ಕೊಲಂಬೊ: ಪ್ರತಿಷ್ಠಿತ ಎಮರ್ಜಿಂಗ್ ಏಷ್ಯಾ ಕಪ್ ಕ್ರಿಕೆಟ್(Emerging Asia Cup Final) ಕೂಟದ ಫೈನಲ್ ಹೋರಾಟದಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಭಾನುವಾರ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣ ಈ ಪಂದ್ಯಕ್ಕೆ ಅಣಿಯಾಗಿದೆ. ಲೀಗ್ ಹಂತದ ಪಂದ್ಯದಲ್ಲಿ ಪಾಕ್ಗೆ ಭಾರತ ಮಣ್ಣುಮುಕ್ಕಿಸಿತು. ಇದೀಗ ಫೈನಲ್ನಲ್ಲಿಯೂ ಮಣಿಸುವ ವಿಶ್ವಾಸದಲ್ಲಿದೆ. ಆದರೆ ಸವಾಲನ್ನು ಹಗುರವಾಗಿ ತೆಗೆದುಕೊಳ್ಳಬಾರದು.
ಭಾರತ ತಂಡ ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಪಾಕ್ ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಇದು ಭಾರತದ ವಿರುದ್ಧವೇ ದಾಖಲಾಗಿದೆ. ಈ ಪಂದ್ಯದಲ್ಲಿ ಪಾಕ್ 8 ವಿಕೆಟ್ಗಳ ಸೋಲು ಕಂಡಿತ್ತು. ಶುಕ್ರವಾರ ನಡೆದ ಮೊದಲ ಸೆಮಿಫೈನಲ್ನಲ್ಲಿ ಶ್ರೀಲಂಕಾವನ್ನು ಮಣಿಸಿ ಪಾಕ್ ಫೈನಲ್ ತಲುಪಿದರೆ, ಭಾರತ ತಂಡ ಬಾಂಗ್ಲಾವನ್ನು ಸೋಲಿಸಿ ಫೈನಲ್ ಟಿಕೆಟ್ ಪಡೆಯಿತು.
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠಮಟ್ಟದ ನಿರ್ವಹಣೆ ನೀಡಿರುವ ಭಾರತ ತಂಡ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಜತೆಗೆ ಕೂಟದಲ್ಲಿ ಅಜೇಯ ಸಾಧನೆ ಮಾಡಿದೆ. ನಾಯಕ ಯಶ್ ಧುಲ್, ಸಾಯಿ ಸುದರ್ಶನ್, ಅಭಿಷೇಕ್ ಶರ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಶತಕದ ಆಟದ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಈ ಪಂದ್ಯದಲ್ಲಿಯೂ ಅವರ ಮೇಲೆ ತಂಡ ಹೆಚ್ಚಿನ ನಂಬಿಕೆ ಇರಿಸಿದೆ. ಬೌಲಿಂಗ್ ವಿಭಾಗದಲ್ಲಿ ಹರ್ಷಿತ್ ರಾಣ, ನಿಶಾಂತ್ ಸಿಂಧು ಮತ್ತು ರಾಜ್ಯವರ್ಧನ್ ಹಂಗಾಂರ್ಗೆಕರ್ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.
ಇದನ್ನೂ ಓದಿ Emerging Asia Cup; ಸೌಮ್ಯ ಸರ್ಕಾರ್ಗೆ ಚಳಿ ಬಿಡಿಸಿದ ಹರ್ಷಿತ್ ರಾಣಾ; ವಿಡಿಯೊ ವೈರಲ್
ಭಾರತ ಎ ತಂಡ: ಯಶ್ ಧುಲ್ (ನಾಯಕ), ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಪ್ರದೋಶ್ ರಂಜನ್ ಪೌಲ್, ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಮಾನವ್ ಸುತಾರ್, ಯುವರಾಜ್‌ಸಿನ್ಹ್ ದೋಡಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗರ್ಗೇಕರ್.
ಪಾಕಿಸ್ತಾನ ‘ಎ’ ತಂಡ: ಮೊಹಮ್ಮದ್ ಹ್ಯಾರಿಸ್ (ನಾಯಕ), ಒಮೈರ್ ಬಿನ್ ಯೂಸುಫ್, ಅಮದ್ ಬಟ್, ಅರ್ಷದ್ ಇಕ್ಬಾಲ್, ಹಸೀಬುಲ್ಲಾ, ಕಮ್ರಾನ್ ಗುಲಾಮ್, ಮೆಹ್ರಾನ್ ಮುಮ್ತಾಜ್, ಮುಬಾಸಿರ್ ಖಾನ್, ಮೊಹಮ್ಮದ್ ವಾಸಿಂ ಜೂನಿಯರ್, ಖಾಸಿಮ್ ಅಕ್ರಮ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್ , ಸುಫಿಯಾನ್ ಮುಖೀಮ್ ಮತ್ತು ತಯ್ಯಬ್ ತಾಹಿರ್.