Site icon Vistara News

Sachin Tendulkar : ಸಚಿನ್​ ಈಗ ಚುನಾವಣಾ ಆಯೋಗದ ನ್ಯಾಷನಲ್ ಐಕಾನ್

Sachin Tendulkar

ನವದೆಹಲಿ: ವಿಶ್ವ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು, ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್. ಈ ದಿಗ್ಗಜ ಆಟಗಾರನನ್ನು ಭಾರತದ ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಆಯ್ಕೆ ಮಾಡಿದೆ. ನವದೆಹಲಿಯ ರಂಗ್ ಭವನ್ ಆಡಿಟೋರಿಯಂನಲ್ಲಿ ಬುಧವಾರ (ಆಗಸ್ಟ್ 23) ನಡೆಯಲಿರುವ ಕಾರ್ಯಕ್ರಮದಲ್ಲಿ ಲೆಜೆಂಡರಿ ಕ್ರಿಕೆಟಿಗನಿಗೆ ಈ ಗೌರವ ಸಲ್ಲಿಕೆಯಾಗಲಿದೆ.

ಸಚಿನ್ ತೆಂಡೂಲ್ಕರ್ 24 ವರ್ಷಗಳ ವೃತ್ತಿಜೀವನದಲ್ಲಿ 200 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಬಲಗೈ ಬ್ಯಾಟ್ಸ್ಮನ್ 51 ಶತಕಗಳು ಮತ್ತು 68 ಅರ್ಧಶತಕಗಳನ್ನು ಗಳಿಸುವ ಮೂಲಕ 15,921 ರನ್​ಗಳನ್ನು ( ಅತಿ ಹೆಚ್ಚು) ಗಳಿಸುವ ಮೂಲಕ ಆಟದ ಸುದೀರ್ಘ ಸ್ವರೂಪದಲ್ಲಿ ಮೆರೆದಾಡಿದ್ದಾರೆ. ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಪೇರಿಸಿದ್ದಾರೆ.

ಇದನ್ನೂ ಓದಿ: WTC Final 2023 : ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ

2009ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್​​ನಲ್ಲಿ ದ್ವಿಶತಕ ಬಾರಿಸಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಸಚಿನ್ ಪಾತ್ರರಾಗಿದ್ದರು. 1989ರಲ್ಲಿ ಹದಿಹರೆಯದವನಾಗಿ ಪದಾರ್ಪಣೆ ಮಾಡಿದ ನಂತರ, ಭಾರತದ ಮಾಜಿ ನಾಯಕ 2013 ರಲ್ಲಿ ನಿವೃತ್ತಿ ಪಡೆದುಕೊಂಡರು. 2014ರಲ್ಲಿ ಕ್ರಿಕೆಟ್​ನಲ್ಲಿ ಅವರ ಗಮನಾರ್ಹ ಸಾಧನೆಗಳಿಗಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಅವರಿಗೆ ನೀಡಲಾಗಿದೆ.

ಸಾಧನೆಯ ಕಿರೀಟಕ್ಕೊಂದು ಗರಿ

ನ್ಯಾಷನಲ್ ಐಕಾನ್ ಎಂಬ ಹೊಸ ಗೌರವದೊಂದಿಗೆ ತೆಂಡೂಲ್ಕರ್ ಅವರ ಸಾಧನೆ ಇನ್ನಷ್ಟು ಪ್ರಜ್ವಲಿಸಲಿದೆ. ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರು ಮಾತ್ರವಲ್ಲ, ತೆಂಡೂಲ್ಕರ್ ಅತಿ ಹೆಚ್ಚು (ಆರು) ಏಕದಿನ ವಿಶ್ವಕಪ್​​ಗಳನ್ನು ಆಡಿದ ಸಾಧಣೆ ಮಾಡಿದ್ದಾರೆ. 2011 ರಲ್ಲಿ ತಮ್ಮ ಕೊನೆಯ ವಿಶ್ವಕಪ್​ನಲ್ಲಿ ಲೆಜೆಂಡರಿ ಬ್ಯಾಟರ್​ ಅಂತಿಮವಾಗಿ ಭಾರತಕ್ಕಾಗಿ ವಿಶ್ವಕಪ್ ಗೆಲ್ಲುವ ಕನಸನ್ನು ಈಡೇರಿಸಿಕೊಂಡಿದ್ದಾರೆ. ತೆಂಡೂಲ್ಕರ್ ಆ ಕ್ಷಣವನ್ನು ಕ್ರಿಕೆಟ್ ಮೈದಾನದಲ್ಲಿ ತಮ್ಮ ಅತ್ಯುತ್ತಮ ಕ್ಷಣ ಎಂದು ಬಣ್ಣಿಸಿದ್ದಾರೆ.

