Site icon Vistara News

ENG vs BAN: ಗೆಲುವಿನ ಹಳಿ ಏರೀತೇ ಹಾಲಿ ಚಾಂಪಿಯನ್​ ಇಂಗ್ಲೆಂಡ್​?; ಬಾಂಗ್ಲಾ ಎದುರಾಳಿ

Jonny Bairstow enhances the Dharamsala backdrop

ಧರ್ಮಶಾಲಾ: ಉದ್ಘಾಟನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಹೀನಾಯ ಸೋಲು ಕಂಡ ಹಾಲಿ ಚಾಂಪಿಯನ್​ ಇಂಗ್ಲೆಂಡ್ ದ್ವಿತೀಯ ಪಂದ್ಯದಲ್ಲಿ ಗೆಲುವಿನ ಹಳಿ ಏರುವ ವಿಶ್ವಾಸದಲ್ಲಿದೆ. ಮಂಗಳವಾರ ನಡೆಯುವ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲು ಎದುರಿಸಲಿದೆ.

ಬಾಂಗ್ಲಾದೇಶ ಈಗಾಗಲೇ ಆಡಿದ ಮೊದಲ ಪಂದ್ಯದಲ್ಲಿ ಗೆದ್ದು ಗೆಲುವಿನ ಖಾತೆ ತೆರೆದಿದೆ. ಅಫಘಾನಿಸ್ತಾನ ಎದುರು ಈ ಗೆಲುವು ಒಲಿದಿತ್ತು. ಈ ಪಂದ್ಯ ಕೂಡ ಧರ್ಮಶಾಲದಲ್ಲಿ ನಡೆದಿತ್ತು. ಇಂಗ್ಲೆಂಡ್​ ವಿರುದ್ಧದ ಪಂದ್ಯವೂ ಇಲ್ಲೇ ನೆಡೆಯಲಿದೆ. ಹೀಗಾಗಿ ಈ ಪಿಚ್​ನ ಲಾಭ ಬಾಂಗ್ಲಾಕ್ಕೆ ವರದಾನವಾಗಬಹುದು. ನಾಯಕ ಶಕೀಬ್​ ಅಲ್​ ಹಸನ್​ ಮತ್ತು ಮೆಹದಿ ಹಸನ್​ ಇಬ್ಬರೂ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ತಲಾ ಮೂರು ವಿಕೆಟ್​ ಮತ್ತು ಬ್ಯಾಟಿಂಗ್​ನಲ್ಲಿಯೂ ಮಿಂಚಿದ್ದರು. ಮೆಹದಿ ಅರ್ಧಶತಕವನ್ನು ಬಾರಿಸಿದ್ದರು. ಈ ಪಂದ್ಯದಲ್ಲಿಯೂ ಇವರ ಮೇಲೆ ತಂಡ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ.

ಗೆಲ್ಲಲೇ ಬೇಕಾದ ಒತ್ತಡದಲ್ಲಿ ಇಂಗ್ಲೆಂಡ್​

ಇಂಗ್ಲೆಂಡ್​ ತನ್ನ ಹಾಲಿ ಚಾಂಪಿಯನ್​ ಖ್ಯಾತಿಗೆ ತಕ್ಕ ಪ್ರದರ್ಶನವನ್ನು ಕಿವೀಸ್​ ವಿರುದ್ಧ ತೋರುವಲ್ಲಿ ವಿಫಲವಾಗಿತ್ತು. ತಂಡದಲ್ಲಿ ಬಲಿಷ್ಠ ಆಟಗಾರರ ದಂಡೇ ಇದ್ದರೂ ಯಾರು ಕೂಡ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಅವರ ಮೇಲೆಟ್ಟಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗಿತ್ತು. ಈ ಪಂದ್ಯದಲ್ಲಿಯೂ ಸೋಲು ಕಂಡರೆ ಮುಂದಿನ ಹಾದಿ ಕಠಿಣಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಇನ್ನು ಮುಂದೆ ಘಟಾನುಘಟಿ ತಂಡದ ವಿರುದ್ಧ ಆಡಬೇಕಿದೆ. ಹೀಗಾಗಿ ನಾಯಕ ಬಟ್ಲರ್​, ಜಾನಿ ಬೇರ್​ಸ್ಟೋ, ಲಿವಿಂಗ್​ಸ್ಟೋನ್​, ಮಲಾನ್​ ಮತ್ತು ಮೊಯಿನ್​ ಅಲಿ ಅವರ ಬ್ಯಾಟ್ ಸದ್ದು ಮಾಡಬೇಕಿದೆ. ರೂಟ್​ ಅವರು ಸದ್ಯ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಅವರು ಆಸರೆಯಾಗದೇ ಹೋಗಿದ್ದರೆ ತಂಡದ ಪ್ರದರ್ಶನ ಇನಷ್ಟು ಕಳಪೆ ಮಟ್ಟದಿಂದ ಕೂಡಿರುತ್ತಿತ್ತು.

