗಳನ್ನು ಕಳುಹಿಸಿಕೊಟ್ಟಿದೆ. ಅತ್ಯಧಿಕ 634 ಕ್ರೀಡಾಪಟುಗಳನ್ನು ಕಳುಹಿಸಲಿದೆ. 2018ರ ಜಕಾರ್ತಾ ಗೇಮ್ಸ್‌ಗೆ 572 ಅಥ್ಲೀಟ್‌ಗಳನ್ನು ರವಾನಿಸಿದ್ದು ಈವರೆಗಿನ ದಾಖಲೆ ಆಗಿತ್ತು.

ಭಾರತ ಒಟ್ಟು 38 ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದೆ. ಈ 634 ಕ್ರೀಡಾಪಟುಗಳ(634 athletes) ಯಾದಿಯಲ್ಲಿ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನ ಗರಿಷ್ಠ 65 ಆ್ಯತ್ಲೀಟ್‌ಗಳಿದ್ದಾರೆ. ಇವರಲ್ಲಿ 34 ಪುರುಷರು ಹಾಗೂ 31 ವನಿತೆಯರು. ಅನಂತರದ ಸ್ಥಾನ ಫ‌ುಟ್‌ಬಾಲ್‌ ಮತ್ತು ಹಾಕಿ ತಂಡಗಳಿಗೆ ಸಲ್ಲುತ್ತದೆ. ಎರಡೂ ಫುಟ್​ಬಾಲ್​ ತಂಡಗಳು ಸ್ಪರ್ಧಿಸಲಿದ್ದು, ಇಲ್ಲಿನ ಆಟಗಾರರ ಸಂಖ್ಯೆ 44. ಹಾಕಿಪಟುಗಳ ಒಟ್ಟು ಸಂಖ್ಯೆ 36. ಪುರುಷರ ಹಾಗೂ ವನಿತೆಯರ ಕ್ರಿಕೆಟ್‌ ತಂಡಗಳೂ ಪದಕ ಸ್ಪರ್ಧೆಗೆ ಇಳಿಯಲಿವೆ. ಒಂದೊಂದು ತಂಡದಲ್ಲಿ 15 ಸದಸ್ಯರಿದ್ದಾರೆ. ಸೈಲಿಂ ಗ್‌ನಲ್ಲಿ 33, ಶೂಟಿಂಗ್‌ನಲ್ಲಿ 30 ಸ್ಪರ್ಧಿಗಳಿದ್ದಾರೆ.

ಮೊದಲ ಬಾರಿ ಕ್ರಿಕೆಟ್​

ಈ ಬಾರಿಯ ಗೇಮ್ಸ್‌ನಲ್ಲಿ ಭಾರತದ ಕ್ರಿಕೆಟ್‌ ತಂಡ ಮೊದಲ ಬಾರಿ ಆಡುತ್ತಿದೆ. ಟೂರ್ನಿ ಸೆಪ್ಟೆಂಬರ್​ 23ರಿಂದ ಅಕ್ಟೋಬರ್​ 8ರ ವರೆಗೆ ನಡೆಯಲಿದೆ. ಈಗಾಗಕಲೇ ಭಾರತ ತಂಡ ಕೂಡ ಪ್ರಕಟಗೊಂಡಿದೆ. ಭಾರತ ಪುರುಷರ ತಂಡವನ್ನು ಋತುರಾಜ್​ ಗಾಯಕ್ವಾಡ್​ ಮುನ್ನಡೆಸಲಿದ್ದಾರೆ. ಏಷ್ಯನ್‌ ಗೇಮ್ಸ್‌ನಲ್ಲಿ ಇಷ್ಟರವರೆಗೆ ಕೇವಲ ಎರಡು ಬಾರಿ ಕ್ರಿಕೆಟ್‌ ಸ್ಪರ್ಧೆ ನಡೆದಿದೆ. 2010 (ಗ್ವಾಂಗ್‌ಝೂ) ಮತ್ತು 2014 (ಇಂಚಿಯಾನ್‌)ರ ಗೇಮ್ಸ್‌ನಲ್ಲಿ ಕ್ರಿಕೆಟ್‌ ಸ್ಪರ್ಧೆ ನಡೆದಿದ್ದು ಇಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದು ಮೆರೆದಾಡಿತ್ತು.

Exit mobile version