ಲಂಡನ್: ಫುಟ್ಬಾಲ್ ಲೋಕದ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದಾದ ಮ್ಯಾಂಚೆಸ್ಟರ್ ಯುನೈಟೆಡ್(manchester united) ತಂಡವನ್ನು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್(Elon Musk) ಅವರು ಖರೀದಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್ ತಂಡ ತೊರೆದ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರಾಗಿರುವ ಅಮೆರಿಕದ ಗ್ಲೇಜರ್ ಕುಟುಂಬ ಹೊಸ ಹೂಡಿಕೆ, ಮಾರಾಟ ಅಥವಾ ಇತರೆ ವಹಿವಾಟು ಸೇರಿದಂತೆ ಎಲ್ಲ ರೀತಿಯ ಪರ್ಯಾಯ ಕಾರ್ಯತಂತ್ರವನ್ನು ಕ್ಲಬ್ ಪರಿಗಣಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಇದೀಗ ಎಲಾನ್ ಮಸ್ಕ್ ಅವರು ತಂಡವನ್ನು ಖರೀದಿಸಲು ಬಿಡ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಟ್ವಿಟ್ ಮಾಡಿದ್ದ ಎಲಾನ್ ಮಸ್ಕ್
ಟ್ವಿಟರ್ ಖರೀದಿಸುವ ಸಂದರ್ಭದಲ್ಲಿ ಎಲಾನ್ ಮಸ್ಕ್ ಅವರು ಟ್ವೀಟ್ವೊಂದನ್ನು ಮಾಡುವ ಮೂಲಕ ಸಂಚಲ ಸೃಷ್ಟಿಸಿದ್ದರು. “ನಾನು ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಖರೀದಿಸುತ್ತಿದ್ದೇನೆ. ನಿಮಗೆ ಸ್ವಾಗತʼʼ ಎಂದು ಮಸ್ಕ್ ಟ್ವೀಟ್ ಮಾಡಿದ್ದರು. ಇದು ತೀವ್ರ ಕುತೂಹಲ ಮೂಡಿಸಿತ್ತು.
ಉಲ್ಟಾ ಹೊಡೆದಿದ್ದ ಮಸ್ಕ್
ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿ ಕುರಿತ ಟ್ವೀಟ್ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿದ್ದ ಎಲಾನ್ ಮಸ್ಕ್, ತಾವು ಯಾವುದೇ ಕ್ರೀಡಾ ತಂಡವನ್ನು ಖರೀದಿಸುತ್ತಿಲ್ಲ. ಜೋಕ್ ಮಾಡುವ ಸಲುವಾಗಿ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುತ್ತಿರುವುದಾಗಿ ಹೇಳಿದ್ದೇನೆ, ಅಷ್ಟೇ ಎಂದು ಪ್ರತಿಕ್ರಿಯಿಸಿದ್ದರು. ಇದೀಗ ಮತ್ತೆ ಅವರು ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಖರೀದಿಗೆ ಬಿಟ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಾರಿ ನಿಜವಾಗಿಯೂ ಅವರು ತಂಡ ಖರೀದಿಗೆ ಮುಂದಾಗಿದ್ದಾರೆಯೇ ಎಂಬುವುದು ಇನ್ನಷ್ಟೇ ಖಚಿತಗೊಳ್ಳಬೇಕಿದೆ. ಅಥವಾ ಈ ಬಾರಿಯೂ ಜೋಕ್ ಮಾಡಿದ್ದಾರಾ ಎಂದು ತಿಳಿದು ಬಂದಿಲ್ಲ.