Site icon Vistara News

INDvsENG T20 : ಸೂರ್ಯಕುಮಾರ್‌ ಮಿಂಚಿದರೂ ಭಾರತಕ್ಕೆ ಲಭಿಸಲಿಲ್ಲ ಗೆಲುವು, 2-1ರಲ್ಲಿ ಸರಣಿ ಜಯ

INDvsENG T20

ನಾಟಿಂಗ್‌ಹ್ಯಾಮ್‌ (ಇಂಗ್ಲೆಂಡ್‌): ಸೂರ್ಯಕುಮಾರ್‌ ಯಾದವ್‌ (117 ರನ್‌, 55 ಎಸೆತ, 14ಫೋರ್‌, 6 ಸಿಕ್ಸರ್‌) ಅವರಶತಕದ ಹೊರತಾಗಿಯೂ ಟೀಮ್‌ ಇಂಡಿಯಾ, INDvsENG T20 ಟಿ20 ಸರಣಿಯ 3ನೇ ಹಾಗೂ ಕೊನೇ ಹಣಾಹಣಿಯಲ್ಲಿ 17 ರನ್‌ಗಳಿಂದ ಇಂಗ್ಲೆಂಡ್‌ಗೆ ಶರಣಾಯಿತು. ಕ್ಲೀನ್‌ ಸ್ವೀಪ್‌ ಮಾಡುವ ಅವಕಾಶ ಕಳೆದುಕೊಂಡ ಭಾರತ ಬಳಗ, 3 ಪಂದ್ಯಗಳ ಸರಣಿಯನ್ನು 2-1ರ ಅಂತರದಿಂದ ವಶಪಡಿಸಿಕೊಂಡಿತು.

ಟ್ರೆಂಟ್‌ ಬ್ರಿಜ್‌ ಕ್ರೀಡಾಂಗಣದಲ್ಲಿ ಭಾನುವಾರ 216 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 198 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಭಾರತದ ಮೊತ್ತದಲ್ಲಿ ಸೂರ್ಯಕುಮಾರ್‌ ಅವರದು ಸಿಂಹ ಪಾಲು (117 ರನ್‌). ಉಳಿದ 9 ಬ್ಯಾಟ್ಸ್‌ಮನ್‌ಗಳು ಒಟ್ಟು ಗಳಿಸಿದ್ದು 81 ರನ್‌. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯವನ್ನು ಮರೆಮಾಚುವಂತೆ ಸೂರ್ಯಕುಮಾರ್‌ ಅಬ್ಬರಿಸಿದರು. ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟರ್‌ಗಳೂ ಜವಾಬ್ದಾರಿ ಮರೆತು ವಿಕೆಟ್‌ ಒಪ್ಪಿಸಿದರು. ಹೀಗಾಗಿ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡುವ ಅವಕಾಶ ಕೈತಪ್ಪಿತು. ಅಲ್ಲದೆ, ಸತತ ೨೦ ಪಂದ್ಯಗಳನ್ನು ಗೆದ್ದು ವಿಶ್ವ ದಾಖಲೆ ಸೃಷ್ಟಿಸುವ ಅವಕಾಶವನ್ನು ನೂತನ ನಾಯಕ ರೋಹಿತ್‌ ಶರ್ಮ ಕಳೆದುಕೊಂಡರು.

ಕಳಪೆ ಬೌಲಿಂಗ್‌

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆತಿಥೇಯ ಇಂಗ್ಲೆಂಡ್‌ ತಂಡ ನಿಗದಿತ 20 ಓವರ್‌ಗಳಲ್ಲಿ7 ವಿಕೆಟ್‌ ನಷ್ಟಕ್ಕೆ 215 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಭುವನೇಶ್ವರ್‌ ಕುಮಾರ್‌, ಜಸ್‌ಪ್ರಿತ್‌ ಬುಮ್ರಾ ಮತ್ತು ಹಾರ್ದಿಕ್‌ ಪಾಂಡ್ಯರಿಲ್ಲದ ಭಾರತದ ಬೌಲಿಂಗ್‌ ಬಳಗ ಪ್ರಭಾವ ಬೀರಲಿಲ್ಲ. . ಆವೇಶ್‌ ಖಾನ್‌, ಉಮ್ರಾನ್‌ ಮಲಿಕ್‌ರಂಥ ಅನನುಭವಿ ವೇಗಿಗಳ ಎಸೆತಗಳನ್ನು ಆಂಗ್ಲರು ಮೈದಾನದ ಸುತ್ತಲೂ ಆವೇಶದಿಂದ ಕಳುಹಿಸಿದರು.

