ಢಾಕಾ: ಬಾಂಗ್ಲಾದೇಶ(ENG VS BAN) ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಸೋಲು ಕಾಣುವ ಮೂಲಕ ವೈಟ್‌ವಾಶ್ ಮುಖಭಂಗಕ್ಕೆ ಸಿಲುಕಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾ ಎಲ್ಲ ಪಂದ್ಯಗಳನ್ನು ಗೆದ್ದು ತವರಿನಲ್ಲಿ ತಾನೇಷ್ಟು ಬಲಿಷ್ಠ ಎಂಬುದನ್ನು ಸಾಬೀತುಪಡಿಸಿದೆ.
ಮಂಗಳವಾರ ರಾತ್ರಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟಿಗೆ 158 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡು 6 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ 16 ರನ್ ಅಂತರದ ಸೋಲು ಕಂಡಿತು. ಬಾಂಗ್ಲಾ ಈ ಗೆಲುವಿನೊಂದಿಗೆ ಏಕದಿನ ಸರಣಿ ಸೋಲಿಗೆ ಭರ್ಜರಿಯಾಗಿ ಸೇಡು ತೀರಿಸಿಕೊಂಡಿತು.
ಚೇಸಿಂಗ್ ವೇಳೆ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಡೇವಿಡ್ ಮಲಾನ್ (53) ಮತ್ತು ಜಾಸ್ ಬಟ್ಲರ್ (40) ಉತ್ತಮ ಜತೆಯಾಟದ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ ಉಳಿದ 7 ಓವರ್‌ಗಳಲ್ಲಿ ರನ್ ಗಳಿಸಲು ತಿಣಕಾಡಿದ ಆಂಗ್ಲರು ಅಂತಿಮವಾಗಿ ಸೋಲು ಕಂಡರು. ಬಾಂಗ್ಲಾ ಪರ ಟಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್ ಮತ್ತು ಶಕಿಬ್ ಅಲ್ ಹಸನ್ ಬಿಗು ದಾಳಿ ನಡೆಸಿ ಆಂಗ್ಲರನ್ನು ಕಟ್ಟಿಹಾಕುವಲ್ಲಿ ಯಶಸ್ಸು ಕಂಡರು.
ಇದನ್ನೂ ಓದಿ IND VS AUS: ಗಾಯಾಳು ಶ್ರೇಯಸ್ ಬದಲು ಸಂಜು ಸ್ಯಾಮ್ಸನ್ಗೆ ಅವಕಾಶ!
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ 20 ಓವರ್‌ಗಳಲ್ಲಿ 2 ವಿಕೆಟಿಗೆ 158 (ಲಿಟನ್ ದಾಸ್ 73, ನಜ್ಮುಲ್ ಹುಸೇನ್ ಔಟಾಗದೆ 47, ಜೋರ್ಡನ್ 21ಕ್ಕೆ 1, ರಶೀದ್ 23ಕ್ಕೆ 1). ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟಿಗೆ 142 (ಮಲಾನ್ 53, ಬಟ್ಲರ್ 40, ಟಸ್ಕಿನ್ ಅಹ್ಮದ್ 26ಕ್ಕೆ 2, ಮುಸ್ತಫಿಜುರ್ 14ಕ್ಕೆ 1, ತನ್ವೀರ್ ಇಸ್ಲಾಮ್ 17ಕ್ಕೆ 1).