Site icon Vistara News

Ashesh 2023 : ಮೊದಲ ಇನಿಂಗ್ಸ್​​ನಲ್ಲಿ 592 ರನ್​ಗಳ ಬೃಹತ್ ಮೊತ್ತ ಪೇರಿಸಿದ ಇಂಗ್ಲೆಂಡ್​ಗೆ ಭರ್ಜರಿ ಮುನ್ನಡೆ

England Cricket team

ಓಲ್ಡ್​ ಟ್ರಾಫರ್ಡ್​: ಆ್ಯಶಸ್​ ಸರಣಿಯ ನಾಲ್ಕನೇ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್​ ತಂಡ 592 ರನ್​ಗಳ ಬೃಹತ್ ಮೊತ್ತ ಪೇರಿಸಿದೆ. ಅಲ್ಲದೆ ಮೂರನೇ ದಿನದ ಅಂತ್ಯಕ್ಕೆ ಎದುರಾಳಿ ಆಸ್ಟ್ರೇಲಿಯಾ ತಂಡ 113 ರನ್​ ಪೇರಿಸುವಷ್ಟರಲ್ಲಿ 4 ವಿಕೆಟ್​ಗಳನ್ನು ಉರುಳಿಸಿದ್ದು ಇನ್ನೂ 162 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಪಂದ್ಯ ಮುಕ್ತಾಯಕ್ಕೆ ಇನ್ನೂ ಎರಡು ದಿನಗಳು ಬಾಕಿ ಉಳಿದಿದ್ದು ಆತಿಥೇಯ ತಂಡ ಗೆಲುವಿನ ವಿಶ್ವಾಸ ವೃದ್ದಿಸಿಕೊಂಡಿದೆ. ಆಸ್ಟ್ರೇಲಿಯಾ ತಂಡ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದು ಮೂರನೇ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್​ ತಂಡ ತನ್ನದಾಗಿಸಿಕೊಂಡಿದೆ. ಹೀಗಾಗಿ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 2-1 ರ ಮುನ್ನಡೆಯಲ್ಲಿದೆ. ಒಂದು ವೇಳೆ ಈ ಪಂದ್ಯವನ್ನು ಇಂಗ್ಲೆಂಡ್ ತಂಡ ತಂಡ ಸರಣಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಸದ್ಯದ ಮುನ್ನಡೆಯ ಪ್ರಕಾರ ಇಂಗ್ಲೆಂಡ್​​ಗೆ ಗೆಲುವಿನ ಸಾಧ್ಯತೆಗಳಿವೆ.

ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 317 ರನ್​ ಬಾರಿಸಿ ಅಲ್​ಔಟ್ ಆಗಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್​ ‘ಬಜ್​ಬಾಲ್​ ರೀತಿಯಲ್ಲಿ ಆಡಿತು. ಆರಂಭಿಕ ಬ್ಯಾಟರ್​ ಜಾಕ್ ಕ್ರಾವ್ಲಿ 189 ರನ್ ಬಾರಿಸಿದರೆ ನಾಯಕ ಬೆನ್​ ಸ್ಟೋಕ್ಸ್​ 51 ರನ್ ರನ್ ಗಳಿಸಿದರು. ಅದಕ್ಕಿಂತ ಮೊದಲು ಜೊ ರೂಟ್​ 84 ರನ್​ ಕಲೆ ಹಾಕಿದರೆ ಮೊಯೀನ್​ ಅಲಿ 54 ರನ್ ಕೊಡುಗೆ ಕೊಟ್ಟರು.

ಆಸ್ಟ್ರೇಲಿಯಾ ತಂಡದಪ ಪ್ರತಿಯೊಬ್ಬ ಆಟಗಾರನೂ ಏಕ ದಿನ ಕ್ರಿಕೆಟ್ ರೀತಿಯಲ್ಲಿ ಆಡುವ ಮೂಲಕ ದೊಡ್ಡ ಮೊತ್ತ ಪೇರಿಸಲು ನೆರವಾದರು. ಹ್ಯಾರಿ ಬ್ರೂಕ್​ 61 ರನ್ ಗಳಿಸಿದರೆ ಕೊನೇಯಲ್ಲಿ ಜಾನಿ ಬೇರ್​ಸ್ಟೋವ್ ಅಜೇಯ 99 ರನ್​ ಬಾರಿಸಿದರು. ಅವರು ಕೇವಲ ಒಂದು ರನ್​ಗಳಿಂದ ಶತಕದ ಅವಕಾಶದಿಂದ ವಂಚಿತರಾದರು.

ಮೊದಲ ಇನಿಂಗ್ಸ್​ನಲ್ಲಿ 257 ರನ್​ಗಳ ಹಿನ್ನಡೆಗೆ ಒಳಗಾದ ಆಸ್ಟ್ರೇಲಿಯಾ ತಂಡ ಪಂದ್ಯವನ್ನು ಉಳಿಸಿಕೊಳ್ಳುವುಕ್ಕೆ ಪ್ರಯತ್ನಿಸಿತು. ಆದರೆ, ಇಂಗ್ಲೆಂಡ್​ ಬೌಲರ್​ಗಳು ಅದಕ್ಕೆ ಅವಕಾಶ ಕೊಡಲಿಲ್ಲ, 41 ಓವರ್​​ಗಳಲ್ಲಿ 113 ರನ್​ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್​ಗಳನ್ನು ಉರುಳಿಸಿದರು. ಮರ್ನಸ್​ ಲಾಬುಶೇನ್​ 44 ರನ್​ ಬಾರಿಸಿ ಕ್ರೀಸ್​ನಲ್ಲಿ ಉಳಿದಿದ್ದಾರೆ. ಉಸ್ಮಾನ್ ಖ್ವಾಜಾ 18 ರನ್ ಬಾರಿಸಿದರೆ ಡೇವಿಡ್​ ವಾರ್ನರ್ 28 ರನ್​ಗಳಿಗೆ ಸೀಮಿತಗೊಂಡರು. ಸ್ಟೀವ್​ ಸ್ಮಿತ್​ ಗಳಿಕೆ 17 ರನ್​. ಇಂಗ್ಲೆಂಡ್ ವೇಗಿ ಮಾರ್ಕ್​ ವುಡ್​ 3 ವಿಕೆಟ್​ ಉರುಳಿಸಿ ಮಿಂಚಿದ್ದಾರೆ.

ಇದನ್ನೂ ಓದಿ : Ashes 2023: ಆ್ಯಶಸ್​​ ಟೆಸ್ಟ್​ ಸರಣಿಯಿಂದ ಹೊರಬಿದ್ದ ನಥಾನ್​ ಲಿಯೋನ್​

ಪಂದ್ಯ ಮುಕ್ತಾಯಕ್ಕೆ ಇನ್ನು ಎರಡು ದಿನಗಳು ಬಾಕಿ ಉಳಿದಿವೆ. ಆದರೆ, ಮುಂದಿನೆರಡು ದಿನಗಳ ಕಾಲ ಮಳೆಯಾಗುವ ಸೂಚನೆಯೂ ಇದೆ. ಅದೇ ರೀತಿ ಆಸ್ಟ್ರೇಲಿಯಾ ತಂಡದಲ್ಲಿ ಬಲಿಷ್ಠ ಬ್ಯಾಟರ್​ಗಳು ಇನ್ನೂ ಉಳಿದಿದ್ದಾರೆ. ಹೀಗಾಗಿ ಪಂದ್ಯ ಕುತೂಹಲದ ಘಟ್ಟದಲ್ಲಿದೆ.

Exit mobile version