Site icon Vistara News

Stuart Broad: ಯುವಿಯಿಂದ 6 ಸಿಕ್ಸರ್​ ಚಚ್ಚಿಸಿಕೊಂಡ ಸ್ಟುವರ್ಟ್​ ಬ್ರಾಡ್​ ಕ್ರಿಕೆಟ್​ಗೆ ವಿದಾಯ

Stuart Broad announces retirement

ಲಂಡನ್: ಸ್ಟುವರ್ಟ್​ ಬ್ರಾಡ್(Stuart Broad)​ ಹೆಸರು ಕೇಳುವಾಗ ನೆನಪಾಗುವುದು 2007ರ ಟಿ20(2007 t20 World cup) ವಿಶ್ವಕಪ್​ ಮತ್ತು ಯುವರಾಜ್​ ಸಿಂಗ್(Yuvraj Singh)​. ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಯುವರಾಜ್​ ಸಿಂಗ್​ ಅವರಿಂದ 6 ಎಸೆತಕ್ಕೆ 6 ಸಿಕ್ಸರ್ ಚಚ್ಚಿಸಿಕೊಂಡ ಬ್ರಾಡ್​ ಅವರು ಇದೀಗ ತಮ್ಮ ಕ್ರಿಕೆಟ್​ ಬದುಕಿಗೆ ತೆರೆ ಎಳೆಯಲು ನಿರ್ಧರಿಸಿದ್ದಾರೆ. ಆಸೀಸ್(The Ashes 2023)​ ವಿರುದ್ಧದ ಅಂತಿಮ ಟೆಸ್ಟ್​ ಬಳಿಕ ಅವರು ಕ್ರಿಕೆಟ್​ ನಿವೃತ್ತಿ ಘೋಷಿಸುವುದಾಗಿ(Stuart Broad retirement) ಮೂರನೇ ದಿನದಾಟದ ವೇಳೆ ತಿಳಿಸಿದ್ದಾರೆ. ​​

ಯುವರಾಜ್​ ಸಿಂಗ್​ ಅವರಿಂದ 6 ಸಿಕ್ಸರ್​ ಹೊಡೆಸಿಕೊಂಡು ಕಣ್ಣೀರು ಹಾಕಿದ ಸ್ಟುವರ್ಟ್​ ಬ್ರಾಡ್​ ಆ ಬಳಿಕ ವಿಶ್ವದ ನಂ. 1 ಬೌಲರ್​ ಆಗಿ ಕಾಣಿಸಿಕೊಳ್ಳುವ ಮೂಲಕ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಕಂಡ ಶ್ರೇಷ್ಠ ವೇಗಿಗಳಲ್ಲಿ ಸ್ಥಾನಪಡೆದಿದ್ದರು. ಇದೀಗ ಆ್ಯಶಸ್​ ಟೆಸ್ಟ್​ ತನ್ನ ಅಂತಿಮ ಕ್ರಿಕೆಟ್​ ಪಂದ್ಯ ಎಂದು ಘೋಷಣೆ ಮಾಡಿದ್ದಾರೆ.

37 ವರ್ಷದ ಸ್ಟುವರ್ಟ್​ ಬ್ರಾಡ್​ ಅವರು 2006ರಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಆಡುವ ಮೂಲಕ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. 2007ರಲ್ಲಿ ಶ್ರೀಲಂಕಾ ವಿರುದ್ಧ ಆಡುವ ಮೂಲಕ ಟೆಸ್ಟ್​ ಕ್ರಿಕೆಟ್ ಬಾಳ್ವೆ ಆರಂಭಿಸಿದ್ದರು. 167 ಟೆಸ್ಟ್​ ಪಂದ್ಯಗಳನ್ನು ಆಡಿರುವ ಬ್ರಾಡ್​ 602 ವಿಕೆಟ್​ ಪಡೆದಿದ್ದಾರೆ. ಏಕದಿನದಲ್ಲಿ 178, ಟಿ20ಯಲ್ಲಿ 65 ವಿಕೆಟ್​ ಉಡಾಯಿಸಿದ್ದಾರೆ. ಬ್ಯಾಟಿಂಗ್​ನಲ್ಲಿಯೂ ಶ್ರೇಷ್ಠ ದಾಖಲೆ ಹೊಂದಿದ್ದು ಟೆಸ್ಟ್​ನಲ್ಲಿ ಒಂದು ಶತಕ ಮತ್ತು 13 ಅರ್ಧಶತಕ ಬಾರಿಸಿದ್ದಾರೆ. 196 ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಒಟ್ಟು ಮೂರು ಮಾದರಿಯ ಕ್ರಿಕೆಟ್​ ಸೇರಿ 4,303 ರನ್​ ಬಾರಿಸಿದ್ದಾರೆ.

ಇದನ್ನೂ ಓದಿ The Ashes 2023; ನಿತಿನ್​ ಮೆನನ್ ರನೌಟ್​​ ತೀರ್ಪಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಆರ್​.ಅಶ್ವಿನ್​

ಆ್ಯಶಸ್ ಅಂತಿಮ ಟೆಸ್ಟ್​ನ ಮೂರನೇ ದಿನ ಕ್ರಿಕೆಟ್​ ನಿವೃತ್ತಿಯನ್ನು ಘೋಷಣೆ ಮಾಡಿದ ಬ್ರಾಡ್​ “17 ವರ್ಷದ ಸುದೀರ್ಘ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದೇನೆ. ಇದೊಂದು ಅದ್ಭುತ ಪಯಣವಾಗಿದೆ, ನಾಟಿಂಗ್‌ ಹ್ಯಾಮ್‌ ಶೈರ್ ಮತ್ತು ಇಂಗ್ಲೆಂಡ್ ಜೆರ್ಸಿಯನ್ನು ಧರಿಸಿದ್ದು ನನ್ನ ಪುಣ್ಯ. ಮುಂದಿನ ಜೀವನವನ್ನು ನನ್ನ ಕುಟುಂಬ ಸದಸ್ಯರೊಂದಿಗೆ ಕಳೆಯಲು ಇಚ್ಚಿಸುತ್ತೇನೆ. ನನ್ನ ಕ್ರಿಕೆಟ್​ ಪ್ರಯಣದಲ್ಲಿ ನನಗೆ ಬೆಂಬಲ ನೀಡಿದ ಎಲ್ಲ ಸಹ ಆಟಗಾರರಿಗೂ, ಕೋಚ್​ ಮತ್ತು ಆಯ್ಕೆ ಸಮಿತಿಯ ಎಲ್ಲ ಸಿಬ್ಬಂದಿಗಳಿಗೆ ಧನ್ಯವಾದಗಳು” ಎಂದು ಬ್ರಾಡ್​ ಹೇಳಿದರು.

Exit mobile version