Site icon Vistara News

WPL 2024: ಸೋಲಿನ ಆಘಾತದಲ್ಲಿದ್ದ ಆರ್​ಸಿಬಿ ಆಟಗಾರ್ತಿಯರನ್ನು ಸಮಾಧಾನಿಸಿ ಕ್ರೀಡಾಸ್ಫೂರ್ತಿ ತೋರಿದ ಡೆಲ್ಲಿ ಕ್ಯಾಪಿಟಲ್ಸ್‌

richa ghosh

ನವದೆಹಲಿ: ಒಂದು ರನ್‌ ಅಂತರದ ಸೋಲನುಭವಿಸಿದ ನಿರಾಸೆಯಲ್ಲಿ ಮೈದಾನದಲ್ಲೇ ಕುಸಿದು ಬೇಸರದಿಂದ ಕುಳಿತಿದ್ದ ಆರ್‌ಸಿಬಿ(Royal Challengers Bangalore) ಆಗಾರ್ತಿಯರನ್ನು ಡೆಲ್ಲಿ ಕ್ಯಾಪಿಟಲ್ಸ್‌(Delhi Capitals ) ತಂಡದ ಆಟಗಾರ್ತಿಯರು ಸಮಾಧಾನಪಡಿಸಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.

ಭಾನುವಾರ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಡಬ್ಲ್ಯುಪಿಎಲ್​ನ(WPL 2024) ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ 5 ವಿಕೆಟಿಗೆ 181 ರನ್‌ ಪೇರಿಸಿತು. ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿ ಆರಂಭಿಕ ಆಘಾತ ಎದುರಿಸಿದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್‌(Richa Ghosh) ಸಿಡಿದು ನಿಂತರು.

ಅಂತಿಮ ಓವರ್‌ನಲ್ಲಿ ಆರ್‌ಸಿಬಿ ಜಯಕ್ಕೆ 17 ರನ್‌ ಬೇಕಿತ್ತು. ಈ ವೇಳೆ ದಿಟ್ಟ ಬ್ಯಾಟಿಂಗ್​ ಪ್ರದರ್ಶನ ತೋರಿದ ರಿಚಾ ಸಿಕ್ಸರ್​ಗಳ ಮೂಲಕ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ 2 ಎಸೆತಗಳಲ್ಲಿ ಆರ್​ಸಿಬಿಗೆ 8 ರನ್​ ಅಗತ್ಯವಿತ್ತು. ಈ ವೇಳೆ ರಿಚಾ ಸಿಕ್ಸರ್​ ಬಾರಿಸಿದರು. ಗೆಲುವಿಗೆ ಬೇಕಿದ್ದ 2 ರನ್​ ಬಾರಿಸಿ ರಿಚಾ ತಂಡಕ್ಕೆ ಗೆಲುವು ತಂದುಕೊಡಲಿದ್ದಾರೆ ಎಂದು ಆರ್​ಸಿಬಿ ಆಟಗಾರ್ತಿಯರು ಮತ್ತು ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾದು ಕುಳಿತಿದ್ದರು. ಆದರೆ ರಿಚಾ ಅವರು ಅಂತಿಮ ಎಸೆತದಲ್ಲಿ ಕೂದಲೆಳೆ ಅಂತರದಲ್ಲಿ ರನೌಟ್‌ ಆದರು.

ಇದನ್ನೂ ಓದಿ WPL Points Table: ಡೆಲ್ಲಿ ಪ್ಲೇ ಆಫ್ ಪ್ರವೇಶ; ನೂತನ ಅಂಕಪಟ್ಟಿ ಹೇಗಿದೆ

ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಎನ್ನುವ ಹತಾಶೆಯಲ್ಲಿ ರಿಚಾ ಅವರು ತೀವ್ರ ದುಃಖಿತರಾದರು. ಮೈದಾನದಲ್ಲೇ ಕುಸಿದು ಅತ್ತರು. ಅವರ ಜತೆಗಾತಿ ಶ್ರೇಯಾಂಕ ಪಾಟೀಲ್ ಕೂಡ ಸ್ಥಿತಿಯೂ ಇದೇ ಆಗಿತ್ತು. ಈ ವೇಳೆ ಡೆಲ್ಲಿ ತಂಡದ ನಾಯಕಿ ಮೆಗ್​ ಲ್ಯಾನಿಂಗ್​ ಮತ್ತು ಜೆಮಿಮಾ ರೋಡ್ರಿಗಸ್​ ಅವರು ಓಡಿ ಬಂದು ಈ ಆಟಗಾರ್ತಿಯನ್ನು ಸಮಾಧಾನ ಪಡಿಸಿದರು. ಇವರ ಕ್ರೀಡಾಸ್ಫೂರ್ತಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ರಿಚಾ ಅವರು 29 ಎಸೆತಗಳಿಂದ 51 ರನ್ ಚಚ್ಚಿದರು.

ಆರ್​ಸಿಬಿ ಪ್ಲೇ ಆಫ್​ ಲೆಕ್ಕಾಚಾರ ಹೇಗಿದೆ?

ಸ್ಮೃತಿ ಮಂಧಾನ ಸಾರಥ್ಯದ ಆರ್​ಸಿಬಿಗೆ ಇನ್ನು ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಎದುರಾಳಿ ವಲಿಷ್ಠ ಮುಂಬೈ ಇಂಡಿಯನ್ಸ್​. ಉಭಯ ತಂಡಗಳ ಈ ಮುಖಾಮುಖಿ ನಾಳೆ(ಮಾರ್ಚ್ 12) ನಡೆಯಲಿದೆ. ಒಂದು ನಡೆಯುವ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ತಂಡ ಸೋಲು ಕಂಡರೆ ಆರ್​ಸಿಬಿಗೆ ಪ್ಲೇ ಆಫ್​ ದಾರಿ ಸುಗಮಗೊಳ್ಳಲಿದೆ. ಏಕೆಂದರೆ ಆರ್​ಸಿಬಿ ಯುಪಿಗಿಂತ ಒಂದು ಸ್ಥಾನ ಮೇಲಿದೆ. ಒಂದೊಮ್ಮೆ ಯುಪಿ ಇಂದು ಗೆದ್ದರೆ, ಆರ್​ಸಿಬಿ ನಾಳೆ ಮುಂಬೈ ವಿರುದ್ಧ ದೊಡ್ಡ ಅಂತರದಿಂದ ಗೆಲ್ಲಬೇಕು.

Exit mobile version