ಲೀಡ್ಸ್: ಆ್ಯಶಸ್ ಸರಣಿಯ ಮೂರನೇ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದ್ದು ಆತಿಥೇಯ ಇಂಗ್ಲೆಂಡ್ ಗೆಲುವಿಗಾಗಿ ಎರಡನೇ ಇನಿಂಗ್ಸ್ನಲ್ಲಿ 251 ಬಾರಿಸಬೇಕಾಗಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಬೆನ್ ಸ್ಟೋಕ್ಸ್ ಬಳಗ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದ್ದು ಇನ್ನೂ 224 ರನ್ಗಳ ಹಿನ್ನಡೆಯಲಿದೆ. ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದೆ. ಅದರೆ, ಬೌಲಿಂಗ್ಗೆ ನೆರವಾಗುತ್ತಿರುವ ಹೆಡಿಂಗ್ಲೆ ಪಿಚ್ನಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು ಗೆಲುವು ಸಾಧಿಸಲು ಶ್ರಮ ವಹಿಸಬೇಕಾಗುತ್ತದೆ.
A rain-hit day at Headingley, but the Test match is well and truly on 🔥#WTC25 | #ENGvAUS 📝: https://t.co/CIqx6cW10r pic.twitter.com/QQCy8EiLet
— ICC (@ICC) July 8, 2023
ಮೂರನೇ ದಿನದಲ್ಲಿ ಆರಂಭದಲ್ಲಿ ಆಟ ಆರಂಭಕ್ಕೆ ಅಡಚಣೆ ಉಂಟಾಯಿತು. ತಡವಾಗಿ ಪಂದ್ಯ ಆರಂಭಗೊಂಡಿತು. ಆದಾಗ್ಯೂ ಇಂಗ್ಲೆಂಡ್ ಬೌಲರ್ಗಳು ತಮ್ಮ ಪಾರಮ್ಯ ಮುಂದುವರಿಸಿ ಪ್ರವಾಸಿ ತಂಡವನ್ನು 224 ರನ್ಗಳಿಗೆ ಕಟ್ಟಿ ಹಾಕಿತು.
ಎರಡನೇ ದಿನವಾದ ಶುಕ್ರವಾರದ ಆಟ ಮುಗಿದ ವೇಳೆ ಆಸ್ಟ್ರೇಲಿಯಾ ತಂಡ 4 ವಿಕೆಟ್ ನಷ್ಟಕ್ಕೆ 116 ರನ್ ಬಾರಿಸಿತು. ಆದರೆ, ಶನಿವಾರ ಬೆಳಗ್ಗಿನ ಅವಧಿಯಲ್ಲಿ ಪಂದ್ಯವೇ ನಡೆಯಲಿಲ್ಲ. ಸತತವಾಗಿ ಮಳೆ ಸುರಿದ ಕಾರಣ ಮೊದಲ ಸೆಷನ್ ನಷ್ಟವಾಯಿತು. ಬಳಿಕ ನಿಧಾನವಾಗಿ ಪಂದ್ಯ ಆರಂಭವಾಯಿತು. ಎರಡನೇ ದಿನ 18 ರನ್ ಗಳಿಸಿದ್ದ ಟ್ರಾವಿಡ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ( 17 ರನ್) ಸ್ವಲ್ಪ ಹೊತ್ತು ಆಟ ಮುಂದುವರಿಸಿದರು. ಆರೆ, ವೋಕ್ಸ್ ಎಸೆತಕ್ಕೆ ಮಾರ್ಷ್ ಔಟಾದರು. ಬಳಿಕ ಬಂದ ಅಲೆಕ್ಸ್ ಕ್ಯೇರಿ 5 ರನ್ಗಳಿಗೆ ಸೀಮಿತಗೊಂಡರು. ಮಿಚೆಲ್ ಸ್ಟಾರ್ಕ್ 16 ರನ್ ಕೊಡುಗೆ ಕೊಟ್ಟರು. ಪ್ಯಾಟ್ ಕಮಿನ್ಸ್ 1 ರನ್ಗೆ ಔಟಾದರೆ, ಟಾಡ್ ಮರ್ಫಿ 11 ರನ್ ಬಾರಿಸಿದ್ದಾರೆ.
ಒಂದು ಕಡೆ ವಿಕೆಟ್ಗಳು ಪತನಗೊಳ್ಳುತ್ತಿರುವ ನಡುವೆಯೂ ಕ್ರೀಸ್ಗೆ ಅಂಟಿಕೊಂಡು ಆಡಿದ ಟ್ರಾವಿಸ್ ಹೆಡ್ ತಮ್ಮ ಅರ್ಧ ಶತಕ ಬಾರಿಸಿದರು. ಅಲ್ಲದೆ 77 ರನ್ ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ಗುರಿಯನ್ನು ಒಡ್ಡಲು ನೆರವಾದರು.
ಇಂಗ್ಲೆಂಡ್ ಬೌಲಿಂಗ್ ಪರ ಸ್ಟುವರ್ಟ್ ಬ್ರಾಡ್ ಹಾಗೂ ಕ್ರಿಸ್ ವೋಕ್ಸ್ ತಲಾ 3 ವಿಕೆಟ್ ಕಬಳಿಸಿದರು. ಮಾರ್ಕ್ ವುಡ್ ಹಾಗೂ ಮೊಯೀನ್ ಅಲಿ ತಲಾ 2 ವಿಕೆಟ್ ಪಡೆದರು.
ವೇಗದ ಆಟ
ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಸವಾಲಿನ ಗುರಿಯನ್ನು ಬೆನ್ನಟ್ಟುವಲ್ಲಿ ವೇಗದ ಆಟ ಆರಂಭಿಸಿದರು. ಬೆನ್ ಡಕೆಟ್ 18 ರನ್ ಹಾಗೂ ಜಾಕ್ ಕ್ರಾವ್ಲಿ ಅವರ 9 ರನ್ಗಳ ನೆರವಿನಿಂದ 27 ರನ್ ಬಾರಿಸಿದೆ.