ರಾಜ್ಕೋಟ್: ಭಾರತ ವಿರುದ್ಧದ ಮೂರನೇ ಟೆಸ್ಟ್(India vs England 3rd Test) ಪಂದ್ಯಕ್ಕೆ ಪ್ರವಾಸಿ ಇಂಗ್ಲೆಂಡ್ ಒಂದು ದಿನ ಮುಂಚಿತವಾಗಿಯೇ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದು, ಆಫ್-ಸ್ಪಿನ್ನರ್ ಶೋಯೆಬ್ ಬದಲಿಗೆ ಮಾರ್ಕ್ ವುಡ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಪಾಕಿಸ್ತಾನ ಮೂಲಕ ಇಂಗ್ಲೆಂಡ್ ಸ್ಪಿನ್ನರ್ ಬಶೀರ್ ಪದಾರ್ಪಣೆ ಮಾಡಿದ್ದರು. ಮಾರ್ಕ್ ವುಡ್ ಸೇರ್ಪಡೆಯಿಂದ ತಂಡದಲ್ಲಿ 2 ವೇಗಿಗಳು ಕಾಣಿಸಿಕೊಂಡಿದ್ದಾರೆ. ಮೊದಲೆಡರು ಪಂದ್ಯಗಳಲ್ಲಿ ಕೇವಲ ಒಂದು ವೇಗಿಯನ್ನು ಮಾತ್ರ ಇಂಗ್ಲೆಂಡ್ ಕಣಕ್ಕಿಳಿಸಿತ್ತು.
ಬಶೀರ್ ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳೊಂದಿಗೆ ಚೊಚ್ಚಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಪಡೆದ್ದರು. ಆದಾಗ್ಯೂ, ಟಾಮ್ ಹಾರ್ಟ್ಲಿ ಮತ್ತು ರೆಹಾನ್ ಅಹ್ಮದ್ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಮತ್ತು ಆಫ್-ಸ್ಪಿನ್ನರ್ ಪಾತ್ರದಲ್ಲಿ ಜೋ ರೂಟ್ ತಂಡದಲ್ಲಿರುವ ಕಾರಣ ಬಶೀರ್ ಅವರನ್ನು ಕೈಬಿಡಲಾಗಿದೆ. ರಾಜ್ಕೋಟ್ನ ಪಿಚ್ ಫ್ಲಾಟ್ ವಿಕೆಟ್ ಆಗಿರುವುದರಿಂದ ಇಂಗ್ಲೆಂಡ್ ಹೆಚ್ಚುವರಿ ವೇಗಿಗೆ ಮಣೆ ಹಾಕಿದಂತಿದೆ. ಜೇಮ್ಸ್ ಆ್ಯಂಡರ್ಸನ್ 700 ವಿಕೆಟ್ಗಳ ಸನಿಹವಿದ್ದು ಈ ಮೈಲಿಗಲ್ಲು ತಲುಪಲು ಅವರಿಗೆ 5 ವಿಕೆಟ್ ಅಗತ್ಯವಿದೆ.
ಇದನ್ನೂ ಓದಿ IND vs ENG: ಮೂರನೇ ಪಂದ್ಯದಲ್ಲಿ ಜುರೆಲ್, ಸರ್ಫ್‌ರಾಜ್ ಪದಾರ್ಪಣೆ ಖಚಿತ; ಇಲ್ಲಿದೆ ವಿಡಿಯೊ
One change to our XI for the third Test in Rajkot 🏏 🔁
— England Cricket (@englandcricket) February 14, 2024
🇮🇳 #INDvENG 🏴 #EnglandCricket
ಇಂಗ್ಲೆಂಡ್ ಆಡುವ ಬಳಗ
ಝಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಜೇಮ್ಸ್ ಆ್ಯಂಡರ್ಸನ್, ಮಾರ್ಕ್ ವುಡ್.
ಭಾರತಕ್ಕೆ ಗಾಯದ ಚಿಂತೆ
ಮೂರನೇ ಟೆಸ್ಟ್(India vs England 3rd Test) ಪಂದ್ಯಕ್ಕಾಗಿ ಟೀಮ್ ಇಂಡಿಯಾ(Team India) ನೂತನ ಸ್ವರೂಪದ ತಂಡವನ್ನು ಆರಿಸಿ ಕಣಕ್ಕಿಳಿಯುವ ಅನಿವಾರ್ಯತೆಗೆ ಸಿಲುಕಿದೆ. ಇದಕ್ಕೆ ಕಾರಣ ಗಾಯದಿಂದ ಅನುಭವಿ ಆಟಗಾರರು ಅಲಭ್ಯರಾಗಿರುವುದು. ಹೀಗಾಗಿ ಈ ಪಂದ್ಯದಲ್ಲಿ ಕನಿಷ್ಠ 2 ಮಂದಿ ಭಾರತ ಪರ ಟೆಸ್ಟ್ ಕ್ಯಾಪ್ ಪಡೆಯುವುದು ಪಕ್ಕಾ ಎನ್ನಬಹುದು.
ವಿಕೆಟ್ ಕೀಪರ್ ಧ್ರುವ ಜುರೆಲ್(Dhruv Jurel) ಮತ್ತು ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್(Sarfaraz Khan) ಟೆಸ್ಟ್ ಪದಾರ್ಪಣೆ ಮಾಡುವುದು ಬಹುತೇಕ ಖಚಿತಗೊಂಡಿದೆ. ಇಬ್ಬರೂ ಆಟಗಾರರು ಕೂಡ ಭಾರತ ತಂಡದೊಂದಿಗೆ ಮಂಗಳವಾರ ಮತ್ತು ಬುಧವಾರ ಸುದೀರ್ಘ ಅಭ್ಯಾಸ ನಡೆಸಿದ್ದಾರೆ. ಅಲ್ಲದೆ ಬಿಸಿಸಿಐ ಬುಧವಾರ ಜುರೆಲ್ ಅವರನ್ನು ವಿಶೇಷ ಸಂದರ್ಶನ ಮಾಡುವ ಮೂಲಕ ಭಾರತದ ಜೆರ್ಸಿಯಲ್ಲಿ ಫೋಟೊ ಶೂಟ್ ಕೂಡ ಮಾಡಿದೆ. ಇದನೆಲ್ಲ ನೋಡುವಾಗ ಅವರು ನಾಳೆಯ ಪಂದ್ಯದಲ್ಲಿ ಆಡುವುದು ಖಚಿತ ಎನ್ನಬಹುದು.
ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಸ್ಥಾನ ಮತ್ತು ಫಿಟ್ನೆಸ್ ಪಾಸ್ ಆಗದ ಕಾರಣ ಮೂರನೇ ಪಂದ್ಯದಿಂದ ಡ್ರಾಪ್ ಔಟ್ ಆಗಿರುವ ಕೆ.ಎಲ್ ರಾಹುಲ್ ಕ್ರಮಾಂಕವೂ ಖಾಲಿ ಇದೆ. ಈ 2 ಸ್ಥಾನಗಳ ಪೈಕಿ ಒಂದು ಸ್ಥಾನ ಸರ್ಫರಾಜ್ ಖಾನ್ಗೆ ಸಿಗುವು ಪಕ್ಕಾ ಆಗಿದೆ