ಹಲವು ಕ್ಯಾಚ್‌ ಕೈ ಚೆಲ್ಲಿದರು

ರೋಹಿತ್‌ ಶರ್ಮ ಬಳಗ ಒಂದಷ್ಟು ಕ್ಯಾಚ್‌ಗಳನ್ನು ನೆಲಕ್ಕೆ ಹಾಕಿದ್ದು ಕೂಡ ಆತಿಥೇಯರ ಪಾಲಿಗೆ ವರದಾನವಾಯಿತು. ಬಟ್ಲರ್‌ ಔಟಾದ ಬಳಿಕ ಕ್ರೀಸಿಗಿಳಿದ ಡೇವಿಡ್‌ ಮಲಾನ್‌ 77 ರನ್‌ (39 ಎಸೆತ, 6 ಫೋರ್‌, 5 ಸಿಕ್ಸರ್‌) ಆತಿಥೇಯರ ಇನಿಂಗ್ಸ್‌ಗೆ ಆಧಾರ ಸ್ತಂಭವಾದರು. ಕ್ರೀಸ್‌ನ ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ, ಅದನ್ನು ಲೆಕ್ಕಿಸದೆ ಬ್ಯಾಟ್‌ ಬೀಸತೊಡಗಿದರು.

5ನೇ ಕ್ರಮಾಂಕದಲ್ಲಿಕ್ರೀಸ್‌ಗೆ ಆಗಮಿಸಿದ ಲಿಯಾಮ್‌ ಲಿವಿಂಗ್‌ಸ್ಟನ್‌ ಕೂಡ ಭಾರತೀಯರ ದುರ್ಬಲ ಬೌಲಿಂಗ್‌ನಲ್ಲಿಲಾಭ ಗಳಿಸುವುದರತ್ತ ಗಮನ ಹರಿಸಿದರು. ಈ ಜೋಡಿ 4ನೇ ವಿಕೆಟ್‌ಗೆ 84 ರನ್‌ ಕಲೆಹಾಕಿತು.


ಸ್ಕೋರ್‌ ವಿವರ
ಇಂಗ್ಲೆಂಡ್‌: 20 ಓವರ್‌ಗಳಲ್ಲಿ7 ವಿಕೆಟ್‌ಗೆ 215 (ಡೇವಿಡ್‌ ಮಲಾನ್‌ ೭೭, ಲಿವಿಂಗ್‌ಸ್ಟನ್‌ ೪೨; ರವಿ ಬಿಷ್ಣೋಯಿ ೩೦ಕ್ಕೆ ೨, ಹರ್ಷಲ್‌ ಪಟೇಲ್‌ ೩೫ಕ್ಕೆ೨).

ಭಾರತ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 198 (ಸೂರ್ಯಕುಮಾರ್‌ 117, ಶ್ರೇಯಸ್‌ ಅಯ್ಯರ್‌ 28; ರೀಸ್‌ ಟೊಪ್ಲಿ22ಕ್ಕೆ 3, ಡೇವಿಡ್‌ ವಿಲ್ಲಿ40ಕ್ಕೆ 2, ಕ್ರಿಸ್‌ ಜೋರ್ಡನ್‌ 37ಕ್ಕೆ 2) (

ಇದನ್ನೂ ಓದಿ: INDvsENG t20 : ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಐದನೇ ಭಾರತೀಯ ಆಟಗಾರ ಸೂರ್ಯಕುಮಾರ್‌

Exit mobile version