ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡ ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಅವರು ಅಕ್ಟೋಬರ್ 2022ರಲ್ಲಿ ಚರ್ಮದ ಕ್ಯಾನ್ಸರ್ಗೆ ಒಳಗಾಗಿದ್ದ ಕಹಿ ನೆನಪನ್ನು ಹೇಳಿಕೊಂಡಿದ್ದಾರೆ. ಸಮಸ್ಯೆ ನಿವಾರಣೆಗಾಗಿ ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನೋವನ್ನೂ ಅವರು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಕ್ರಿಕೆಟಿಗರು ಸದಾ ಬಿಸಿಲಿಗೆ ಮೈಯೊಡ್ಡುವ ಕಾರಣ ಕಾರಣ ಚರ್ಮದ ಕ್ಯಾನ್ಸರ್ಗೆ ಒಳಗಾಗುವ ಅಪಾಯ ಇರುತ್ತದೆ. ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
2022 ರಲ್ಲಿ ತಮ್ಮ ಕೌಂಟಿ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಚರ್ಮದ ಕ್ಯಾನ್ಸರ್ ತಪಾಸಣೆಯಲ್ಲಿ ಭಾಗವಹಿಸಿದ್ದ ವೇಳೆಯಲ್ಲಿ ಕ್ಯಾನ್ಸರ್ ಇರುವುದು ಗೊತ್ತಾಯಿತು ಎಂದು ಹೇಳಿದ್ದಾರೆ. ನನ್ನ ಎದೆ ಮೇಲಿನ ಬಿದ್ದಿದ್ದ ಚುಕ್ಕೆಯನ್ನು ನೋಡಿ ದ ವೈದ್ಯರು ಹೆಚ್ಚಿನ ತಪಾಸಣೆಗೆ ಸೂಚಿಸಿದರು. ಬಳಿಕ ಅದು ಮೆನಲೋಮಾ ಎಂಬುದು ಗೊತ್ತಾಯಿತು. ಅದನ್ನು ತೆಗೆಯಲು ಶಸ್ತ್ರ ಚಿಕಿತ್ಸೆ ನಡೆಸಲಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ : IPL 2023: ತವರಿಗೆ ಮರಳಿದ ಆರ್ಚರ್; ಮುಂಬೈ ತಂಡ ಸೇರಿದ ಜೋರ್ಡನ್
ಕಳೆದ ಅಕ್ಟೋಬರ್ನಲ್ಲಿ ನಾನು ಪರೀಕ್ಷೆಗೆ ಒಳಗಾದೆ. ನನ್ನ ಎದೆಯ ಮೇಲಿದ್ದ ಚರ್ಮದ ಕ್ಯಾನ್ಸರ್ ಅನ್ನು ತೆಗೆದುಹಾಕಲು ಎರಡು ಶಸ್ತ್ರಚಿಕಿತ್ಸೆಗಳಿಗೆ ಒಳಪಟ್ಟೆ. ಸನ್ಸ್ಕ್ರೀನ್ ಹಾಕುವ ವಿಚಾರದಲ್ಲಿ ನಾವು ಅಜಾಗರೂಕತೆ ವಹಿಸುತ್ತೇವೆ. ಆದರೆ, ಆದರೆ ಅದು ಅಪಾಯಕ್ಕೆ ದಾರಿ ಎಂದು ಹೇಳಿದ್ದಾರೆ ಬಿಲಿಂಗ್ಸ್.
ಕ್ರಿಕೆಟ್ ಆಡುವಾಗ ನಾವು ಸೂರ್ಯನಿಗೆ ತುಂಬಾ ಮೈ ಒಡ್ಡಿಕೊಳ್ಳುತ್ತೇವೆ. ಹೀಗಾಗಿ ನಾವೆಲ್ಲರೂ ಹೆಚ್ಚು ಶ್ರದ್ಧೆಯಿಂದಿರಬಹುದು. ಕಳೆದ 20 ವರ್ಷಗಳಲ್ಲಿ ಪ್ರಕರಣಗಳು ದ್ವಿಗುಣಗೊಂಡಿವೆ ಮತ್ತು ಮುಂದಿನ 20 ವರ್ಷಗಳಲ್ಲಿ ಮತ್ತೆ ದ್ವಿಗುಣಗೊಳ್ಳುತ್ತವೆ ಎಂದು ಬಿಲಿಂಗ್ಸ್ ನುಡಿದಿದ್ದಾರೆ.
ಕ್ರಿಕೆಟ್ ಎಲ್ಲವೂ ಅಲ್ಲ: ಸ್ಯಾಮ್ ಬಿಲ್ಲಿಂಗ್ಸ್
ಬಿಲ್ಲಿಂಗ್ಸ್ ತಮ್ಮ ಅನುಭವವನ್ನು ಮತ್ತಷ್ಟು ಹಂಚಿಕೊಂಡಿದ್ದು, ಈ ಘಟನೆ ಜೀವನಕ್ಕೆ ಇನ್ನಷ್ಟು ತಿರುಕೊಟ್ಟಿತು ಎಂದು ಹೇಳಿದ್ದಾರೆ. ಚರ್ಮಕ್ಕೆ ಆಗುವ ಹಾನಿಯ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕು ಎಂದು ಹೇಳಿದರು.
“ನಾನು ಏನು ಮಾಡಲು ಬಯಸುತ್ತೇನೆ ಎಂಬುದರ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಪಷ್ಟತೆಯನ್ನು ಬಯಸುತ್ತೇನೆ. ಕ್ರಿಕೆಟ್ ಎಲ್ಲವೂ ಅಲ್ಲ ಮತ್ತು ಅಂತ್ಯವಲ್ಲ ಎಂದು ನನಗೆ ಅನಿಸಿದೆ. ಹೀಗಾಗಿ ಜೀವನದ ಬಗ್ಗೆ ಹೆಚ್ಚು ಪ್ರೀತ ಇಟ್ಟುಕೊಂಡಿದ್ದೇನೆ ಎಂದು ಸ್ಯಾಮ್ ಬಿಲಿಂಗ್ಸ್ ಹೇಳಿದರು.