ಬೆಂಗಳೂರು: ಸತತ ಸೋಲಿನಿಂದ ಕಂಗೆಟ್ಟ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಗುರುವಾರ ನಡೆದ ಶ್ರೀಲಂಕಾ(ENG vs SL) ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ಗಳ ಸೋಲಿನ ಬಳಿಕ ನಾಯಕ ಜಾಸ್ ಬಟ್ಲರ್(Jos Buttler) ಅವರು ತಂಡದ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಎಲ್ಲ ಕ್ರಿಕೆಟ್ ಪಂಡಿತರೂ ಕೂಡ ಇಂಗ್ಲೆಂಡ್ ಮತ್ತೆ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ್ದರು. ಆದರೆ ಈಗ ಇಂಗ್ಲೆಂಡ್ ತಂಡ ಸ್ಥಿತಿ ಕಂಡ ಕ್ರಿಕೆಟ್ ಪಂಡಿತರೆಲ್ಲ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಬಟ್ಲರ್ ಪಡೆದ ಆಡಿದ ಐದು ಪಂದ್ಯಗಳ ಪೈಕಿ ಕೇವಲ ಒಂದೇ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿ 9ನೇ ಸ್ಥಾನ ಪಡೆದಿದೆ. ಭಾರತ ವಿರುದ್ಧ ಭಾನುವಾರ ನಡೆಯುವ ಪಂದ್ಯದಲ್ಲಿ ಸೋಲು ಕಂಡರೆ ಕೊನೆಯ ಸ್ಥಾನ ಪಡೆಯಲಿದೆ. 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಇಂಗ್ಲೆಂಡ್ಗೆ ಎದುರಾದ ಮೊದಲ ಹೀನಾಯ ಸ್ಥಿತಿ ಇದಾಗಿದೆ.
ಸೋಲಿನ ಬಳಿಕ ಮಾತನಾಡಿದ ತಂಡದ ನಾಯಕ ಬಟ್ಲರ್, “ಏನು ಹೇಳಬೇಕೆಂದೆ ತಿಳಿಯುತ್ತಿಲ್ಲ. ತಂಡದ ಎಲ್ಲ ಆಟಗಾರರು ಕೂಡ ಚಿಂತೆಯಲ್ಲಿ ಮುಳುಗಿದ್ದಾರೆ. ನಮ್ಮ ಪ್ರದರ್ಶನ ಎಲ್ಲಿ ಹೋಗಿದೆ ಎಂದು ಎಲ್ಲರು ಬೇಸರಗೊಂಡಿದ್ದಾರೆ” ಎಂದು ಬೇಸರದಿಂದಲೇ ಈ ಮಾತನ್ನು ಹೇಳಿದರು.
“ಈ ಸೋಲಿನಿಂದ ನಾವೆಲ್ಲರು ಹತಾಶರಾಗಿದ್ದೇವೆ. ನಾವು ನಮ್ಮ ಅತ್ಯುತ್ತಮ ಪ್ರದರ್ಶನದ ಕೊರತೆಯನ್ನು ಎದುರಿಸುತ್ತಿದ್ದೇವೆ. ನಾಯಕನಾಗಿ ಉತ್ತಮ ಪ್ರದರ್ಶನ ನೀಡದಿದ್ದಕ್ಕಾಗಿ ನನಗೆ ತುಂಬಾ ಬೇಸರವಿದೆ. ತಂಡದ ಸೋಲಿಗೆ ಆಟಗಾರರನ್ನು ನಾನು ದೂರುವುದಿಲ್ಲ. ಸೋಲಿಗೆ ಕಾರಣ ಏಏನೆಂದು ಕೇಳಿದರೆ, ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಒಟ್ಟಾರೆ ನಮ್ಮ ತಂಡಕ್ಕೆ ಗ್ರಹಣ ಹಿಡಿದಂತಾಗಿದೆ. ಮುಂದಿನ ಪಂದ್ಯಗಳಲ್ಲಾದರೂ ಗೆಲುವು ಸಾಧಿಸಲು ಪ್ರಯತ್ನಿಸುತ್ತೇವೆ” ಎಂದು ಹೇಳಿ ಬಟ್ಲರ್ ಭಾವುಕರಾದರು.
ಇದನ್ನೂ ಓದಿ PAK vs SA: ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ದಾಖಲೆ ಹೇಗಿದೆ?
England 🏴 Team Out from World Cup🥺 My fav team after Pakistan 🇵🇰🥺
— Ume hani✨ (@unknown_larki56) October 27, 2023
Sahi khety Cricket Rulatai zayda ha😭😭😭 Feeling bad for jos buttler 🥺
@josbuttler 🥺 pic.twitter.com/RaTqmG4Bvu
ಹೀನಾಯ ಸೋಲು
ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟ್ ಮಾಡಿ 33.2 ಓವರ್ಗಳಲ್ಲಿ 156 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ತಂಡ 25.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 160 ರನ್ ಬಾರಿಸಿ ವಿಜಯೋತ್ಸವ ಮಾಡಿತು.
ಸಣ್ಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಲಂಕಾ ತಂಡವು ಆರಂಭದಲ್ಲಿ ಸತತವಾಗಿ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. 23 ರನ್ಗಳಿಗೆ 2 ವಿಕೆಟ್ ಕಳೆದುಕೊಂಡ ತಂಡ ಸೋಲಿನ ದವಡೆಗೆ ಸಿಲುಕಿತು. ಆದರೆ, ಆರಂಭಿಕ ಬ್ಯಾಟರ್ ಪಾಥುಮ್ ನಿಸ್ಸಾಂಕ (68) ಹಾಗೂ ಸದೀರಾ ಸಮರವಿಕ್ರಮ (65) ಶತಕದ ಜತೆಯಾಟ ಆಡುವ ಮೂಲಕ ತಂಡವನ್ನು ಗೆಲ್ಲಿಸಿದರು.
ಲಂಕಾ ಸೆಮಿ ಆಸೆ ಜೀವಂತ
ಶ್ರೀಲಂಕಾ ತಂಡ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಐದು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸುವ ಮೂಲಕ 4 ಅಂಕ ಸಂಪಾದಿಸುವ ಜತೆಗೆ ನೆಟ್ರನ್ರೇಟ್ (-0.205) ಆಧಾರದಲ್ಲಿ ಪಾಕಿಸ್ತಾನ ತಂಡವನ್ನು ಕೆಳಕ್ಕೆ ತಳ್ಳಿ ಐದನೇ ಸ್ಥಾನ ಪಡೆಯಿತು. ಇದು ಶ್ರೀಲಂಕಾ ತಂಡಕ್ಕೆ ಸತತ ಎರಡನೇ ಗೆಲುವಾಗಿದೆ. ಹಿಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ದ ಜಯ ಸಾಧಿಸಿತ್ತು ಇಂಗ್ಲೆಂಡ್ ತಂಡ 9ನೇ ಸ್ಥಾನಕ್ಕೆ ಜಾರಿತು. ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತಿದ್ದರೆ, ನಂತರದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದಿತ್ತು. ಆ ಬಳಿಕ ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಇದೀಗ ಶ್ರೀಲಂಕಾ ವಿರುದ್ಧ ಸೋತಿದೆ.