Site icon Vistara News

Ram Mandir: ರಾಮಮಂದಿರ ಲೋಕಾರ್ಪಣೆ ಕಂಡು ಭಾವನಾತ್ಮಕ ಸಂದೇಶ ಹಂಚಿಕೊಂಡ ಕ್ರಿಕೆಟಿಗ ಸೆಹವಾಗ್​

Virender Sehwag

ನವದೆಹಲಿ: ಕಳೆದ 500 ವರ್ಷಗಳಿಂದ ಭಾರತದ ನಾಗರಿಕರು ಕಾಣುತ್ತಿದ್ದ ರಾಮಮಂದಿರದ ಕನಸು ಇಂದು (ಸೋಮವಾರ) ನನಸಾಗಿದೆ. ನರೇಂದ್ರ ಮೋದಿ ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸುವ ಮೂಲಕ ರಾಮಮಂದಿರ ಲೋಕಾರ್ಪಣೆ ಮಾಡಿದರು. ಶ್ರೀರಾಮನ ವಿಗ್ರಹ ಅನಾವರಣಗೊಳಿಸುತ್ತಿದ್ದಂತೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್(Virender Sehwag) ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

“ನಾನು ಭಾವನಾತ್ಮಕ ಮತ್ತು ಸಂತಸಗೊಂಡಿದ್ದೇನೆ. ನಾನು ಸೀಮಿತಗೊಂಡಿದ್ದೇನೆ. ನಾನು ಶರಣಾಗಿದ್ದೇನೆ, ನಾನು ತೃಪ್ತಿ ಹೊಂದಿದ್ದೇನೆ, ನಾನು ಮೂಕನಾಗಿದ್ದೇನೆ, ನಾನು ಕೇವಲ ರಾಮನ ಧ್ಯಾನದಲ್ಲಿ ಮಗ್ನನಾಗಿದ್ದಾನೆ. ಇದೆಲ್ಲ ಶ್ರೀರಾಮನ ಮಹಿಮೆ. ರಾಮ್ ಲಲ್ಲಾ ಬಂದಿದ್ದಾರೆ. ಇದನ್ನು ಸಾಧ್ಯವಾಗಿಸಿದ ಮತ್ತು ತ್ಯಾಗ ಮಾಡಿದ ಎಲ್ಲರಿಗೂ ಕೃತಜ್ಞತೆಗಳು” ಎಂದು ಸೆಹವಾಗ್ ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ರಾಮನ ವಿಗ್ರಹದ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ.​


ಅಭೂತಪೂರ್ವ ಕ್ಷಣ ಎಂದ ಸಚಿನ್​ ತೆಂಡೂಲ್ಕರ್​


ಈ ಪವಿತ್ರ ಸಮಾರಂಭದಲ್ಲಿ ಪಾಲ್ಗೊಂಡ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಇದೊಂದು ಅಭೂತಪೂರ್ವ ಕ್ಷಣ ಮತ್ತು ಭಾವನೆ ಎಂದು ಹೇಳಿದ್ದಾರೆ. ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಂಡ ಸಚಿನ್​ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ಮಾತನ್ನು ಹೇಳಿದರು. ಕೋಟ್ಯಂತರ ರಾಮ ಭಕ್ತರ ಕನಸು ನನಸಾಗಿದೆ. ಅಭೂತಪೂರ್ವ ಕ್ಷಣದಲ್ಲಿ ನಾನು ಕೂಡ ಭಾಗಿಯಾದದ್ದು ನಿಜಕ್ಕೂ ಸಂತಸ ತಂದಿದೆ. ಜೈ ಶ್ರೀ ರಾಮ್​ ಎಂದು ಹೇಳಿದರು.

ಇದನ್ನೂ ಓದಿ Ram Mandir: ಪ್ರಾಣಪ್ರತಿಷ್ಠಾಪನೆ ಅಭೂತಪೂರ್ವ ಕ್ಷಣ ಎಂದ ಸಚಿನ್​ ತೆಂಡೂಲ್ಕರ್​

ಸಚಿನ್​ ಸೇರಿದಂತೆ ಮಿಥಾಲಿ ರಾಜ್​, ಸೈನಾ ನೆಹ್ವಾಲ್​, ಸುನೀಲ್​ ಗವಾಸ್ಕರ್​, ಅನಿಲ್​ ಕುಂಬ್ಳೆ, ವೆಂಕಟೇಶ್​ ಪ್ರಸಾದ್​ ಸೇರಿ ಹಲವು ಕ್ರೀಡಾಪಟುಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬಾಲಿವುಡ್‌ ನಟರಾಜ್‌ ಅಮಿತಾಭ್‌ ಬಚ್ಚನ್‌, ರಣಬೀರ್‌ ಕಪೂರ್‌, ಆಲಿಯಾ ಭಟ್‌, ಆಯುಷ್ಮಾನ್‌ ಖುರಾನ, ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಕೇಶ್‌ ಅಂಬಾನಿ ಕುಟುಂಬಸ್ಥರು, ಗಾಯಕರಾದ ಸೋನು ನಿಗಮ್‌ ಸೇರಿ ಸುಮಾರು 7 ಸಾವಿರಕ್ಕೂ ಅಧಿಕ ಗಣ್ಯರು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾದರು.

Exit mobile version