ಲಂಡನ್: 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ತಂಡ(IND vs ENG) ಭಾರತಕ್ಕೆ ಪ್ರವಾಸ ಬರಲಿದೆ. ಜತೆಗೆ ಇಂಗ್ಲೆಂಡ್ನ ಜನಪ್ರಿಯ ಬಾಣಸಿಗ ಒಮರ್ ಮೆಜಿಯಾನ್ ಅವರನ್ನು ಕೂಡ ಭಾರತಕ್ಕೆ ಕರೆತರಲಿದೆ. 7 ವಾರಗಳ ಪ್ರವಾಸದ ವೇಳೆ ಆಟಗಾರರು, ಅನಾರೋಗ್ಯಕ್ಕೀಡಾಗುವುದನ್ನು ತಪ್ಪಿಸುವ ಸಲುವಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದೆ.
ಕಳೆದ ವರ್ಷ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಆಡಲು ಪಾಕ್ಗ ತೆರಳಿದ್ದ ವೇಳೆಯೂ ಇಂಗ್ಲೆಂಡ್ ತಂಡ ಈ ಬಾಣಸಿಗನನ್ನು ಕರೆದೊಯ್ದಿತ್ತು. ಆದರೆ ಇಸ್ಲಾಮಾಬಾದ್ನ ಮೊದಲ ಟೆಸ್ಟ್ಗೆ ಮುನ್ನ ತಂಡದ ಕೆಲ ಆಟಗಾರರು ಮಾತ್ರವಲ್ಲದೆ, ಸ್ವತಃ ಬಾಣಸಿಗ ಕೂಡ ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯಕ್ಕೀಡಾಗಿದ್ದರು.
ಭಾರತದಲ್ಲಿನ ಹೋಟೆಲ್ ವ್ಯವಸ್ಥೆಗಳ ನೈರ್ಮಲ್ಯದ ಬಗ್ಗೆ ಇಸಿಬಿಗೆ ಯಾವುದೇ ತಕರಾರು ಇಲ್ಲ. ಬದಲಾಗಿ, ತಂಡದ ಎಲ್ಲ ಆಟಗಾರರು ಪೌಷ್ಠಿಕ ಮತ್ತು ತಮ್ಮ ನೆಚ್ಚಿನ ಆಹಾರಗಳನ್ನೇ ಸೇವಿಸುವಂತಾಗಲು ಈ ಕ್ರಮ ಕೈಗೊಂಡಿರುವುದಾಗಿ ಇಸಿಬಿ ಸ್ಪಷ್ಟಪಡಿಸಿದೆ. ಸುಮಾರು ಏಳು ವಾರಗಳ ಕಾಲ ಇಂಗ್ಲೆಂಡ್ ಆಟಗಾರರು ಭಾರತದಲ್ಲಿರುವ ಕಾರಣದಿಂದ ಅವರಿಗೆ ಇಲ್ಲಿನ ಆಹಾರ ಪದ್ಧತಿಗೆ ಹೊಂದಿಕೊಳ್ಳುವುದು ಕಷ್ಟವಾದೀತು ಎನ್ನುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ.
Predict India Vs England Test series results? pic.twitter.com/quhcK44OdX
— Mufaddal Vohra (@mufaddal_vohra) January 6, 2024
ಇದನ್ನೂ ಓದಿ WTC 2023-25 Points Table: ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲೂ ಭಾರತಕ್ಕೆ ಆಘಾತವಿಕ್ಕಿದ ಆಸ್ಟ್ರೇಲಿಯಾ
ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ಒಟ್ಟು 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಜನವರಿ 25ರಿಂದ ಹೈದರಾಬಾದ್ನಲ್ಲಿ ನಡೆಯಲಿದೆ. ಬಳಿಕದ 4 ಟೆಸ್ಟ್ಗಳನ್ನು ಕ್ರಮವಾಗಿ ವಿಶಾಖಪಟ್ಟಣ (ಫೆ.2-6), ರಾಜ್ಕೋಟ್ (ಫೆ.15-19), ರಾಂಚಿ (ಫೆ. 23-27) ಮತ್ತು ಧರ್ಮಶಾಲಾದಲ್ಲಿ (ಮಾ.7-11) ಆಡಲಿದೆ.
ವೇಳಾಪಟ್ಟಿ
ಜನವರಿ 25 ರಿಂದ 29- ಮೊದಲ ಟೆಸ್ಟ್ ಪಂದ್ಯ (ಹೈದರಾಬಾದ್)
ಫೆಬ್ರವರಿ 2 ರಿಂದ 6- ಎರಡನೇ ಟೆಸ್ಟ್ ಪಂದ್ಯ (ವಿಶಾಖಪಟ್ಟಣಂ)
ಫೆಬ್ರವರಿ 15 ರಿಂದ 19- ಮೂರನೇ ಟೆಸ್ಟ್ ಪಂದ್ಯ (ರಾಜ್ಕೋಟ್)
ಫೆಬ್ರವರಿ 23 ರಿಂದ 27- ನಾಲ್ಕನೇ ಟೆಸ್ಟ್ ಪಂದ್ಯ (ರಾಂಚಿ)
ಮಾರ್ಚ್ 7 ರಿಂದ 11- ಐದನೇ ಟೆಸ್ಟ್ ಪಂದ್ಯ (ಧರ್ಮಶಾಲಾ)
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ),ಜೋ ರೂಟ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್, ಗಸ್ ಅಟ್ಕಿನ್ಸನ್, ರೆಹಾನ್ ಅಹ್ಮದ್, ಜಾನಿ ಬೇರ್ ಸ್ಟೋ, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಓಲಿ ಪೋಪ್, ಓಲಿ ರಾಬಿನ್ಸನ್.