ಎಜ್‌ಬಾಸ್ಟನ್: ಇಂಗ್ಲೆಂಡ್ ವಿರುದ್ಧದ ಐದನೇ ಪಂದ್ಯಕ್ಕೆ (England Tour) ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅಲಭ್ಯರಾಗಿದ್ದಾರೆ. ಹೀಗಾಗಿ ಉಪನಾಯಕ ಜಸ್‌ಪ್ರಿತ್ ಬುಮ್ರಾಗೆ ನಾಯಕತ್ವದ ಹೊಣೆ ವಹಿಸಲಾಗಿದೆ.
ರೋಹಿತ್ ಶರ್ಮ ಅವರು ಅಭ್ಯಾಸ ಪಂದ್ಯದ ನಡುವೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆದರೆ ಅವರು ಸಂಪೂರ್ಣ ಸುಧಾರಿಸದ ಕಾರಣ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.
ಶುಕ್ರವಾರ ಪಂದ್ಯ ಆರಂಭವಾಗಲಿದ್ದು, ಭಾರತ ತಂಡದ ಮ್ಯಾನೇಜ್ಮೆಂಟ್ ಬುಧವಾರ ಗ್ರೌಂಡ್ ಮೀಟಿಂಗ್ ನಡೆಸಿದೆ. ಈ ವೇಳೆ ರೋಹಿತ್ ಪಂದ್ಯಕ್ಕೆ ಲಭ್ಯರಾಗುವುದಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಜಸ್‌ಪ್ರಿತ್ ಬುಮ್ರಾಗೆ ನಾಯಕತ್ವ ವಹಿಸಿಕೊಳ್ಳುವುದಕ್ಕೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಯಾಂಕ್ ಅಗರ್ವಾಲ್ ಅವರನ್ನು ರೋಹಿತ್ ಶರ್ಮಗೆ ಬ್ಯಾಕ್‌ಅಪ್ ಆಟಗಾರನನ್ನಾಗಿ ಇಂಗ್ಲೆಂಡ್‌ಗೆ ಕರೆಸಿಕೊಳ್ಳಲಾಗಿತ್ತು. ರೋಹಿತ್ ಆಡದಿದ್ದರೆ ಶುಬ್ಮನ್ ಗಿಲ್ ಜತೆ ಅವರೇ ಇನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: Team India ನಾಯಕ ರೋಹಿತ್ ಶರ್ಮಗೆ ಕೊರೊನಾ