2023 ರಲ್ಲಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ವಾಂಖೆಡೆ ಕ್ರೀಡಾಂಗಣದಲ್ಲಿ ದಂತಕಥೆಯ ಕ್ರಿಕೆಟಿಗನ ಪ್ರತಿಮೆಯನ್ನು ನಿರ್ಮಿಸಿಲಾಗಿದೆ. ಈಗ, ನ್ಯಾಷನಲ್ ಐಕಾನ್ ಗೌರವದೊಂದಿಗೆ, ತೆಂಡೂಲ್ಕರ್ ಖಂಡಿತವಾಗಿಯೂ ಮೈದಾನದ ಒಳಗೆ ಮತ್ತು ಹೊರಗೆ ಎಲ್ಲಾ ರೀತಿಯಲ್ಲೂ ಗೌರವ ಪಡೆದುಕೊಂಡಿದ್ದಾರೆ.‘

ಕೀನ್ಯಾದಲ್ಲಿ ಗಾರ್ಡ್​ ಆಫ್​ ಹಾನರ್​

ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌(Sachin Tendulkar) ಅವರು ತಮ್ಮ ಕುಟುಂಬದ ಜತೆ ಕೆಲವು ತಿಂಗಳ ಹಿಂದೆ ಕೀನ್ಯಾ ಪ್ರವಾಸ ಕೈಗೊಂಡಿದ್ದರು. ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸುತ್ತಾಡಿ ಎಂಜಾಯ್​ ಮಾಡಿದ್ದರು. ಇದೇ ವೇಳೆ ಅವರಿಗೆ ಕೀನ್ಯಾದ(Kenya) ಮಸಾಯಿ ಮಾರಾದಲ್ಲಿ(Masai Mara) ಆದಿವಾಸಿ ಜನಾಂಗದವರು ತಮ್ಮ ಬಿಲ್ಲು ಬಾಣ, ಭರ್ಚಿಗಳಿಂದ ಗಾರ್ಡ್ ಆಫ್ ಹಾನರ್ ಮೂಲಕ ಗೌರವ ಸೂಚಿಸಿದ್ದಾರೆ. ಈ ಫೋಟೊವನ್ನು ಸಚಿನ್​ಗೆ ತಮ್ಮ ಇನ್​ಸ್ಟಾಗ್ರಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ಕಳೆದ ವಾರ ಸಚಿನ್​ ಅವರು ಕೀನ್ಯಾದ ಕಾಡುಗಳಲ್ಲಿ ಸುತ್ತಾಡಿ ಸಫಾರಿ ಮಾಡಿದ ಫೋಟೊವನ್ನು ಹಂಚಿಕೊಂಡಿದ್ದರು. ಇದೇ ವೇಳೆ ಮಸಾಯಿ ಮಾರ (Maasai Mara National Reserve) ರಾಷ್ಟ್ರೀಯ ಮೀಸಲು ಅರಣ್ಯವು ವಿಸ್ಮಯಕಾರಿ ಭೂದೃಶ್ಯಗಳು ಮತ್ತು ವನ್ಯಜೀವಿಗಳ ಜಾಗತಿಕ ಆಕರ್ಷಣೆಯ ತಾಣವಾಗಿದೆ. ಬಿಸಿಲಿನಲ್ಲಿ ಕುಟುಂಬ ಸದಸ್ಯರೊಂದಿಗೆ ಸುತ್ತಾಟ ನಡೆಸಿದ್ದು ಅದ್ಭತ ಅನುಭವ ನೀಡಿತು ಎಂದು ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು.

ಮಸಾಯಿ ಮಾರಾ ಕಾಡು ಪ್ರದೇಶದಲ್ಲಿ ವಾಸವಾಗಿದ್ದ ಇಲ್ಲಿನ ಆದಿವಾಸಿ ಜನಾಂಗವು ಸಚಿನ್​ ತೆಂಡೂಲ್ಕರ್​ ಅವರನ್ನು ತಮ್ಮ ಆಯುಧಗಳಿಂದ ಗಾರ್ಡ್​ ಆಫ್​ ಹಾನರ್​ ಮಾಡಿ ಗೌರವಿಸಿದ್ದಾರೆ. ಇದೇ ವೇಳೆ ಸಚಿನ್​ ಅವರು ಇಲ್ಲಿನ ಜನಾಂಗದವರೊಂದಿಗೆ ಎರಡು ಹೆಜ್ಜೆ ಹಾಕಿ ನೃತ್ಯವನ್ನು ಮಾಡಿದ್ದಾರೆ. ಈ ಫೋಟೊ ವೈರಲ್​(viral photo) ಆಗಿದೆ.

ಸಚಿನ್‌ ತೆಂಡೂಲ್ಕರ್‌(Sachin Tendulkar) ಅವರು ಎಪ್ರಿಲ್​ 24ರಂದು 50ನೇ ವರ್ಷದ ಹುಟ್ಟು ಹಬ್ಬವನ್ನು ಗೋವಾದಲ್ಲಿ ಆಚರಿಸಿದ್ದರು. ಈ ವೇಳೆ ಅವರು ಹಳ್ಳಿ ಸೊಗಡಿನಲ್ಲಿ ಓಲೆಯಲ್ಲಿಯೇ ಅಡುಗೆ ಮಾಡಿ ಸಂಭ್ರಮಿಸಿದ್ದರು. ಪತ್ನಿ ಅಂಜಲಿ ಮತ್ತು ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಒಲೆಯ ಪಕ್ಕದಲ್ಲಿ ಕುಳಿತು ಸಚಿನ್ ಒಲೆ ಊದುತ್ತಿರುವ ಫೋಟೊ ವೈರಲ್ ಆಗಿತ್ತು.

“ಹಳ್ಳಿ ಜೀವನವೆಂದರೆ ಬಲು ಸೊಗಸು. ಇದೇ ಕಾರಣಕ್ಕೆ ನಾನು 50ನೇ ವರ್ಷದ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡೆ” ಎಂದು ಸಚಿನ್​ ಹೇಳಿದ್ದರು.

Exit mobile version