Site icon Vistara News

Emiliano Martinez | ಅನುಚಿತ ವರ್ತನೆ ತೋರಿದ ಅರ್ಜೆಂಟೀನಾದ ಗೋಲ್​ ಕೀಪರ್ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಫಿಫಾ!

Emiliano Martinez

ಕತಾರ್​: ಫಿಫಾ ವಿಶ್ವ ಕಪ್ ಫೈನಲ್ ಪಂದ್ಯದ ವಿಜಯೋತ್ಸವದ ಬಳಿಕ ಅರ್ಜೆಂಟೀನಾ ತಂಡದ ಗೋಲ್​ ಕೀಪರ್​ ಎಮಿಲಿಯಾನೊ ಮಾರ್ಟಿನೆಜ್(Emiliano Martinez) ತೋರಿದ ಅನುಚಿತ ವರ್ತನೆಗೆ ಫಿಫಾ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಕತಾರ್‌ನಲ್ಲಿ ಕಳೆದ ತಿಂಗಳು ಮುಕ್ತಾಯಕಂಡ ಫಿಫಾ ವಿಶ್ವ ಕಪ್​ ಟೂರ್ನಿಯ ಫೈನಲ್​ನಲ್ಲಿ ಫ್ರಾನ್ಸ್​ ವಿರುದ್ಧ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದ ಗೆಲುವು ದಾಖಲಿಸಿ ಮೂರನೇ ಬಾರಿಗೆ ಪ್ರಶಸ್ತಿ ಜಯಿಸಿತ್ತು.

ಇದೇ ವೇಳೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಎಮಿಲಿಯಾನೊ ಮಾರ್ಟಿನೆಜ್​ಗೆ ಗೋಲ್ಡನ್​ ಗ್ಲವ್​ ಪ್ರಶಸ್ತಿ ನೀಡಲಾಯಿತು. ಆದರೆ ಪ್ರಶಸ್ತಿ ಪಡೆದ ಬಳಿಕ ಅವರು ಟ್ರೋಫಿ ಹಿಡಿದುಕೊಂಡು ಅಶ್ಲೀಲ ಸನ್ನೆ ಮಾಡಿದ್ದರು. ಬಳಿಕ ಡ್ರೆಸ್ಸಿಂಗ್ ಕೊಠಡಿಯಲ್ಲಿ ಫ್ರಾನ್ಸ್‌ನ ತಾರೆ ಕಿಲಿಯಾನ್ ಎಂಬಾಪೆ ಅವರನ್ನು ಅಪಹಾಸ್ಯ ಮಾಡಿದ್ದರು. ಅವರ ಈ ವರ್ತನೆಗೆ ವರ್ತನೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ದುರ್ವರ್ತನೆ ತೋರಿದ ಈ ಆಟಗಾರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಆಟಗಾರನ ಈ ನಡವಳಿಕೆ ಬಗ್ಗೆ ತನಿಖೆ ಆರಂಭಿಸಿರುವುದಾಗಿ ಫಿಫಾ ಹೇಳಿದೆ. ಈ ಮೂಲಕ ಎಮಿಲಿಯಾನೊ ಮಾರ್ಟಿನೆಜ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ | FIFA World Cup | ಅರ್ಜೆಂಟೀನಾ ಗೋಲ್​ ಕೀಪರ್​ ವರ್ತನೆಗೆ ಅಭಿಮಾನಿಗಳ ಬೇಸರ

Exit mobile version