ಪರ್ತ್ : ಸ್ಯಾಮ್ ಕರ್ರನ್ (೧೦ ರನ್‌ಗಳಿಗೆ ೫ ವಿಕೆಟ್) ಅವರ ಮಾರಕ ಬೌಲಿಂಗ್ ದಾಳಿಯ ನೆರವಿನೊಂದಿಗೆ ಮಿಂಚಿದ ಇಂಗ್ಲೆಂಡ್ ತಂಡ ಟಿ೨೦ ವಿಶ್ವ ಕಪ್‌ನ (T20 World Cup) ಗುಂಪು ೧ರ ತನ್ನ ಮೊದಲ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ೫ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಇಂಗ್ಲೆಂಡ್ ಪರ ಬ್ಯಾಟಿಂಗ್‌ನಲ್ಲಿ ಲಿಯಾಮ್ ಲಿವಿಂಗ್‌ಸ್ಟನ್ ಅಜೇಯ ೨೯ ರನ್ ಬಾರಿಸಿದರು.
ಪರ್ತ್ ಸ್ಟೇಡಿಯಮ್‌ನಲ್ಲಿ ನಡೆದ ದಿನದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಫೀಲ್ಡಿಂಗ್ ಅಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಅಫಘಾನಿಸ್ತಾನ ತಂಡ ೧೯.೪ ಓವರ್‌ಗಳಲ್ಲಿ ೧೧೨ ರನ್‌ಗಳಿಗೆ ಆಲ್‌ಔಟ್ ಆಯಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ೧೮.೧ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೧೩ ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಮೊದಲು ಬ್ಯಾಟ್ ಮಾಡಿದ ಆಫ್ಘನ್ ತಂಡ ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿತು. ಆದಾಗ್ಯೂ ಇಬ್ರಾಹಿಮ್ ಜದ್ರಾನ್ (೩೨) ಹಾಗೂ ಉಸ್ಮಾನ್ ಘನಿ (೩೦) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾದರು. ಆದರೆ, ಉಳಿದ ಬ್ಯಾಟರ್‌ಗಳಿಂದ ಹೆಚ್ಚಿನ ನೆರವು ಲಭಿಸಲಿಲ್ಲ.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೂ ಇಂಗ್ಲೆಂಡ್ ಬೌಲರ್‌ಗಳು ಬೆದರಿಕೆಯೊಡ್ಡಿದರು. ಆದರೆ, ಲಿವಿಂಗ್‌ಸ್ಟನ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಸ್ಕೋರ್ ವಿವರ
ಅಫಘಾನಿಸ್ತಾನ : ೧೯.೪ ಓವರ್‌ಗಳಲ್ಲಿ ೧೧೨ (ಇಬ್ರಾಹಿಮ್ ಜದ್ರಾನ್ ೩೨, ಉಸ್ಮಾನ್ ಘನಿ ೩೦, ಸ್ಯಾಮ್ ಕರ್ರನ್ ೧೦ಕ್ಕೆ೫).
ಇಂಗ್ಲೆಂಡ್: ೧೮.೧ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೧೩ (ಲಿಯಾಮ್ ಲಿವಿಂಗ್‌ಸ್ಟನ್ ೨೯, ಅಲೆಕ್ಸ್ ಹೇಲ್ಸ್ ೧೯; ಮೊಹಮ್ಮದ್ ನಬಿ ೧೬ಕ್ಕೆ೧).
ಇದನ್ನೂ ಓದಿ | T20 World Cup | ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ 89 ರನ್ ಹೀನಾಯ ಸೋಲು