Site icon Vistara News

Ashes 2023 : ಮೂರನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್​ ತಂಡಕ್ಕೆರೋಚಕ ಜಯ

Ashes 2023

ಲೀಡ್ಸ್​​: ಆ್ಯಶಸ್​ ಸರಣಿಯ (Ashes 2023) ಮೂರನೇ ಪಂದ್ಯವೂ ಅತ್ಯಂತ ರೋಚಕವಾಗಿ ನಡೆಯಿತು. ಕಳೆದೆರಡು ಪಂದ್ಯಗಳಲ್ಲಿ ಸೋತು ಮುಖಭಂಗ ಎದುರಿಸಿದ್ದ ಇಂಗ್ಲೆಂಡ್​ ತಂಡ ಮೂರನೇ ಪಂದ್ಯವನ್ನು 3 ವಿಕೆಟ್​​ಗಳಿಂದ ಗೆದ್ದುಕೊಂಡಿದೆ. ಕೊನೇ ತಕನವೂ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಗೆಲುವು ತನ್ನದಾಗಿಸಿಕೊಂಡಿತು. ಈ ಸೋಲಿನ ಹೊರತಾಗಿಯೂ ಮೊದಲೆರಡು ಪಂದ್ಯಗಳಲ್ಲಿ ಗೆದ್ದಿರುವ ಪ್ರವಾಸಿ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ 2-1ರ ಮುನ್ನಡೆ ಹೊಂದಿದೆ. ಈ ಗೆಲುವಿನೊಂದಿಗೆ ಆ್ಯಶಸ್​ ಸರಣಿ ಜೀವಂತವಾಗಿ ಉಳಿದಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಸೋತಿದ್ದರೆ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿ ಆಸ್ಟ್ರೇಲಿಯಾ ತಂಡದ ಕೈ ವಶವಾಗುತ್ತಿತ್ತು. ಆದರೆ, ಇಂಗ್ಲೆಂಡ್​ ತಂಡದ ಬ್ಯಾಟರ್​ ಹ್ಯಾರಿ ಬ್ರೂಕ್​ ಅದಕ್ಕೆ ಅವಕಾಶ ಕೊಡಲಿಲ್ಲ.

ಲೀಡ್ಸ್​ನ ಹೆಡಿಂಗ್ಲೆ ಕ್ರಿಕೆಟ್​ ಗ್ರೌಂಡ್​ ಬೌಲರ್​ಗಳಿಗೆ ಹೆಚ್ಚು ನೆರವು ನೀಡಿದ ಕಾರಣ ಪಂದ್ಯ ನಾಲ್ಕನೇ ದಿನಕ್ಕೆ ಮುಕ್ತಾಯಗೊಂಡಿತು. ಆದಾಗ್ಯೂ ಸ್ಪರ್ಧಾತ್ಮಕವಾಗಿ ನಡೆಯಿತು. ಸಣ್ಣ ಮೊತ್ತದ ಪಂದ್ಯವಾದರೂ ಕ್ರಿಕೆಟ್​ ಪ್ರೇಮಿಗಳಿಗೆ ಕೌತುಕ ಮೂಡಿಸಿತು. ಕೊನೇ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ 251 ರನ್​ಗಳ ಬೇಕಾಗಿತ್ತು. ಸರಿಯಾಗಿ 50 ಓವರ್​ಗಳು ಆಡಿದ ಇಂಗ್ಲೆಂಡ್​ ತಂಡ 7 ವಿಕೆಟ್​ ಕಳೆದುಕೊಂಡು 254 ರನ್​ ಬಾರಿಸಿ ಗೆಲುವು ಸಾಧಿಸಿತು.

ಹೆಡಿಂಗ್ಲೆ ಪಿಚ್​ನಲ್ಲಿ ನಾಲ್ಕನೇ ಇನಿಂಗ್ಸ್​ನಲ್ಲಿ 251 ರನ್​ ಗಳಿಸುವುದು ಇಂಗ್ಲೆಂಡ್​ ಪಾಲಿಗೆ ಸವಾಲಿನ ಸಂಗತಿಯಾಗಿತ್ತು. ಆದಾಗೂ ಮೂರನೇ ದಿನದ ಅಂತ್ಯಕ್ಕೆ ವಿಕೆಟ್​ ನಷ್ಟವಿಲ್ಲದೇ 27 ರನ್​ ಗಳಿಸಿದ್ದ ಇಂಗ್ಲೆಂಡ್ ತಂಡ ನಾಲ್ಕನೇ ದಿನ ಗುರಿ ಮುಟ್ಟಲು ಪೇಚಾಡಿತು. ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್​​ (78 ರನ್​ಗಳಿಗೆ 5 ವಿಕೆಟ್​) ಎದುರಾಳಿ ತಂಡಕ್ಕೆ ಆತಂಕ ಮೂಡಿಸಿದ್ದರು. ಆದರೂ ವೇಗಿಗಳ ಸವಾಲು ಮೀರಿ ಗೆಲುವು ದಾಖಲಿಸಿತು.