ಸ್ಟೋಕ್ಸ್​ ಆಡುವ ನಿರೀಕ್ಷೆ

ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಬೆನ್​ ಸ್ಟೋಕ್ಸ್​ ಬಾಂಗ್ಲಾ ವಿರುದ್ಧ ಕಣಕ್ಕಿಳಿಯುವುದು ಖಚಿತ ಎನ್ನಲಾಗಿದೆ. ಅವರ ಆಗಮನದಿಂದ ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸ ಮೂಡಲಿದೆ. ಅಸಾಧ್ಯವಾದುದನ್ನು ಏಕಾಂಗಿಯಾಗಿ ನಿಂತು ಸಾಧಿಸುವ ಸಾಮರ್ಥ್ಯ ಅವರಿಗಿದೆ. ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೂ ಎತ್ತಿದ ಕೈ. ಆದರೆ ಗಾಯದ ಸಮಸ್ಯೆ ಕಾಡಬಾರದು.

ಇದನ್ನೂ ಓದಿ IND vs PAK: ಪಾಕ್​ ವಿರುದ್ಧ ಕೇಸರಿ ಜೆರ್ಸಿಯಲ್ಲಿ ಆಡಲ್ಲ; ಬಿಸಿಸಿಐ ಸ್ಪಷ್ಟನೆ

ಪಿಚ್​ ರಿಪೋರ್ಟ್​

ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡಕ್ಕೂ ಸಮಾನವಾದ ಅವಾಶ ಕಲ್ಪಿಸುತ್ತದೆ. ರಾತ್ರಿಯ ವೇಳೆ ಇಲ್ಲಿ ಇಬ್ಬನಿ ಸಮಸ್ಯೆ ಇರುವುದರಿಂದ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚು ಸಹಾಯಕಾರಿ. ಬೌಲರ್​ಗೆ ನಿರ್ದಿಷ್ಟ ಗುರಿಯೆಡೆಗೆ ಬೌಲಿಂಗ್​ ನಡೆಸಲು ಹಿಡಿತ ಸಾಧಿಸುವುದಿಲ್ಲ. ಇಬ್ಬನಿಯಿಂದ ಚೆಂಡು ಕೈಯಿಂದ ಜಾರುತ್ತದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಇದೆ.

ಸಂಭಾವ್ಯ ತಂಡ

ಇಂಗ್ಲೆಂಡ್​: ಜಾಸ್​ ಬಟ್ಲರ್ (ನಾಯಕ), ಜಾನಿ ಬೆರ್​ಸ್ಟೋ, ಮೊಯಿನ್ ಅಲಿ, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ ಸ್ಟೋನ್, ಡೇವಿಡ್ ಮಾಲನ್, ಆದಿಲ್ ರಶೀದ್, ಜೋ ರೂಟ್, ಬೆನ್ ಸ್ಟೋಕ್ಸ್, ಮಾರ್ಕ್ ವುಡ್, ಕ್ರಿಸ್ ವೋಕ್ಸ್.

ಬಾಂಗ್ಲಾದೇಶ: ಶಕೀಬ್ ಅಲ್ ಹಸನ್ (ನಾಯಕ), ಲಿಟ್ಟನ್ ಕುಮರ್ ದಾಸ್, ತಂಝೀದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ, ಮಹೇದಿ ಹಸನ್, ಮುಶ್ಫಿಕರ್ ರಹೀಮ್, ತೌಹಿದ್ ಹೃದೋಯ್, ಮಹ್ಮುದುಲ್ಲಾ ರಿಯಾದ್, ತಸ್ಕಿನ್ ಹ್ಮದ್, ಶೋರಿಫುಲ್ ಇಸ್ಲಾಂ,ಮುಸ್ತಾಫಿಜುರ್ ರೆಹಮಾನ್.

Exit mobile version