Site icon Vistara News

World Record | ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ಇಂಗ್ಲೆಂಡ್‌ ತಂಡ; ಏನದು ನೂತನ ದಾಖಲೆ?

Team india

ರಾವಲ್ಪಿಂಡಿ : ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಬಳಗ ವಿಶ್ವ ದಾಖಲೆಯೊಂದನ್ನು ಸೃಷ್ಟಿಸಿದೆ. ಈ ಮೂಲಕ ಇದುವರೆಗೆ ಭಾರತದ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದೆ.

ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್ ತಂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಂತೆಯೇ ಬೆಳಗ್ಗಿನ ಅವಧಿಯ ಆಟದಲ್ಲಿ ೨೭ ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ ೧೭೪ ರನ್‌ ಬಾರಿಸಿತು. ಇದು ಟೆಸ್ಟ್‌ ಮಾದರಿಯಲ್ಲಿ ತಂಡವೊಂದು ಮೊದಲ ಅವಧಿಯಲ್ಲಿ ಬಾರಿಸಿದ ಗರಿಷ್ಠ ರನ್‌. ಈ ದಾಖಲೆ ಈ ಹಿಂದೆ ಭಾರತ ತಂಡದ ಹೆಸರಿನಲ್ಲಿತ್ತು. ೨೦೧೮ರಲ್ಲಿ ಭಾರತ ತಂಡ ಅಫಘಾನಿಸ್ತಾನ ವಿರುದ್ಧ ಬೆಳಗ್ಗಿನ ಅವಧಿಯಲ್ಲಿ ವಿಕೆಟ್‌ ನಷ್ಟವಿಲ್ಲದೆ ೧೫೮ ರನ್‌ ಬಾರಿಸಿತ್ತು.

ಇಂಗ್ಲೆಂಡ್ ತಂಡದ ಮೊದಲು ಮೂರು ಆಟಗಾರರು ಶತಕ ಬಾರಿಸಿದ್ದಾರೆ. ಜಾಕ್‌ ಕ್ರಾವ್ಲಿ ೧೨೨ ರನ್‌ ಬಾರಿಸಿದ್ದರೆ, ಬೆನ್‌ ಡಕೆಟ್ ೧೦೭ ರನ್‌ಬಾರಿಸಿದ್ದಾರೆ. ಒಲಿ ಪೋಪ್‌ ಕೂಡ ೧೦೮ ರನ್‌ ಗಳಿಸಿದ್ದಾರೆ.

ಇದನ್ನೂ ಓದಿ | IND VS BANGLA | ಢಾಕಾ ತಲುಪಿದ ಟೀಮ್​ ಇಂಡಿಯಾ; ಭಾನುವಾರ ಮೊದಲ ಏಕದಿನ ಕದನ

Exit mobile version