ಕೊನೇ ದಿನದಲ್ಲಿ ಗೆಲುವಿಗಾಗಿ 234 ರನ್​ಗಳು ಇಂಗ್ಲೆಂಡ್​ ತಂಡಕ್ಕೆ ಬೇಕಾಗಿತ್ತು. ಅತ್ಯುತ್ತಮವಾಗಿ ಆಡಿದ್ದ ಬೆನ್​ ಡಕೆಟ್​ 23 ರನ್​ಗಲಿಗೆ ವಿಕೆಟ್​ ಒಪ್ಪಿಸಿದರೆ ಜಾಕ್​ ಕ್ರಾವ್ಲಿ 44 ರನ್​ಗಳಿಗೆ ಔಟಾಗುವ ಮೂಲಕ ಅರ್ಧ ಶತಕದ ಅವಕಾಶ ಕಳೆದುಕೊಂಡರು. ಮೂರನೇ ಕ್ರಮಾಂಕದಲ್ಲಿ ಭರ್ಜರಿಯಾಗಿ ಬ್ಯಾಟ್​ ಬೀಸಲು ಬಂದ ಮೊಯೀನ್​ ಅಲಿ ಕೇವಲ 5 ರನ್​ಗೆ ವಿಕೆಟ್​ ಒಪ್ಪಿಸಿದರು. ಜೂ ರೂಟ್​ 21 ರನ್​ಗೆ ಸೀಮಿತಗೊಂಡರು. ನಾಯಕ ಬೆನ್​ ಸ್ಟೋಕ್ಸ್​ 13 ರನ್​ ಹಾಗೂ ಜಾನಿ ಬೇರ್​​ಸ್ಟೋವ್ 5 ರನ್​ಗಳಿಗೆ ಔಟಾಗುವ ಮೂಲಕ ಇಂಗ್ಲೆಂಡ್​ ತಂಡಕ್ಕೆ ಸಂಕಷ್ಟ ಎದುರಾಯಿತು.

ಇದನ್ನೂ ಓದಿ : Ashes 2023: ಆ್ಯಶಸ್​​ ಟೆಸ್ಟ್​ ಸರಣಿಯಿಂದ ಹೊರಬಿದ್ದ ನಥಾನ್​ ಲಿಯೋನ್​

ಮರ್ಯಾದೆ ಕಾಪಾಡಿದ ಬ್ರೂಕ್​, ಗೆಲುವು ತಂದ ವೋಕ್ಸ್​

ಸ್ಟಾರ್ಕ್​ ಬೌಲಿಂಗ್​ಗೆ ವಿಕೆಟ್​ಗಳನ್ನು ಒಪ್ಪಿಸುತ್ತಾ ಸಂಕಷ್ಟಕ್ಕೆ ಬಿದ್ದಿದ್ದ ಇಂಗ್ಲೆಂಡ್​ ತಂಡದ ಮರ್ಯಾದೆಯನ್ನು ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್​ ಕಾಪಾಡಿದರು. 93 ಎಸೆತಗಳನ್ನು ಎದುರಿಸಿದ ಅವರು 75 ರನ್​ ಬಾರಿಸಿದರು. ಅದಕ್ಕಿಂತಲೂ ಹೆಚ್ಚಾಗಿ ಆರನೇ ಕ್ರಮಾಂಕದಲ್ಲಿ ಆಡಲು ಇಳಿದ ಕ್ರಿಸ್​ ವೋಕ್ಸ್​ ಅಜೇಯರಾಗಿ ಉಳಿದು 32 ರನ್​ ಬಾರಿಸಿದರು. ವೋಕ್ಸ್​ ಮತ್ತು ಬ್ರೂಕ್​ ಆರನೇ ವಿಕೆಟ್​​ಗೆ 59 ರನ್​ಗಳ ಜತೆಯಾಟ ಆಡಿದರು. ಅದು ಗೆಲುವಿನ ಜತೆಯಾಟ ಎನಿಸಿತು. ಕೊನೇಯಲ್ಲಿ ಮಾರ್ಕ್ ವುಡ್ 8 ಎಸೆತಕ್ಕೆ 16 ರನ್​ ಬಾರಿಸಿ ವಿಜಯೋತ್ಸವ ಆಚರಿಸಿದರು.

Exit mobile version