ಬರ್ಮಿಂಗ್‌ಹ್ಯಾಮ್: ಪ್ರವಾಸಿ Team India ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ.
ಕಳೆದ ವರ್ಷ ಆರಂಭಗೊಂಡಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳು ಮಕ್ತಾಯಗೊಂಡ ಬಳಿಕ ಭಾರತ ತಂಡದ ಕೆಲವು ಆಟಗಾರರಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಕೊನೇ ಪಂದ್ಯವನ್ನು ರದ್ದು ಮಾಡಿ ಟೀಮ್ ಇಂಡಿಯಾ ಆಟಗಾರರು ವಾಪಸ್ ಬಂದಿದ್ದರು. ಆ ಉಳಿಕೆ ಪಂದ್ಯವು ಜುಲೈ ೧ರಿಂದ ನಡೆಯಲಿದ್ದು, ಭಾರತ ತಂಡ ಈಗಾಗಲೇ ಇಂಗ್ಲೆಂಡ್ ತಲುಪಿ ಅಲ್ಲಿ ಅಭ್ಯಾಸ ಪಂದ್ಯಗಳಲ್ಲಿ ನಿರತವಾಗಿದೆ. ಏತನ್ಮಧ್ಯೆ, ವಿದೇಶಿ ನೆಲದಲ್ಲಿ ಪ್ರಭಾವಿ ಪ್ರದರ್ಶನ ನೀಡುತ್ತಿರುವ ಭಾರತ ತಂಡವನ್ನು ಎದುರಿಸುವಂಥ ಬಲಿಷ್ಠ ಬಳಗವನ್ನು ಇಸಿಬಿ ಪ್ರಕಟಿಸಿದೆ.
ಇವರೆಲ್ಲ ಇದ್ದಾರೆ ತಂಡದಲ್ಲಿ
ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ೩ ಪಂದ್ಯಗಳ ಸರಣಿ ಕ್ಲೀನ್ ಸ್ವೀಪ್ ಮಾಡಿರುವ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವನ್ನೇ ಭಾರತದ ವಿರುದ್ಧವೂ ಇಳಿಸಲಿದೆ. ಆದರೆ, ಕೋವಿಡ್-೧೯ ಸೋಂಕಿಗೆ ಒಳಗಾಗಿರುವ ಬೆನ್ ಸ್ಪೋಕ್ಸ್ ಬದಲಿಗೆ ಸ್ಯಾಮ್ ಬಿಲ್ಲಿಂಗ್ಸ್‌ಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಮ್ಯಾಥ್ಯೂ ಪಾಟ್ಸ್ ಹಾಗೂ ಜೇಮಿ ಓವರ್ಟನ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಇಂಗ್ಲೆಂಡ್ ಪುರುಷರ ತಂಡ
ಬೆನ್ ಸ್ಟೋಕ್ಸ್ (ನಾಯಕ)
ಜೇಮ್ಸ್ ಆಂಡರ್ಸನ್
ಜೊನಾಥನ್ ಬೈರ್‌ಸ್ಟೋವ್
ಸ್ಯಾಮ್ ಬಿಲ್ಲಿಂಗ್ಸ್
ಸ್ಟುವರ್ಟ್ ಬ್ರಾಡ್
ಹ್ಯಾರಿ ಬ್ರೂಕ್
ಜ್ಯಾಕ್ ಕ್ರಾವ್ಲಿ
ಬೆನ್ ಫೋಕ್ಸ್
ಜ್ಯಾಕ್ ಲೀಚ್
ಅಲೆಕ್ಸ್ ಲೀಸ್
ಕ್ರೇಗ್ ಓವರ್ಟನ್
ಜೇಮಿ ಓವರ್ಟನ್
ಮ್ಯಾಥ್ಯೂ ಪಾಟ್ಸ್
ಓಲಿ ಪೋಪ್
ಜೋ ರೂಟ್
ಪ್ರಕಟವಾಗಿಲ್ಲ ಭಾರತ ತಂಡ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ತಂಡದ ಸಂಯೋಜನೆಯನ್ನು ತಂಡದ ಮ್ಯಾನೇಜ್ಮೆಂಟ್ ಪ್ರಕಟಿಸಿಲ್ಲ. ರೋಹಿತ್ ಶರ್ಮ ಅಲಭ್ಯರಾದರೆ ಯಾರು ತಂಡ ನೇತೃತ್ವ ವಹಿಸುತ್ತಾರೆ ಹಾಗೂ ಆರಂಭಿಕರಾಗಿ ಕಣಕ್ಕೆ ಇಳಿಯಬಹುದು ಎಂಬ ಸೂಚನೆಯೂ ಇಲ್ಲ. ಹೀಗಾಗಿ ಕೊನೇ ಕ್ಷಣದಲ್ಲಿ ೧೧ರ ಬಳಗವನ್ನು ಪ್ರಕಟಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: Team India ನಾಯಕ ರೋಹಿತ್ ಶರ್ಮಗೆ ಕೊರೊನಾ